ಹುಬ್ಬಳ್ಳಿ –
ಮೇಯರ್ ಉಪಮೇಯರ್ ಗೆ ಸನ್ಮಾನಿಸಿ ಗೌರವಿಸಿದ ಶಾಸಕ ಪ್ರಸಾದ್ ಅಬ್ಬಯ್ಯ – ಮೇಯರ್ ಶ್ರೀಮತಿ ಜ್ಯೋತಿ ಪಾಟೀಲ್,ಉಪಮೇಯರ್ ಸಂತೋಷ ಚವ್ಹಾಣ ಗೆ ಆತ್ಮೀಯ ಸನ್ಮಾನ ಗೌರವ…..ಅವಳಿ ನಗರದ ಅಭಿವೃದ್ದಿಗೆ ಶ್ರಮಿಸುವಂತೆ ಕರೆ…..
ರಾಜ್ಯದಲ್ಲಿಯೇ ಎರಡನೇಯ ದೊಡ್ಡ ಮಹಾನಗರ ಪಾಲಿಕೆಯಾಗಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಗೆ ನೂತನವಾಗಿ ಆಯ್ಕೆಯಾಗಿರುವ ಮೇಯರ್ ಉಪಮೇಯರ್ ಅವರನ್ನು ಶಾಸಕ ಪ್ರಸಾದ್ ಅಬ್ಬಯ್ಯ ಅವರು ಸನ್ಮಾನಿಸಿ ಗೌರವಿಸಿದರು.ಹೌದು ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರದ ಶಾಸಕ ರಾಗಿರುವ ಪ್ರಸಾದ್ ಅಬ್ಬಯ್ಯ ಅವರು ನೂತನ ಮೇಯರ್ ಶ್ರೀಮತಿ ಜ್ಯೋತಿ ಪಾಟೀಲ್,ಉಪ ಮೇಯರ್ ಸಂತೋಷ ಚವ್ಹಾಣ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.
ಗೃಹ ಕಚೇರಿಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ನೇಮಕಗೊಂಡ ಶ್ರೀಮತಿ ಜ್ಯೋತಿ ಪಾಟೀಲ್ ಮತ್ತು ಉಪಮೇಯರ್ ಸಂತೋಷ ಚವ್ಹಾಣ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು.ಇದೇ ವೇಳೆ ಅವಳಿ ನಗರದ ಅಭಿವೃದ್ಧಿಗೆ ಶ್ರಮಿಸಿ ಉತ್ತಮ ಆಡಳಿತ ನೀಡುವಂತಾಗಲಿ ಎಂದು ಶಾಸಕರು ಶುಭ ಹಾರಿಸಲಾಯಿತು.
ಅಲಿ ಕುಂದಗೋಳ ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……