LIVE TV LocalCrimeNationalInternationalPoliticsEducationTechnologyEntertainmentSportsFeature
State News

ರಾಜ್ಯದ 19 ಪೊಲೀಸ್ ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಗೌರವ.......

ಬೆಂಗಳೂರು -

ಗಣರಾಜ್ಯೋತ್ಸವದ ಅಂಗವಾಗಿ ನೀಡಲಾಗುವ ರಾಷ್ಟ್ರಪತಿಯವರ ಪ್ರಶಂಸನೀಯ ಸೇವಾ ಪದಕಕ್ಕೆ ಕರ್ನಾಟಕದ 19 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಪಾತ್ರರಾಗಿದ್ದಾರೆ. ರಾಜ್ಯ ಗುಪ್ತದಳದಲ್ಲಿ ಐಜಿಪಿಯಾಗಿರುವ ಡಾ.ಸುಬ್ರಹ್ಮಣ್ಯೇಶ್ವರ ರಾವ್ ಅಯ್ಯಂಕಿ, ಬೆಳಗಾವಿ ಉತ್ತರ ವಲಯದ ಎಸಿಬಿಯ ಎಸ್ಪಿಯಾಗಿರುವ ಬಾಬ್‍ಸಾಬ್ ಶಿವಗೌಡ ನ್ಯಾಮೇಗೌಡ, ಬೆಂಗಳೂರಿನ ಸಿಐಡಿಯ ಆರ್ಥಿಕ ಅಪರಾಧಗಳ ಘಟಕದ ಡಿವೈಎಸ್‍ಪಿ ಬಸವಣ್ಣಪ್ಪ ರಾಮಚಂದ್ರ,

SP ACB .B S ನೇಮಗೌಡ

ಬೆಂಗಳೂರು ರೈಲ್ವೆ ವಿಭಾಗದ ಡಿವೈಎಸ್‍ಪಿ ಡಿ.ಅಶೋಕ್, ಬಿಡಿಎ ವಿಶೇಷ ಕಾರ್ಯಪಡೆಯ ಡಿವೈಎಸ್‍ಪಿ ಸಿ.ಬಾಲಕೃಷ್ಣ, ಪೊಲೀಸ್ ಕೇಂದ್ರ ಕಚೇರಿಯ ಅಪರಾಧ ವಿಭಾಗದ ಡಿವೈಎಸ್‍ಪಿ ಯಾಗಿರುವ ವಿ.ಕೆ.ವಾಸುದೇವ್, ಚಿತ್ರದುರ್ಗ ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಬಾಲಚಂದ್ರ ನಾಯಕ್ ಅವರುಗಳು ಪ್ರಶಂಸನೀಯ ಸೇವಾ ಪದಕಕ್ಕೆ ಭಾಜನರಾಗಿದ್ದಾರೆ.

ಬೆಂಗಳೂರು ಗುಪ್ತದಳದ ಎಎಸ್‍ಐ ಹೊನ್ನಗಂಗಯ್ಯ ಈಶ್ವರಯ್ಯ, ಉಡುಪಿಯ DCRB ಎಎಸ್‍ಐ ಪ್ರಕಾಶ್, ಚಾಮರಾಜನಗರ ಜಿಲ್ಲೆ ಮಹಿಳಾ ಠಾಣೆಯ ಇನ್ಸ್ಪೆಕ್ಟರ್ ಬಸವಯ್ಯ ಪುಟ್ಟಸ್ವಾಮಿ, KSRP ಮೂರನೇ ಬೆಟಾಲಿಯನ್‍ ವಿಶೇಷ ಸಹಾಯಕ ಸಬ್ ಇನ್ಸ್ಪೆಕ್ಟರ್ ವೆಂಕಟೇಶ್, ನಾಲ್ಕನೇ ಬೆಟಾಲಿಯನ್‍ನ ವಿಶೇಷ ಸಹಾಯಕ ಸಬ್ ಇನ್ಸ್ಪೆಕ್ಟರ್ ಗಳಾದ ಮೋಹನ್‍ರಾಜ್ ಕುರಡಗಿ ಹಾಗೂ ವೆಂಕಟಸ್ವಾಮಿ ಚಿನ್ನಪ್ಪ, ಗುಪ್ತದಳದ ವಿಶೇಷ ಸಹಾಯಕ ಸಬ್‍ ಇನ್ಸ್ಪೆಕ್ಟರ್ ಶಶಿಕುಮಾರ್,

ಕೊಡಗು ಜಿಲ್ಲೆ ಡಿಎಆರ್ ಎಎರ್ ಎಸೈ ಜಿತೇಂದ್ರ ರಾಧಾಕೃಷ್ಣ ರೈ, ಮೈಸೂರು ಡಿಎಆರ್ ಹೆಡ್‍ಕಾನ್‍ಸ್ಟೆಬಲ್ ರಾಮಚಂದ್ರ ಲೋಕೇಶ್, ತುಮಕೂರು ಜಿಲ್ಲೆ ತಿಪಟೂರು ನಗರ ಪೊಲೀಸ್ ಠಾಣೆಯ ಹೆಡ್‍ಕಾನ್‍ಸ್ಟೆಬಲ್ ಉಸ್ಮಾನ್‍ಸಾಬ್, ಬೆಂಗಳೂರಿನ ಸಿಐಡಿ ಘಟಕದ ಹೆಡ್‍ಕಾನ್‍ಸ್ಟೆಬಲ್ ಸತೀಶ್ ಕೆಂಪಯ್ಯ ವೆಂಕಟಪ್ಪ, ಮಂಗಳೂರಿನ ಕೆಎಸ್‍ಆರ್‍ಪಿ 7ನೇ ಬೆಟಾಲಿಯನ್‍ನ ಹೆಡ್‍ಕಾನ್‍ಸ್ಟೆಬಲ್ ಪ್ರಕಾಶ್ ಶೆಟ್ಟಿ ಅವರುಗಳಿಗೆ ಪ್ರಶಸ್ತಿ ಘೋಷಣೆ ಮಾಡಲಾಗಿದೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ - 40 ಸಾವಿರ ಲಂಚ ಸ್ವೀಕರಿಸುವಾಗ ಟ್ರ್ಯಾಪ್.....