LIVE TV LocalCrimeNationalInternationalPoliticsEducationTechnologyEntertainmentSportsFeature
State News

ಕಳ್ಳತನ ಮಾಡುತ್ತಿದ್ದ ದಂಪತಿಗಳು ಅಂದರ್ - ಖತರ್ನಾಕ್ ದಂಪತಿಗಳ ಬಂಧನ.....

ಬೆಂಗಳೂರು -

ಹಗಲು ಮತ್ತು ರಾತ್ರಿ ವೇಳೆ ಮನೆಗೆ ಕನ್ನ ಹಾಕುತ್ತಿದ್ದ ದಂಪತಿಯನ್ನು ಬಂಧಿಸಿದ ಘಟನೆ ಬೆಂಗಳೂರು ನಲ್ಲಿ ನಡೆದಿದೆ. ಹೌದು ಉತ್ತರ ವಿಭಾಗದ ಆರ್ ಟಿ ನಗರ ಠಾಣೆ ಪೊಲೀಸರು ಬಂಧಿಸಿ 8.5 ಲಕ್ಷ ರೂ. ಮೌಲ್ಯದ 193 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.ಆರ್ ಟಿ ನಗರ ದ ಮಂಜುನಾಥ್ ಲೇಔಟ್‍ನಲ್ಲಿರುವ ಸತ್ಯನಾರಾಯಣ ಅಪಾರ್ಟ್‍ಮೆಂಟ್ ನಿವಾಸಿ ವಿಜಯಲಕ್ಷ್ಮಿ ಎಂಬುವರು ಸೆ.16 ರಂದು ಬೆಳಗ್ಗೆ 8.30ರ ಸುಮಾರಿನಲ್ಲಿ ಎಂದಿನಂತೆ ಕೆಲಸಕ್ಕೆ ಹೋಗುವಾಗ ಮನೆಗೆ ಬೀಗ ಹಾಕಿ ಕೀ ಯನ್ನು ಕಿಟಕಿ ಹತ್ತಿರ ಇಟ್ಟು ಹೋಗಿದ್ದರು.

ಸಂಜೆ 4 ಗಂಟೆ ಸುಮಾರಿಗೆ ಮನೆಗೆ ವಾಪಸ್ಸಾದಾಗ ಮನೆಗೆ ಹಾಕಿದ ಕೀ ಹಾಕಿದಂತೆಯೇ ಇತ್ತು.ಒಳಗೆ ಹೋಗಿ ಪರಿಶೀಲಿ ಸಿದಾಗ ಬೀರುವಿನಲ್ಲಿದ್ದ ಚಿನ್ನಾಭರಣಗಳು ಕಳವಾಗಿರು ವುದು ತಿಳಿದು ಆರ್ ಟಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಈ ಪ್ರಕರಣದಲ್ಲಿ ಕೃತ್ಯ ನಡೆದ ಸ್ಥಳದಲ್ಲಿ ಬೆರಳಚ್ಚು ತಜ್ಞರು ಪರಿಶೀಲನೆ ನಡೆಸಿದ್ದು ದೊರೆತ ಬೆರಳು ಮುದ್ರೆಗಳನ್ನು ಪೊಲೀಸರು ಪಡೆದು ತಾಳೆ ಮಾಡಿ ನೋಡಿ ದಾಗ ಆರೋಪಿಗಳು 2019ನೇ ಸಾಲಿನಲ್ಲಿ ಮಲ್ಲೇಶ್ವರಂ ಠಾಣೆ ವ್ಯಾಪ್ತಿಗಳಲ್ಲಿ ಮನೆಗಳವು ಪ್ರಕರಣದಲ್ಲಿ ಬಂಧಿತ ರಾಗಿದ್ದ ಆರೋಪಿಗಳಿಗೆ ತಾಳೆಯಾಗಿದೆ.

ಇದನ್ನು ಆಧರಿಸಿ ಡಿಜೆಹಳ್ಳಿಯ ಕಾವಲ್‍ ಬೈರಸಂದ್ರದ ವಿನಾಯಕ ಟಾಕೀಸ್ ಹಿಂಭಾಗ ದಂಪತಿಯನ್ನು ಬಂಧಿಸಿ 8.5 ಲಕ್ಷ ರೂ.ಬೆಲೆ ಬಾಳುವ 193 ಗ್ರಾಂ ಚಿನ್ನದ ಆಭರಣ ಗಳನ್ನು ಆರ್ ಟಿ ನಗರ ಠಾಣೆ ಪೊಲೀಸರು ವಶಪಡಿಸಿ ಕೊಂಡಿ.ಆರೋಪಿ ಮಹಿಳೆ ಗೃಹಿಣಿಯಾಗಿದ್ದು ಈಕೆಯ ಪತಿ ಸ್ಥಳೀಯ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದಾನೆ. ಹಗಲು ವೇಳೆಯಲ್ಲಿ ಮನೆ ಬಾಡಿಗೆಗೆ ಕೇಳುವ ನೆಪದಲ್ಲಿ ಮನೆ ಮನೆಗೆ ಹೋಗಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿಕೊಂಡು ಬಂದು ಪತ್ನಿಗೆ ಮಾಹಿತಿ ನೀಡುತ್ತಿದ್ದನು.

ಪತಿ ಮನೆಗಳ್ಳತನ ಮಾಡುವ ಸಂದರ್ಭದಲ್ಲಿ ಪತ್ನಿ ಹೊರಗೆ ನಿಂತುಕೊಂಡು ಸಾರ್ವಜನಿಕರು ಬರುತ್ತಾರೆಯೋ ಎಂದು ಗಮನಿಸುತ್ತಿದ್ದಳು ನಂತರ ಇಬ್ಬರು ಅಲ್ಲಿಂದ ಪರಾರಿಯಾ ಗುತ್ತಿದ್ದರು.ಆರೋಪಿಗಳ ವಿರುದ್ಧ ರಾಮಮೂರ್ತಿನಗರ, ಯಶವಂತಪುರ,ಅಶೋಕನಗರ,ಡಿ.ಜೆ.ಹಳ್ಳಿ, ಅನ್ನಪೂ ರ್ಣೇಶ್ವರಿನಗರ,ವಿವೇಕನಗರ,ಬೆಳ್ಳಂದೂರು, ವಿಧಾನ ಸೌಧ,ಕೊತ್ತನೂರು,ಮಡಿವಾಳ, ಕೆ.ಆರ್.ಪುರಂ ಪೊಲೀಸ್ ಠಾಣೆಗಳಲ್ಲಿ ಹಗಲು ಮತ್ತು ರಾತ್ರಿ ಮನೆಗಳಿಗೆ ಕನ್ನ ಹಾಕಿ ಕಳ್ಳತನ ಮಾಡಿದ ದೂರುಗಳು ಇದ್ದವು.ಠಾಣೆಯ 3 ಮನೆಗಳವು,3 ಹಗಲು ಮತ್ತು ರಾತ್ರಿ ಕಳ್ಳತನ ಪ್ರಕರಣ ಗಳು ಸೇರಿದಂತೆ ಒಟ್ಟು ಆರು ಪ್ರಕರಣಗಳು ಪತ್ತೆಯಾಗಿವೆ. ಇನ್ಸ್ಪೆಕ್ಟರ್ ಅಶ್ವಥ್‍ಗೌಡ ಅವರ ನೇತೃತ್ವದ ತಂಡ ಆರೋ ಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ಸಂಸತ್ತು ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಶಾಸಕ NH ಕೋನರೆಡ್ಡಿ - ನೂತನ ವಿದ್ಯಾರ್ಥಿಗಳ ಸಂಸತ್ತು ನಾಯಕರಿಗೆ ಶುಭಹಾರೈಸಿದ ಜನಸೇವಕ.....ಅರುಣ ಮಜ್ಜಿಗೆ ಶಾಲಾ ಶಿಕ್ಷಕರು ಉಪಸ್ಥಿತಿ.....ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...