SSLC ಪರೀಕ್ಷೆ ಯಲ್ಲಿ ಶಾಸಕರ ಚಾಲೆಂಜ್ ಗೆದ್ದ ಸರ್ಕಾರಿ ಶಾಲಾ ವಿದ್ಯಾರ್ಥಿನಿ – ಕೊಟ್ಟ ಚಾಲೆಂಜ್ ಏನು ಸರ್ಕಾರಿ ಶಾಲೆಯಲ್ಲಿ ಓದಿ ಮಾಡಿದ ಸಾಧನೆ ಒಮ್ಮೆ ನೋಡಿ

ಮೈಸೂರು –

ಇದೊಂದು ಶಾಸಕರು ಕೊಟ್ಟ ಚಾಲೆಂಜ್ ನ್ನು ಗೆದ್ದ ವಿದ್ಯಾರ್ಥಿ ಯೊಬ್ಬಳ ಕಥೆ ಹೌದು ಏಳನೇ ತರಗತಿಯಲ್ಲಿ ಓದುವಾಗ ಶಾಲೆಗೆ ಶಾಸಕ ಎಸ್.ಎ.ರಾಮದಾಸ್ ಭೇಟಿ ನೀಡಿದ್ದರು.ಅಂದು ಸರ್ಕಾರಿ ಶಾಲೆಗಳಲ್ಲಿ ಓದುವ,ಸ್ವಂತ ಮನೆ ಇಲ್ಲದ ವಿದ್ಯಾರ್ಥಿಗಳು SSLC ಪರೀಕ್ಷೆಯಲ್ಲಿ 625ಕ್ಕೆ 625 ಅಂಕ ಪಡೆದರೆ ಮನೆ ಕೊಡುವುದಾಗಿ ಹೇಳಿದ್ದರು ಶಾಸಕರ ಮಾತನ್ನು ಸವಾಲಾಗಿ ಆಗಿ ಸ್ವೀಕರಿಸಿ ಸದ್ಯ 625 ಅಂಕಗಳನ್ನು ಪಡೆದು ಇತತರಿಗೆ ಮಾದರಿಯಾಗಿ ಪ್ರೇರಣೆ ಯಾಗಿದ್ದಾರೆ ಮೈಸೂರಿನ ವಿದ್ಯಾರ್ಥಿನಿ ಎಂ.ಜಿ.ಏಕತಾ

ಮೈಸೂರಿನ ಸರ್ಕಾರಿ ಆದರ್ಶ ವಿದ್ಯಾಲಯದ(ಕೇಂದ್ರ ಪ್ರಾಯೋಜಿತ)ವಿದ್ಯಾರ್ಥಿನಿ ಏಕತಾ ಎಂ.ಜಿ.ಮಧ್ಯಮ ಕುಟುಂಬದ ಹೆಣ್ಣು ಮಗಳು.ತಂದೆ ಎಂ.ಸಿ.ಗಣಪತಿ ಎಲ್‍ಐಸಿ ಏಜೆಂಟ್,ತಾಯಿ ಗೃಹಿಣಿ ಎಂ.ಎಸ್.ಗಂಗಮ್ಮ. ಈಗಲೂ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು.ಪೂರ್ಣ ಅಂಕ ಪಡೆದರೆ ಸ್ವಂತ ಮನೆ ಸಿಗುತ್ತದೆಂಬ ಆಸೆಯಲ್ಲಿ ಓದಿದೆ,ಗುರಿ ತಲುಪಿದೆ ಎಂಬ ಖುಷಿ ಮಾತನ್ನು ಹೇಳು ತ್ತಿದ್ದಾರೆ ಏಕತಾ.

ಪ್ರಾಥಮಿಕ ಶಿಕ್ಷಣವನ್ನು ಐಸಿಎಸ್ ಪಠ್ಯಕ್ರಮದಲ್ಲಿ ಪ್ರಿನ್ಸಿ ಪಬ್ಲಿಕ್ ಶಾಲೆಯಲ್ಲಿ ಓದುತ್ತಿದ್ದೆ.ಆದರೆ ಶಾಲೆ ಶುಲ್ಕ ಪಾವತಿ ಸಲು ಹಣವಿಲ್ಲದಿದ್ದರಿಂದ ಸರ್ಕಾರಿ ಶಾಲೆಗೆ ಸೇರಬೇಕಾ ಯಿತು.ಸರ್ಕಾರಿ ಶಾಲೆ ಬಗ್ಗೆ ತಪ್ಪು ಕಲ್ಪನೆಗಳಿದ್ದವು.ಸರ್ಕಾರಿ ಶಾಲೆ ಶಿಕ್ಷಕರ ಪ್ರೋತ್ಸಾಹದಿಂದ ಸಾಧನೆ ಮಾಡಲು ಸಾಧ್ಯ. ವಾಗಿದೆ ಎಂದು ಸ್ಮರಿಸಿದಳು.ನಮ್ಮ ಶಾಲೆಯ ಶಿಕ್ಷಕರು ಉತ್ತಮ ಪ್ರೋತ್ಸಾಹ ನೀಡಿದರು.ಅವರ ಸಹಕಾರವಿಲ್ಲದಿ ದ್ದರೆ 625 ಅಂಕ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಟ್ಯೂಷನ್‍ಗೆ ಹೋಗದೇ ಪೂರ್ಣ ಅಂಕ ಬಂದಿದೆ. ನಿರಂತರ ಓದು ವಿಷಯ ಪೂರ್ಣ ಅರ್ಥವಾಗುವ ತನಕ ಅಧ್ಯಯನ ಮಾಡಿದೆ.ಆನ್‍ಲೈನ್ ಪಾಠವೂ ವರವಾಯಿತು ಭಾರತೀಯ ಸೇನೆ ಅಥವಾ ಎಂಜಿನಿಯರ್ ಆಗಿ ದೇಶಕ್ಕೆ ಸೇವೆ ಸಲ್ಲಿಸುವ ಗುರಿಯಿರುವುದಾಗಿ ಏಕತಾ ತಿಳಿಸಿದಳು.

ಏಕತಾ ತಮ್ಮ ಶಾಲೆಯ ವಿದ್ಯಾರ್ಥಿನಿ ಪೂರ್ಣ ಅಂಕ ಪಡೆದಿರುವುದಕ್ಕೆ ಅತ್ಯಂತ ಸಂತೋಷ ಸಂಭ್ರಮ ಎನ್ನುತ್ತಾ ಸಂತಸವನ್ನು ವ್ಯಕ್ತಪಡಿಸಿದರು ಇಂಗ್ಲಿಷ್ ಶಿಕ್ಷಕಿ ಆರ್.ಲಕ್ಷ್ಮೀ ಭೌತಶಾಸ್ತ್ರ ಶಿಕ್ಷಕಿ ಶಶಿರೇಖಾ ಸಮಾಜ ವಿಜ್ಞಾನ ಶಿಕ್ಷಕಿ ಶಿಲ್ಪಾಶ್ರೀ ಚಿನ್ನದಂತ ಹುಡುಗಿ ಎಂದು ಮೆಚ್ಚುಗೆ ವ್ಯಕ್ತಪಡಿ ಸಿದರು.ಎನ್‍ಸಿಆರ್‍ಟಿ ಇ ಪಠ್ಯಕ್ರಮದಲ್ಲಿ ನಡೆದ ಮೊದಲ ಪರೀಕ್ಷೆಯಲ್ಲಿ ಪೂರ್ಣ ಅಂಕ ಪಡೆದಿರುವುದು ಸಾಧನೆ ಎಂದು ಪ್ರಶಂಸಿಸಿದ್ದಾರೆ.

error: Content is protected !!
%d bloggers like this: