LIVE TV LocalCrimeNationalInternationalPoliticsEducationTechnologyEntertainmentSportsFeature
State News

ಸೆಕ್ಸ್ ಸಿಡಿ ವಿಚಾರದಲ್ಲಿ ಸ್ಪೋಟಕ ಮಾಹಿತಿ ನೀಡಿದ ಬಾಲಚಂದ್ರ ಜಾರಕಿಹೊಳಿ.....

ಬೆಂಗಳೂರು -

ಸೆಕ್ಸ್ ಸಿಡಿ ವಿಚಾರದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೊಸ ಬಾಂಬ್ ಹಾಕಿ ಸ್ಪೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು ಈ ಒಂದು ಸಿಡಿಯ ಹಿಂದೆ ಬರೊಬ್ಬರಿ 9 ಜನರು ಇದ್ದಾರೆ. ಅವರಲ್ಲಿ ಈಗಾಗಲೇ ಕೆಲವರ ಮಾಹಿತಿಯನ್ನು ಕಲೆಹಾಕಲಾಗಿದ್ದು ಇನ್ನೂ ಕೆಲವರ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದೇವೆ ಎಂದರು.

ಇನ್ನೂ ಇದರಲ್ಲಿ ಕೆಲವರು ಪ್ರಭಾವಿಗಳಿದ್ದು ಅವರ ಕುರಿತಂತೆ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದು ಸಂಪೂರ್ಣವಾಗಿ ಮಾಹಿತಿಯನ್ನು ತಗೆದುಕೊಂಡು ಮೂರು ನಾಲ್ಕು ದಿನಗಳಲ್ಲಿ ಮುಂದಿನ ಹೋರಾಟ ವನ್ನು ಆರಂಭ ಮಾಡುತ್ತೇವೆ ಎಂದರು.

ಇದರೊಂದಿಗೆ ಎಲ್ಲವನ್ನೂ ಪಡೆದುಕೊಂಡ ನಂತರ ಹೆಸರುಗಳೊಂದಿಗೆ ದೂರನ್ನು ನೀಡುತ್ತೇವೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು. ಮೂರು ನಾಲ್ಕು ದಿನಗಳಲ್ಲಿ ಸಿಡಿ ಸೂತ್ರದಾರರ ಸಂಪೂರ್ಣ ವಾದ ಮಾಹಿತಿಯನ್ನು ಬಿಚ್ಚಿಟ್ಟು ದೂರನ್ನು ನೀಡ ಲಾಗುತ್ತದೆ ಎಂದರು.

ಇದರಲ್ಲಿ ಕೆಲವರು ತುಂಬಾ ಪ್ರಭಾವಿಗಳಿದ್ದಾರೆ ಹೀಗಾಗಿ ಅವರ ಸಂಪೂರ್ಣವಾದ ಮಾಹಿತಿಯನ್ನು ತಗೆದುಕೊಳ್ಳಲು ತುಂಬಾ ತುಂಬಾ ವಿಳಂಬವಾಗಿದ್ದು ಮೂರು ನಾಲ್ಕು ದಿನಗಳಲ್ಲಿ ಎಲ್ಲವೂ ಸಿಗಲಿದೆ ಎಂದರು.ಯಾವುದೇ ಕಾರಣಕ್ಕೂ ಈ ಒಂದು ಪ್ರಕರ ಣದಲ್ಲಿ ಹಿಂದೆ ಸರಿಯೊದಿಲ್ಲ ದೂರನ್ನು ಕೊಟ್ಟೆ ಕೊಡುತ್ತೇವೆ ಹಾಗೇ ದೂರನ್ನು ಎಲ್ಲಿ ಕೊಡಬೇಕು ಎಂಬ ಕುರಿತಂತೆಯೂ ಚರ್ಚೆ ಮಾಡಿದ್ದು ಮೂರು ನಾಲ್ಕು ದಿನಗಳಲ್ಲಿ ಸಿಡಿ ಪ್ರಕರಣದ ಸ್ಪಷ್ಟವಾದ ಚಿತ್ರಣ ಸಿಗಲಿದೆ ಎಂದರು

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ - 40 ಸಾವಿರ ಲಂಚ ಸ್ವೀಕರಿಸುವಾಗ ಟ್ರ್ಯಾಪ್.....