ಧಾರವಾಡ ಜಿಲ್ಲೆಯ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಭೇಟಿ ಪರಿಶೀಲನೆ

ಧಾರವಾಡ –

ವಾಡಿಕೆಗಿಂತ ಧಾರವಾಡ ಜಿಲ್ಲೆಯಲ್ಲಿ 112.8 ಮಿ.ಮೀ. ಅಧಿಕ ಮಳೆ, ಪರಿಹಾರ ಕಾರ್ಯಕ್ಕೆ ಜಿಲ್ಲೆಗೆ 7.5 ಕೋಟಿ ರೂಪಾಯಿ ಬಿಡುಗಡೆ ನವಂಬರ್ 30 ರೊಳಗೆ ಪರಿಹಾರ ವಿತರಣೆ ಕಾರ್ಯ ಸಚಿವ ಶಂಕರ ಪಾಟೀಲ ಮುನೇನ ಕೊಪ್ಪ

ಹೌದು ಕಳೆದ ವಾರ ಅಕಾಲಿಕವಾಗಿ ಸುರಿದ ಭಾರಿ ಮಳೆ ಜಿಲ್ಲೆಯ ರೈತರ ಬೆಳೆಗಳು ಹಾಗೂ ಮನೆಗಳಿಗೆ ಹಾನಿ ಉಂಟುಮಾಡಿದೆ.28.4 ಮಿ.ಮೀ.ವಾಡಿಕೆ ಮಳೆಗೆ 112.8 ಮಿ.ಮೀ. ಅಧಿಕ ಮಳೆಯಾಗಿದೆ.1 ಲಕ್ಷ ಹೆಕ್ಟೇರಗಿಂತಲೂ ಅಧಿಕ ಕೃಷಿ ಹಾಗೂ ತೋಟಗಾರಿಕಾ ಬೆಳೆಗಳು ಹಾನಿಯಾ ಗಿವೆ. ಮನೆಗಳಿಗೂ ಕೂಡಾ ಹಾನಿಯಾಗಿದೆ.

ಪರಿಹಾರ ಕಾರ್ಯಕ್ಕೆ ಜಿಲ್ಲೆಗೆ 7.5 ಕೋಟಿ ರೂ.ಬಿಡುಗಡೆ ಯಾಗಿದೆ. ನ.30 ರೊಳಗೆ ಸಂತ್ರಸ್ತರ ಬ್ಯಾಂಕ ಖಾತೆಗಳಿಗೆ ಪರಿಹಾರ ಧನ ನೇರವಾಗಿ ಜಮೆ ಮಾಡಲು ಕ್ರಮ ಕೈಗೊಳ್ಳ ಲಾಗಿದೆ ಎಂದು ಕೈಮಗ್ಗ, ಜವಳಿ, ಕಬ್ಬು ಅಭಿವೃದ್ಧಿ ಹಾಗೂ ಸಕ್ಕರೆ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು.

ಅತಿವೃಷ್ಠಿಯಿಂದ ಹಾನಿಗೊಳಗಾದ ಮನಸೂರು ಹಾಗೂ ನಿಗದಿ ಗ್ರಾಮಗಳ ಮನೆ ಹಾಗೂ ರೈತರ ಗದ್ದೆಗಳಿಗೆ ಭೇಟಿ ನೀಡಿ, ಸಂತ್ರಸ್ತರಿಗೆ ಧೈರ್ಯ ತುಂಬಿದರು. ಮನಸೂರಿನ ಕರೆಪ್ಪ ಸಿದ್ದಪ್ಪ ಅರಳಿಕಟ್ಟಿ ಹಾಗೂ ಸಿದ್ದವ್ವ ಈರಪ್ಪ ಯರಿಹ ಕ್ಕಲ ಅವರ ಹಾನಿಗೊಳಗಾದ ಮನೆಗಳನ್ನು ವೀಕ್ಷಿಸಿ ತ್ವರಿತ ವಾಗಿ ಪರಿಹಾರ ಬಿಡುಗಡೆ ಮಾಡಲಾಗುವುದು, ಮನೆಯ ನ್ನು ಭದ್ರವಾಗಿ ದುರಸ್ತಿ ಮಾಡಿಕೊಳ್ಳಲು ಸರ್ಕಾರ ನೆರವು ನೀಡಲಿದೆ ಎಂದರು.

ನಂತರ ಮಾತನಾಡಿದ ಅವರು ಬೆಳೆ ಹಾನಿಗೆ ಈಡಾದ ಜಿಲ್ಲೆಯ 6146 ರೈತರಿಗೆ 4 ಕೋಟಿ 7 ಲಕ್ಷ ರೂ.ಗಳ ಪರಿಹಾರ ಪಾವತಿಸಲಾಗಿದೆ.ಕಳೆದ ವಾರ ಸುರಿದ ಮಳೆ ಯಿಂದ 4 ಸಾವಿರ ಕೋಳಿ,2 ಜಾನುವಾರುಗಳು ಪ್ರಾಣ ಕಳೆದುಕೊಂಡಿವೆ.ಯಾವುದೇ ಮಾನವ ಜೀವ ಹಾನಿಯಾ ಗಿಲ್ಲದಿರುವುದು ಸಮಾಧಾನಕರದ ಸಂಗತಿಯಾಗಿದೆ. ರಾಜ್ಯದ ಅತಿವೃಷ್ಠಿ ಹಾನಿಗೆ ಕೇಂದ್ರ ತ್ವರಿತ ನೆರವು ನೀಡು ತ್ತಿದೆ.ಮನೆಗಳನ್ನು ಕಳೆದುಕೊಂಡವರು ಪೂರ್ಣವಾಗಿ ಮನೆಗಳನ್ನು ಕೆಡವಿ ಪುನರ್ ನಿರ್ಮಿಸಿಕೊಳ್ಳಲು ಬಯಸಿ ದರೆ ಸಮಿಕ್ಷೆ ಆಧರಿಸಿ ಹಾನಿಯ ಪ್ರಮಾಣಕ್ಕೆ ತಕ್ಕಂತೆ ಪರಿಹಾರ ಒದಗಿಸಲಾಗುವುದು. ಬೆಳೆ ಹಾನಿಗೆ ಒಳಗಾದ ವರು 72 ಗಂಟೆಯೊಳಗೆ ವಿಮಾ ಕಂಪನಿಗಳಿಗೆ ಮಾಹಿತಿ ನೀಡುವ ಷರತ್ತನ್ನು ಸಡಿಲಿಸಲು ಮನವಿ ಮಾಡಲಾಗಿದೆ ಎಂದರು.

ಈ ಒಂದು ಸಮಯದಲ್ಲಿ ಕಲಘಟಗಿ ಶಾಸಕ ಸಿ.ಎಂ. ನಿಂಬಣ್ಣವರ,ಮನಸೂರ ಗ್ರಾ.ಪಂ ಅಧ್ಯಕ್ಷ ರಮೇಶ ಕುಂಬಾರ ಸದಸ್ಯ ಕರೆಪ್ಪ ಎತ್ತಿನಗುಡ್ಡ, ಉಪವಿಭಾಗಾ ಧಿಕಾರಿ ಡಾ.ಬಿ.ಗೋಪಾಲಕೃಷ್ಣ, ತಹಶೀಲದಾರ ಡಾ. ಸಂತೋಷಕುಮಾರ ಬಿರಾದಾರ ಸೇರಿದಂತೆ ಗ್ರಾಮಸ್ಥರು, ಅಧಿಕಾರಿಗಳು ಉಪಸ್ಥಿತರಿದ್ದರು.


Leave a Reply

Your email address will not be published. Required fields are marked *

error: Content is protected !!
%d bloggers like this: