ನವದೆಹಲಿ -
ಕೇಂದ್ರ ಸರ್ಕಾರಿ ನೌಕರರಿಗೆ ಭರ್ಜರಿ ಸಿಹಿಸುದ್ದಿ ಯನ್ನು ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳದೊಂದಿಗೆ ನೀಡಲಾಗಿದ್ದು ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ ಹೌದು ಕೇಂದ್ರ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಕೇಂದ್ರ ಸರ್ಕಾರವು ಭರ್ಜರಿ ಸಿಹಿಸುದ್ದಿ ನೀಡಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ನೌಕರರ ತುಟ್ಟಿಭತ್ಯೆ ಮತ್ತು ಪಿಂಚಣಿದಾರರ ತುಟ್ಟಿ ಪರಿಹಾರವನ್ನು ಶೇಕಡಾ 3ರಷ್ಟು ಹೆಚ್ಚಿಸಲು ಅನುಮೋದನೆ ನೀಡಲಾಗಿದೆ.
ಈ ನಿರ್ಧಾರದಿಂದಾಗಿ ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆಯು ಪ್ರಸ್ತುತ ಇರುವ ಶೇಕಡಾ 60ರಿಂದ ಶೇಕಡಾ 63ಕ್ಕೆ ಏರಿಕೆಯಾಗಲಿದೆ. ಇದಕ್ಕೂ ಮುನ್ನ ಸರ್ಕಾರವು 2026ರ ಜನವರಿ 1ರಿಂದ ಜಾರಿಗೆ ಬರುವಂತೆ ತುಟ್ಟಿಭತ್ಯೆಯನ್ನು ಶೇ. 60ಕ್ಕೆ ಪರಿಷ್ಕರಿಸಿತ್ತು. ಇದೀಗ ಹಬ್ಬದ ಋತುವಿನಲ್ಲಿ ಘೋಷಣೆಯಾಗಿರುವ ಈ ಹೆಚ್ಚುವರಿ ಶೇ. 3ರಷ್ಟು ಏರಿಕೆಯು ನೌಕರರ ಮೂಲ ವೇತನದ ಆಧಾರದ ಮೇಲೆ ಅನ್ವಯವಾಗ ಲಿದ್ದು, ಮಾಸಿಕ ವೇತನದಲ್ಲಿ ಗಣನೀಯ ಏರಿಕೆ ತರಲಿದೆ
ಈ ಪರಿಷ್ಕೃತ ತುಟ್ಟಿಭತ್ಯೆಯು 2026ರ ಜುಲೈ 1ರಿಂದಲೇ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ. ಹೀಗಾಗಿ, ಕಳೆದ ಜುಲೈ, ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳ ಬಾಕಿ ಮೊತ್ತವು (Arrears) ನೌಕರರ ಮತ್ತು ಪಿಂಚಣಿದಾರರ ಖಾತೆಗೆ ಜಮೆ ಯಾಗಲಿದೆ. ಇದರೊಂದಿಗೆ ತುಟ್ಟಿಭತ್ಯೆಯ ಆಧಾರದ ಮೇಲೆ ಲೆಕ್ಕಹಾಕಲಾಗುವ ಸಾರಿಗೆ ಭತ್ಯೆ ಮುಂತಾದ ಇತರ ಭತ್ಯೆಗಳಲ್ಲೂ ಹೆಚ್ಚಳವಾಗಲಿದೆ.
ಬೆಲೆ ಏರಿಕೆ ಹಾಗೂ ಹಣದುಬ್ಬರವನ್ನು ಸರಿ ದೂಗಿಸುವ ಉದ್ದೇಶದಿಂದ 7ನೇ ವೇತನ ಆಯೋಗದ ಶಿಫಾರಸಿನ ಸೂತ್ರದ ಅನ್ವಯ ಈ ನಿರ್ಧಾರ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಸುಮಾರು 50 ಲಕ್ಷಕ್ಕೂ ಅಧಿಕ ಹಾಲಿ ನೌಕರರು ಹಾಗೂ 65 ಲಕ್ಷಕ್ಕೂ ಹೆಚ್ಚು ನಿವೃತ್ತ ಪಿಂಚಣಿ ದಾರರು (ರಕ್ಷಣಾ ಮತ್ತು ರೈಲ್ವೆ ಪಿಂಚಣಿದಾರರು ಸೇರಿದಂತೆ) ನೇರ ಪ್ರಯೋಜನ ಪಡೆಯಲಿದ್ದಾರೆ. ಹಬ್ಬದ ಸಂದರ್ಭದಲ್ಲೇ ಹೆಚ್ಚುವರಿ ಹಣ ಕೈಸೇರುತ್ತಿ ರುವುದು ನೌಕರರ ವಲಯದಲ್ಲಿ ಸಂತಸ ಮೂಡಿಸಿದೆ
ಸುದ್ದಿ ಸಂತೆ ನ್ಯೂಸ್ ನವದೆಹಲಿ.....