ಧಾರವಾಡ –
ಧಾರವಾಡದ ಸೂಪರ್ ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರ ಸಮಸ್ಯೆ ಆಲಿಸಿದ ಪಾಲಿಕೆಯ ಟೀಮ್ – ವ್ಯಾಪಾರಿಗಳ ಸಮಸ್ಯೆ ಆಲಿಸಿದ ಮೇಯರ್ ಜ್ಯೋತಿ ಪಾಟೀಲ್,ಆಯುಕ್ತ ರುದ್ರೇಶ ಘಾಳಿ
ಧಾರವಾಡದ ಸೂಪರ್ ಮಾರುಕಟ್ಟೆಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮೇಯರ್ ಶ್ರೀಮತಿ ಜ್ಯೋತಿ ಪಾಟೀಲ್ ಪಾಲಿಕೆಯ ಆಯುಕ್ತ ಡಾ ರುದ್ರೇಶ ಘಾಳಿ ಭೇಟಿ ನೀಡಿದರು.ಧಾರವಾಡದ ಹೃದಯ ಭಾಗದಲ್ಲಿರುವ ಈ ಒಂದು ಮಾರಕಟ್ಟೆ ವ್ಯಾಪರ ವಹಿವಾಟಿಗೆ ಹೆಸರಾಗಿದ್ದು ನೂರಾರು ವ್ಯಾಪಾರಿಗಳಿಗೆ ಈ ಒಂದು ಮಾರಕಟ್ಟೆ ಆಸರೆಯಾಗಿದ್ದು ಹೀಗಾಗಿ ಈ ಒಂದು ಮಾರಕಟ್ಟೆಯಲ್ಲಿನ ಸಮಸ್ಯೆ ಸೇರಿದಂತೆ ವ್ಯಾಪಾರಿಗಳ ಬೇಡಿಕೆಗಳ ಕುರಿತಂತೆ ಪಾಲಿಕೆಯ ಟೀಮ್ ಭೇಟಿ ನೀಡಿ ಪರಿಶೀಲನೆ ಮಾಡಿದ್ರು.
ಸೂಪರ್ ಮಾರುಕಟ್ಟೆ ಮಹಾಪೌರರಾದ ಶ್ರೀಮತಿ ಜ್ಯೋತಿ ಪಾಟೀಲ್ ಆಯುಕ್ತರಾದ ರುದ್ರೇಶ್ ಘಾಳಿ ಅವರ ಜೊತೆ ಭೇಟಿ ನೀಡಿ ಅಪಾರ ಮಳೆಯಿಂದಾಗಿ ವ್ಯಾಪಾರಸ್ಥರಿಗೆ ತೊಂದರೆಯಾಗುತ್ತಿದ್ದು ಶೆಡ್ ನಿರ್ಮಿಸಿಕೊಡುವಂತೆ ವ್ಯಾಪಾರಸ್ಥರು ಕೇಳಿಕೊಂ ಡರು.ತಾತ್ಕಾಲಿಕ ಶೆಡ್ ನಿರ್ಮಾಣ ಮತ್ತು ಹಲವು ಸಮಸ್ಯೆಗಳ ಬಗ್ಗೆ ಈ ಸಂದರ್ಭದಲ್ಲಿ ಚರ್ಚಿಸಲಾಯಿತು.
ಈ ಒಂದು ಸಂದರ್ಭದಲ್ಲಿ ಪಾಲಿಕೆಯ ಸದಸ್ಯರು, ಅಧಿಕಾರಿಗಳು ಶಹರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳಾದ ಕಾಡದೇವರಮಠ,ವಿನೋದ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಪ್ರಮೋದ್ ಕಪಲಿ ಸುದ್ದಿ ಸಂತೆ ನ್ಯೂಸ್ ಧಾರವಾಡ…..