ಹುಬ್ಬಳ್ಳಿ –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಪೌರ ಕಾರ್ಮಿಕರ ದಿನಾಚರಣೆ ಆಚರಣೆ – ಮೇಯರ್ ಜ್ಯೋತಿ ಪಾಟೀಲ್,ಉಪಮೇಯರ್ ಸಂತೋಷ ಚವ್ಹಾಣ,ಆಯುಕ್ತ ಡಾ ರುದ್ರೇಶ ಘಾಳಿ,ಸೇರಿದಂತೆ ಹಲವರು ಉಪಸ್ಥಿತಿ…..
ಪೌರ ಕಾರ್ಮಿಕರ ದಿನಾಚರಣೆಯನ್ನು ಹುಬ್ಬಳ್ಳಿಯಲ್ಲೂ ಆಚರಣೆ ಮಾಡಲಾಯಿತು.ಹೌದು ಅವಳಿ ನಗರದ ಸ್ವಚ್ಚತೆಗೆ ಹಗಲಿರುಳು ಶ್ರಮಿಸುತ್ತಿರುವ ಪೌರ ಕಾರ್ಮಿಕರ ದಿನಾಚರಣೆಯನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಆಚರಣೆ ಮಾಡಲಾ ಯಿತು
ನಗರದ ಹೆಮ್ಮೆಯ ಸ್ವಚ್ಛತೆಯ ರಾಯಭಾರಿಗಳಾದ ಪೌರ ಕಾರ್ಮಿಕರ ದಿನಾಚರಣೆಯನ್ನು ಪಾಲಿಕೆಯಿಂದ ಹುಬ್ಬಳ್ಳಿಯಲ್ಲಿ ಆಚರಿಸಲಾಯಿತು.ನಗರದ ಡಾ ಡಿಎಸ್ ಕರ್ಕಿ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಮೇಯರ್ ಶ್ರೀಮತಿ ಜ್ಯೋತಿ ಪಾಟೀಲ್,ಉಪ ಮೇಯರ್ ಸಂತೋಷ ಚವ್ಹಾಣ್ ಸೇರಿದಂತೆ ಹಲವು ಗಣ್ಯರು ಚಾಲನೆ ನೀಡಿದರು.ಇದೇ ವೇಳೆ ಸ್ವಚ್ಚತೆಗೆ ಸದಾ ಶ್ರಮಿಸುತ್ತಾ ಭಾಗಿಯಾಗಿ
ಅವಳಿನಗರದ ನಿಜವಾದ ಹೀರೋಗಳಿಗೆ ಕೃತಜ್ಞತೆ ಯನ್ನು ಸಲ್ಲಿಸಲಾಯಿತು.ಇದೇ ವೇಳೆ ನಿವೃತ್ತ ಹಲವು ಪೌರ ಕಾರ್ಮಿಕ ಶ್ರಮ ಜೀವಿಗಳಿಗೆ ಪಾಲಿಕೆಯಿಂದ ಸನ್ಮಾನವನ್ನು ಮಾಡಿ ಗೌರವಿಸಲಾಯಿು.ಇನ್ನೂ ನಗರದ ಸ್ವಚ್ಛತೆಗಾಗಿ ದಿನರಾತ್ರಿ ದುಡಿಯುವ ಈ ಪೌರ ಕಾರ್ಮಿಕರ ಶ್ರಮವನ್ನು ಮಹಾಪೌರರಾದ ಶ್ರೀಮತಿ ಜ್ಯೋತಿ ಪಾಟೀಲ್,ಉಪ ಮೇಯರ್ ಸಂತೋಷ ಚವ್ಹಾಣ್,
ವಿರೋಧ ಪಕ್ಷದ ನಾಯಕರಾದ ಇಮ್ರಾನ್ ಯಲಿಗಾರ್, ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ರಾಜಣ್ಣ ಕೊರವಿ, ಪಾಲಿಕೆ ಆಯುಕ್ತರಾದ ರುದ್ರೇಶ್ ಘಾಳಿ, ಮುಖ್ಯ ಲೆಕ್ಕಾಧಿಕಾರಿಗಳಾದ ಶಂಕರಾನಂದ ಬನಶಂಕರಿ,ವಿಜಯಕುಮಾರ್,ಪಾಲಿಕೆಯ ಸದಸ್ಯರಾದ ಬೀರಪ್ಪ ಖಂಡೇಕರ, ಶ್ರೀಮತಿ ಸೀಮಾ ಮೊಗಲಿ ಶೆಟ್ಟರ, ಶ್ರೀಮತಿ ಚಂದ್ರಿಕಾ ಮೇಸ್ತ್ರಿ, ಶ್ರೀ ಶ್ರೀನಿವಾಸ ಬೆಳದಡಿ , SWM ಮುಖ್ಯಸ್ಥರಾದ ಸಂತೋಷ ಯರಂಗಾಳಿ , ಪರಿಸರ ಅಭಿಯಂತರರಾದ ಶ್ರೀಧರ ಟಿ.ಎನ್, ಶ್ಲಾಘಿಸಿದರು.
ಈ ಮಧ್ಯೆ ಈ ಒಂದು ಕಾರ್ಯಕ್ರಮದಲ್ಲಿ ಪಾಲಿಕೆಯ ಅಧಿಕಾರಿಗಳು ಮತ್ತು ನೂರಾರು ಪೌರ ಕಾರ್ಮಿಕರು ಉಪಸ್ಥಿತರಿದ್ದರು.
ಪ್ರಮೋದ್ ಕಪಲಿ ಸುದ್ದಿ ಸಂತೆ ನ್ಯೂಸ್ ಧಾರವಾಡ……