ಬೆಂಗಳೂರು -
ಓಪಿಎಸ್, ಎನ್ ಪಿಎಸ್ ಸಂಬಂಧಿಸಿದಂತೆ ನೌಕರರು ಆತಂಕಪಡಬೇಕಿಲ್ಲ. ಈ ವಿಚಾರವಾಗಿ ಹಣಕಾಸು ಇಲಾಖೆ,ಸಚಿವ ಸಂಪುಟದಲ್ಲಿ ಸಮಾ ಲೋಚಿಸಲಾಗುವುದು ನೌಕರರಿಗೆ ನೀಡುವ ಹಬ್ಬದ ಮುಂಗಡವನ್ನು 25 ಸಾವಿರದಿಂದ 50 ಸಾವಿರ ರೂಪಾಯಿಗೆ ಹೆಚ್ಚಿಸಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಡಿಕೆಶಿ ಹೇಳಿದರು ಹಿರಿಯೂರಿ ನಲ್ಲಿ ಸರ್ಕಾರಿ ನೌಕರರ ಭವನ ನಿರ್ಮಾಣಕ್ಕೆ 3 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಹಿರಿಯೂರಿನ ಸರ್ಕಾರಿ ಬಾಲಕಿ ಯರ ಪದವಿಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ತಾಲ್ಲೂಕು ಸರ್ಕಾರಿ ನೌಕರರ ಸಮ್ಮೇಳನ,ಅಭಿನಂದನಾ ಕಾರ್ಯಕ್ರಮ ಹಾಗೂ ಕನ್ನಡ ರಾಜ್ಯೋತ್ಸವವನ್ನು ಉದ್ಘಾಟಿಸಿ ಮಾತನಾಡಿ, ಓಪಿಎಸ್, ಎನ್ ಪಿಎಸ್ ವಿಚಾರದಲ್ಲಿ ಪಕ್ಷದ ಪದಾಧಿಕಾರಿಗಳು ಹಾಗೂ ಚುನಾವಣಾ ಪ್ರಣಾಳಿಕೆ ರಚಿಸಿದವರೊಂದಿಗೂ ಸಮಾಲೋಚನೆ ಮಾಡಲಾ ಗುವುದು.ಹಾಗೂ,ನೌಕರರ ಸಂಘದ ಅಭಿಪ್ರಾಯ ವನ್ನೂ ಪಡೆದು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಸರ್ಕಾರಿ ನೌಕರರ ಸೇವೆ ಮತ್ತು ಅವರ ಸ್ವಾಭಿಮಾನಕ್ಕೆ ಸರ್ಕಾರ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ಹೇಳಿದರು.
ನಿಮಗೂ ನಮಗೂ ಇರುವ ಸಂಬಂಧ ಭಕ್ತ ಮತ್ತು ಭಗವಂತನ ನಡುವಿನ ಸಂಬಂಧದಂತೆ. ಎಲ್ಲದಕ್ಕೂ ಒಂದು ಕಾಲಾವಕಾಶವಿದೆ. ನಿಮ್ಮ ಬೇಡಿಕೆಗಳ ಬಗ್ಗೆ ಸರ್ಕಾರ ಗಂಭೀರವಾಗಿ ಆಲೋಚಿಸಲಿದೆ. ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಸರ್ಕಾರಿ ನೌಕರರ ವೇತನ ವನ್ನು ಶೇ.27ರಷ್ಟು ಹೆಚ್ಚಿಸಲಾಗಿದೆ. ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸುವ ಬದ್ಧತೆ ಸರ್ಕಾರಕ್ಕಿದೆ ಎಂದರು.ಹಿರಿಯೂರಿನಲ್ಲಿ ಸರ್ಕಾರಿ ನೌಕರರ ಭವನ, ಸರ್ಕಾರಿ ನೌಕರರ ಹಿತದೃಷ್ಟಿಯಿಂದ ಸಮುದಾಯ ಭವನ ನಿರ್ಮಾಣ, ಗುರುಭವನ ನವೀಕರಣ ಹಾಗೂ ಅರ್ಧಕ್ಕೆ ನಿಂತಿರುವ ನೌಕರರ ಭವನದ ಕಾಮಗಾರಿಯನ್ನು ಮುಂದುವರಿಸುವಂತೆ ಸರ್ಕಾರಿ ನೌಕರರ ಸಂಘದವರು ಸಲ್ಲಿಸಿದ ಮನವಿಗೆ ವೇದಿಕೆಯಲ್ಲಿಯೇ ಸಹಿ ಹಾಕುವ ಮೂಲಕ ಬೇಡಿಕೆ ಗಳನ್ನು ಈಡೇರಿಸಲು ಸಮ್ಮತಿ ಸೂಚಿಸಿದರು.
ಸರ್ಕಾರಿ ನೌಕರರಿಗೆ ನೀಡಲಾಗುತ್ತಿರುವ ಹಬ್ಬದ ಮುಂಗಡ ಮೊತ್ತವನ್ನು 25 ಸಾವಿರದಿಂದ 50 ಸಾವಿರ ರೂಪಾಯಿಗೆ ಹೆಚ್ಚಿಸಬೇಕೆಂಬ ಬೇಡಿಕೆಗೆ ಸ್ಥಳದಲ್ಲೇ ಸ್ಪಂದಿಸಿದ ಸಿಎಂ"ಪೆನ್ನು ನನ್ನ ಕೈಯಲ್ಲಿದೆ. ಹಿರಿಯೂರಿ ನಲ್ಲಿ ವಿಶೇಷ ಘೋಷಣೆ ಮಾಡುತ್ತಿದ್ದೇನೆ ಎಂದು ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಪ್ರಕಟಿಸಿದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗಗಳು ರಥದ ಎರಡು ಚಕ್ರಗಳಿದ್ದಂತೆ. ಸರ್ಕಾರ ರೂಪಿಸುವ ಯೋಜನೆಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿ ಸರ್ಕಾರಿ ನೌಕರರ ಮೇಲಿದೆ ಜನರ ಕಷ್ಟ-ಸುಖಗಳನ್ನು ಅರಿತು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದಾಗ ಮಾತ್ರ ಸರ್ಕಾರಕ್ಕೆ ಉತ್ತಮ ಹೆಸರು ಬರಲು ಸಾಧ್ಯ. ವಿಧಾನಸೌಧದಲ್ಲಿ ಕೆತ್ತಲಾ ಗಿರುವ 'ಸರ್ಕಾರಿ ಕೆಲಸ ದೇವರ ಕೆಲಸ' ಎಂಬ ಸಂದೇಶವನ್ನು ಪ್ರತಿಯೊಬ್ಬ ನೌಕರರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ತಾಯಿ ಮೇಲೆ ಮಗುವಿಗೆ ಎಷ್ಟು ನಂಬಿಕೆ ಇರುತ್ತದೆ ಯೋ, ಮರಕ್ಕೆ ಬೇರಿನ ಮೇಲೆ ಎಷ್ಟು ವಿಶ್ವಾಸವಿ ರುತ್ತದೆಯೋ ಅಷ್ಟೇ ನಂಬಿಕೆ ನನಗೆ ಸರ್ಕಾರಿ ನೌಕರರ ಮೇಲೂ ಇದೆ. ನಾಡಿನ ಅಭಿವೃದ್ಧಿಯ ರಥ ನಿಮ್ಮ ಕೈಯಲ್ಲಿದೆ. ಅದನ್ನು ಮುನ್ನಡೆಸುವ ಸಾರಥಿ ಗಳು ನೀವೇ. ಆಡಳಿತ ಯಂತ್ರ ಮತ್ತು ಅಭಿವೃದ್ಧಿಯ ಮಂತ್ರ ಒಟ್ಟಿಗೆ ಸಾಗಬೇಕು ಎಂದು ಹೇಳಿದರು.
ಸರ್ಕಾರಿ ನೌಕರರು ತಮ್ಮ ಸೇವಾವಧಿಯಲ್ಲಿ ನಾಡಿನ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಾರೆ. ನಿವೃತ್ತ ರಾದ ಬಳಿಕವೂ ಅನೇಕರು ಸಮಾಜದ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಶಿಕ್ಷಕರಿಗೆ ಟಿಆರ್ , ಎಂಜಿನಿ ಯರ್ಗಳಿಗೆ "ಇಆರ್" ಎಂಬ ಗೌರವ ಸೂಚಕ ಪದಗ ಳನ್ನು ಸೇರಿಸಿರುವುದು ಅವರ ವೃತ್ತಿಪರ ಸೇವೆಗೆ ಗೌರವ ನೀಡುವ ಉದ್ದೇಶದಿಂದ ಎಂದು ವಿವರಿಸಿ ದರು.ನನ್ನ ಗೌರವ ಕಾಪಾಡಬೇಕಾದವರು ನೀವೇ, ನಿಮ್ಮನ್ನು ರಕ್ಷಿಸಬೇಕಾದವರು ನಾವೇ. ಇಬ್ಬರ ನಡುವೆಯೂ ಪರಸ್ಪರ ತಿಳಿವಳಿಕೆ ಮತ್ತು ವಿಶ್ವಾಸ ಇರಬೇಕು. ನಾನು ನಿಮ್ಮ ಗೌರವ ಕಾಪಾಡುತ್ತೇನೆ, ನೀವು ನನ್ನ ಗೌರವ ಕಾಪಾಡಿ. ಪ್ರೀತಿ, ವಿಶ್ವಾಸ ಮತ್ತು ಸ್ನೇಹದ ಸಂಬಂಧವನ್ನು ಉಳಿಸಿಕೊಂಡು ಒಟ್ಟಾಗಿ ಕೆಲಸ ಮಾಡೋಣ" ಎಂದು ಮನವಿ ಮಾಡಿದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಾಕ್ಷರಿ ಅವರ ನೇತೃತ್ವದಲ್ಲಿ ಸಂಘಟನೆ ಉತ್ತಮವಾಗಿ ಕಾರ್ಯನಿರ್ವ ಹಿಸುತ್ತಿದೆ. ನೌಕರರ ಹಿತಾಸಕ್ತಿ ಕಾಪಾಡಲು ಸರ್ಕಾರ ಸದಾ ಬೆಂಬಲವಾಗಿ ನಿಲ್ಲಲಿದೆ ಎಂದು ಭರವಸೆ ನೀಡಿದರು. ಹಿರಿಯೂರಿನ ದಿವಂಗತ ಶಾಸಕ ಸುಧಾಕರ್ ಅವರ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಜಾತಿ, ಧರ್ಮದ ಬಲಕ್ಕಿಂತ ಜನರ ಪ್ರೀತಿ ಮತ್ತು ಬೆಂಬಲದೊಂದಿಗೆ ಅವರು ಕೆಲಸ ಮಾಡಿದ್ದರು. ಅವರ ಸೇವೆಯನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ ಎಂದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು.....