LIVE TV LocalCrimeNationalInternationalPoliticsEducationTechnologyEntertainmentSportsFeature
State News

8 ಸರ್ಕಾರಿ ನೌಕರರ ಬಂಧನ - ನಾಪತ್ತೆಯಾದ ಹಲವು ಸರ್ಕಾರಿ ನೌಕರರು.....

ರಂಗ‍ಪಟ್ಟಣ (ಮಂಡ್ಯ ಜಿಲ್ಲೆ) -

ಪಟ್ಟಣದ ಭೂ ದಾಖಲೆಗಳ ಕಚೇರಿಯಲ್ಲಿ ನಡೆದಿರುವ ನಕಲಿ ದಾಖಲೆ, ನಕಲಿ ಸೀಲುಗಳ ಬಳಕೆ ಆರೋಪದ ಹಿನ್ನೆಲೆಯಲ್ಲಿ, ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಖಾಸಗಿ ವ್ಯಕ್ತಿ ಮತ್ತು 8 ಸರ್ಕಾರಿ ನೌಕರರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿ ದ್ದಾರೆ ಭೂದಾಖಲೆಗಳ ಕಚೇರಿಯಲ್ಲಿ ಸರ್ಕಾರಿ ನೌಕರನ ಸೋಗಿನಲ್ಲಿ ಕೆಲಸ ಮಾಡುತ್ತಿದ್ದ ನಿತಿನ್ ಪ್ರೇಮಾನಂದ ಮಹಾಲೆ, ಸರ್ವೆ ಸೂಪರ್‌ವೈಸರ್ ಯೋಗರಾಜ್, ಭೂಮಾಪಕರಾದ ಅರವಿಂದ್, ಜಯಬೋರೇಗೌಡ, ದಯಾನಂದ್, ಮಧು, ರಮೇಶ್, ಹರೀಶ್, ನಿಶಾ ಸಾರಿಕಾ ಮಲ್ಲಿ ಅವರನ್ನು ಬಂಧಿಸ ಲಾಗಿದೆ ಪ್ರಮುಖ ಆರೋಪಿ ಭೂ ದಾಖಲೆಗಳ ಸಹಾಯಕ ನಿರ್ದೇಶಕ (ಎ.ಡಿ.ಎಲ್‌.ಆರ್‌) ಮಹಮದ್‌ ಹುಸೇನ್ ತಲೆ ಮರೆಸಿಕೊಂಡಿದ್ದಾರೆ.

ಎಡಿಎಲ್‌ಆರ್‌ ಮಹಮದ್‌ ಹುಸೇನ್ ಮತ್ತು ನಿತಿನ್ ನವೀನ್‌ ಮಹಾಲೆ ಅವರಿದ್ದ ಮನೆಯಲ್ಲಿ ದಾಖಲೆ ಇಲ್ಲದ ₹1,40,200 ನಗದು ವಶಪಡಿಸಿಕೊಳ್ಳಲಾಗಿದೆ. ಪ್ರೇಮಾನಂದ ಮಹಾಲೆ ಅವರ ಬ್ಯಾಂಕ್ ಖಾತೆಯಲ್ಲಿ ಲಕ್ಷಾಂತರ ರೂಪಾಯಿ ಹಣದ ವಹಿವಾಟು ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರ ಶೋಧನಾ ವಾರೆಂಟ್‌ ಆಧರಿಸಿ ಪಾಂಡವಪುರ ಉಪ ವಿಭಾಗಾ ಧಿಕಾರಿ, ಶ್ರೀರಂಗಪಟ್ಟಣ ತಹಶೀಲ್ದಾರ್‌, ಎಡಿಎಲ್‌ಆರ್‌, ಮಹದೇವಪುರ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಅವರ ಕಚೇರಿ ಮತ್ತು ಮನೆಗಳಲ್ಲಿ ಕೂಡ ಶೋಧ ಕಾರ್ಯ ನಡೆಸಲಾಗಿದೆ.

ಮಂಡ್ಯ ಲೋಕಾಯುಕ್ತ ಎಸ್ಪಿ ಸುರೇಶಬಾಬು ಎಸ್‌. ಮಾರ್ಗ ದರ್ಶನದಲ್ಲಿ, ಡಿವೈಎಸ್ಪಿ ಸುನಿಲ್‌ಕುಮಾರ್‌ ಎಚ್.ಟಿ, ಇನ್‌ಸ್ಪೆಕ್ಟರ್‌ಗಳಾದ ರವಿಕುಮಾರ್‌ ಎಂ., ಬ್ಯಾಟರಾಯಗೌಡ, ಲೇಪಾಕ್ಷಮೂರ್ತಿ ಅವರ ನೇತೃತ್ವದ ತಂಡ ಪರಿಶೀಲನೆ ನಡೆಸಿದೆ

ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯ ಸರ್ವೆ ಸೂಪರ್‌ವೈಸರ್ ಯೋಗರಾಜ್, ಭೂಮಾಪಕರಾದ ಅರವಿಂದ್, ಜಯಬೋರೇಗೌಡ, ದಯಾನಂದ್, ಮಧು, ರಮೇಶ್, ಹರೀಶ್, ನಿಶಾ ಸಾರಿಕಾ ಮಲ್ಲಿ ಅವರು ತಾವು ಬಳಸುವ ಮೋಜಿಣಿ ತಂತ್ರಾಂಶದ ಬಳಕೆದಾರರ ಐಡಿ (ಯೂಸರ್‌ ನೇಮ್) ಮತ್ತು ಪಾಸ್‌ವರ್ಡ್‌ ಹಾಗೂ ತಮ್ಮ ಮೊಬೈಲ್‌ಗೆ ಬರುವ ಒಟಿಪಿಯನ್ನು ನಿತಿನ್‌ ಪ್ರೇಮಾನಂದ ಮಹಾಲೆ ಅವರಿಗೆ ನೀಡಿದ್ದು, ಆತ ಆಕಾರ್ ಬಂದ್‌ ದಾಖಲೆಗಳನ್ನು ಡಿಜಿಟಲೀ ಕರಣ ಮಾಡಿರುವುದು ತನಿಖೆ ವೇಳೆ ಗೊತ್ತಾಗಿದೆ.

ಭೂದಾಖಲೆಗಳ ಸಹಾಯಕ ನಿರ್ದೇಶಕ ಮಹಮದ್ ಹುಸೇನ್ ಮತ್ತು ನಿತಿನ್‌ ಪ್ರೇಮಾನಂದ ಮಹಾಲೆ ವಾಸವಿದ್ದ ಮೈಸೂರಿನ ಶಿವರಾತ್ರೀಶ್ವರ ನಗರದ ಮನೆಯಲ್ಲಿ ಹುಣಸೂರು ತಹಶೀಲ್ದಾರ್‌, ಅಲ್ಲಿನ ಭೂಮಾಪಕರಾದ ಶಂಕರ್, ಕೆ.ಎನ್‌. ರಮೇಶ್ ಮತ್ತು ತಾಲ್ಲೂಕು ಕಚೇರಿಯ ಪರ್ಯಾವೇಕ್ಷಕರ ಸಹಿಯುಳ್ಳ ಎಲ್‌.ಆರ್‌. ಟಿಪ್ಪಣಿ ಪುಸ್ತಕದ ದಾಖಲೆಗಳು ಪತ್ತೆಯಾಗಿವೆ.

ಇದೇ ಮನೆಯಲ್ಲಿ ಸಕಲೇಶಪುರ ತಹಶೀಲ್ದಾರ್‌, ಪರ್ಯಾ ವೇಕ್ಷಕ, ಎಡಿಎಲ್‌ಆರ್ ಕಚೇರಿಯ ಅಧೀಕ್ಷಕ, ಭೂಮಾಪಕ ಶಂಕರ್, ಕೆ.ಎನ್‌. ರಮೇಶ್, ಕೆ.ಎಸ್‌. ದೇವರಾಜ್, ಡಿ.ಎಸ್‌. ಗಿರೀಶ್, ಕೋಲಾರ ಜಿಲ್ಲೆ ಮುಳಬಾಗಿಲು ತಾಲ್ಲೂಕಿನ ಭೂಮಾಪಕರ ಹೆಸರಿನ ಸೀಲುಗಳು ಕೂಡ ದೊರೆತಿವೆ.

ಸುದ್ದಿ ಸಂತೆ ನ್ಯೂಸ್ ಮಂಡ್ಯ......

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸಿಗಲಿದೆ ಸ್ಥಾನ CM ಭರವಸೆ - ಸಚಿವ ಸ್ಥಾನ ನಿರೀಕ್ಷೆ ಯಲ್ಲಿದ್ದ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದ ನಾಡ ದೊರೆ.....ಶಾಲಾ ಸಂಸತ್ತು ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಶಾಸಕ NH ಕೋನರೆಡ್ಡಿ - ನೂತನ ವಿದ್ಯಾರ್ಥಿಗಳ ಸಂಸತ್ತು ನಾಯಕರಿಗೆ ಶುಭಹಾರೈಸಿದ ಜನಸೇವಕ.....ಅರುಣ ಮಜ್ಜಿಗೆ ಶಾಲಾ ಶಿಕ್ಷಕರು ಉಪಸ್ಥಿತಿ.....ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....