LIVE TV LocalCrimeNationalInternationalPoliticsEducationTechnologyEntertainmentSportsFeature
State News

ವರ್ಗಾವಣೆ ಕುರಿತು ರಾಜ್ಯದ ಸರ್ಕಾರಿ ನೌಕರರಿಗೆ ಒಂದಿಷ್ಟು ಮಾಹಿತಿ - ವರ್ಗಾವಣೆ ಕುರಿತು ಒಂದು ಅವಲೋಕನ.....

ಬೆಂಗಳೂರು -

ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿ ಸುತ್ತಿರುವ ಎ,ಬಿ,ಸಿ ಮತ್ತು ಡಿ ದರ್ಜೆ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗಾವಣೆಗೆ ಸರ್ಕಾರ ಚಾಲನೆ ನೀಡಿದೆ ವಿಧಾನಸಭೆ ಚುನಾವಣೆಗೆ ಒಂದು ವರ್ಷವಷ್ಟೇ ಬಾಕಿ ಇದ್ದು ಈ ಸರ್ಕಾರದ ಅವಧಿಯಲ್ಲಿ ನಡೆಯುತ್ತಿರುವ ಕೊನೆಯ ಸಾಮೂಹಿಕ ವರ್ಗಾವಣೆ ಇದಾಗಿದೆ.ಇನ್ನೂ ವರ್ಗಾವಣೆಯ ಅಧಿಕಾರವನ್ನು ಇಲಾಖೆಯ ಉಸ್ತುವಾರಿ ಹೊತ್ತ ಸಚಿವರಿಗೆ ನೀಡಲಾಗಿದೆ.

ಮೇ 1ರಿಂದ ಜೂನ್‌ 15ರವರೆಗೂ ಸರ್ಕಾರಿ ನೌಕರರನ್ನು ವರ್ಗಾವಣೆ ಮಾಡಲು ಅವಕಾಶ ಕಲ್ಪಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಶನಿವಾರ ಆದೇಶ ಹೊರಡಿ ಸಿದೆ.ಆಯಾ ಇಲಾಖೆಗಳ ಒಂದು ಜ್ಯೇಷ್ಠತಾ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರ ಒಟ್ಟು ಸಂಖ್ಯೆಯಲ್ಲಿ ಶೇ 6ರಷ್ಟು ಮಂದಿಯನ್ನು ಮಾತ್ರ ವರ್ಗಾವಣೆ ಮಾಡಬ ಹುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ರಾಜ್ಯ ಸರ್ಕಾರಿ ನೌಕರರ ವರ್ಗಾವಣೆಗೆ ಸಂಬಂಧಿಸಿದಂತೆ 2013ರ ಜೂನ್‌ 7ರಂದು ಹೊರಡಿಸಿದ್ದ ಮಾರ್ಗಸೂಚಿಗ ಳಲ್ಲಿ ಇರುವ ಇತರ ಅಂಶಗಳು ಈ ಸಾಮಾನ್ಯ ವರ್ಗಾವಣೆ ಪ್ರಕ್ರಿಯೆಗೆ ಅನ್ವಯವಾಗುತ್ತದೆ ಎಂದು ಆದೇಶದಲ್ಲಿ ಉಲ್ಲೇ ಖಿಸಲಾಗಿದೆ.ಈ ಮಾರ್ಗಸೂಚಿ ಪ್ರಕಾರಆಯಾ ನೇಮಕಾತಿ ಪ್ರಾಧಿಕಾರಗಳೇ ಅಧಿಕಾರಿಗಳು ಮತ್ತು ನೌಕರರ ವರ್ಗಾ ವಣೆ ಮಾಡಬೇಕಿತ್ತು.ಈ ಅಧಿಕಾರವನ್ನು ಸಚಿವರಿಗೆ ಪ್ರತ್ಯಾ ಯೋಜನೆ ಮಾಡಲಾಗಿದೆ.

ಹಾರನಹಳ್ಳಿ ರಾಮಸ್ವಾಮಿ ನೇತೃತ್ವದ ಆಡಳಿತಸುಧಾರಣಾ ಆಯೋಗದ ಶಿಫಾರಸ್ಸಿನಂತೆ 2013ರಲ್ಲಿ ಮಾರ್ಗಸೂಚಿ ಹೊರಡಿಸಲಾಗಿತ್ತು.ಅದರ ಪ್ರಕಾರ,ನಿರ್ದಿಷ್ಟ ಸೇವಾವಧಿ ಯನ್ನು ಪೂರ್ಣಗೊಳಿಸದೇ ಇರುವ ಯಾವುದೇ ಅಧಿಕಾರಿ ಮತ್ತು ನೌಕರರನ್ನು ವರ್ಗಾವಣೆ ಮಾಡುವಂತಿಲ್ಲ.ಕೆಲವು ವರ್ಷಗಳ ಕಾಲ, ಸರ್ಕಾರಿ ಅಧಿಕಾರಿಗಳು ಮತ್ತು ನೌಕರರ ಸಾಮಾನ್ಯ ವರ್ಗಾವಣೆ ಅಧಿಕಾರವನ್ನು ನೇಮಕಾತಿ ಪ್ರಾಧಿ ಕಾರಗಳಿಗೆ ನೀಡಲಾಗಿತ್ತು.ನೇಮಕಾತಿ ಪ್ರಾಧಿಕಾರ ಗಳು ಆಯಾ ಇಲಾಖೆಯ ಉಸ್ತುವಾರಿ ಹೊಂದಿರುವ ಸಚಿವರ ಅನುಮೋದನೆ ಪಡೆದು ವರ್ಗಾವಣೆ ಆದೇಶ ಹೊರಡಿಸು ತ್ತಿದ್ದವು.2019ರಲ್ಲಿ ಬಿ, ಸಿ ಮತ್ತು ಡಿ ರ್ಜೆ ಅಧಿಕಾರಿಗಳು ಹಾಗೂ ನೌಕರರ ವರ್ಗಾವಣೆ ಅಧಿಕಾರವನ್ನು ಸಚಿವರಿಗೆ ಪ್ರತ್ಯಾಯೋಜನೆ ಮಾಡಲಾಗಿತ್ತು.2020ರಲ್ಲಿ ಕೋವಿಡ್‌ ಕಾರಣದಿಂದ ಸರ್ಕಾರಿ ನೌಕರರ ವರ್ಗಾವಣೆಗೆ ನಿಯಂ ತ್ರಣ ಮಾಡಿದಾಗ ಮುಖ್ಯಮಂತ್ರಿಯವರ ಅನುಮೋದನೆ ಪಡೆದು ವರ್ಗಾವಣೆ ಆದೇಶ ಹೊರಡಿಸಲು ಅವಕಾಶ ನೀಡಲಾಗಿತ್ತು.2021ರಲ್ಲಿ ಪುನಃ ಸಚಿವರಿಗೆ ವರ್ಗಾವಣೆ ಅಧಿಕಾರ ನೀಡಲಾಗಿತ್ತು.ಈ ವರ್ಷ ಅದೇ ವ್ಯವಸ್ಥೆ ಮುಂದುವರಿಸಲಾಗಿದೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ಸಂಸತ್ತು ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಶಾಸಕ NH ಕೋನರೆಡ್ಡಿ - ನೂತನ ವಿದ್ಯಾರ್ಥಿಗಳ ಸಂಸತ್ತು ನಾಯಕರಿಗೆ ಶುಭಹಾರೈಸಿದ ಜನಸೇವಕ.....ಅರುಣ ಮಜ್ಜಿಗೆ ಶಾಲಾ ಶಿಕ್ಷಕರು ಉಪಸ್ಥಿತಿ.....ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...