LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಮನೆ ಕಳ್ಳತನ ಮಾಡುತ್ತಿದ್ದ ಸಹೋದರರ ಬಂಧನ - ಸಿಸಿಐಬಿ,ಸಿಸಿಬಿ ಪೊಲೀಸರ ಕಾರ್ಯಾಚರಣೆ

ಹುಬ್ಬಳ್ಳಿ -

ಹುಬ್ಬಳ್ಳಿ ಧಾರವಾಡ ಸಿಸಿಐಬಿ ಪೊಲೀಸರು ಕಾರ್ಯಾಚರಣೆ ಮಾಡಿ ಮನೆ ಕಳ್ಳತನ ಹಾಗೂ ಮೋಟಾರ್ ಸೈಕಲ ಕಳ್ಳತನ ಮಾಡುತ್ತಿದ್ದವರನ್ನು ಬಂಧಿಸಿದ್ದಾರೆ.ಇತ್ತೀಚಿನ ದಿನಗಳಲ್ಲಿ ಹುಬ್ಬಳ್ಳಿ ಧಾರವಾಡ ಅವಳಿ ಮಹಾನಗರಗಳಲ್ಲಿ ಇಂಥಹ ಪ್ರಕರಣಗಳು ಹೆಚ್ಚಾಗುತ್ತಿದ್ದವು. ಈ ನಿಟ್ಟಿನಲ್ಲಿ ಕಾರ್ಯಾಚರಣೆ ಮಾಡಿದ ಸಿಸಿಬಿಐ ಪೊಲೀಸರು ಇಬ್ಬರು ಖತರ್ನಾಕ್ ಖದೀಮರನ್ನು ಬಂಧಿಸಿದ್ದಾರೆ.

ಹಸನ್ ಬೇಗ್ ,ಆಸೀಫ್ ಬೇಗ್, ಬಂಧಿತ ಆರೋಪಿಗಳಾಗಿದ್ದಾರೆ‌. ಇಬ್ಬರು ಸಹೋದರರಾಗಿದ್ದು ಉಣಕಲ್ ಸಿದ್ದರಾಮೇಶ್ವರನಗರ ಟಿಂಬರ್ ಯಾರ್ಡ ಸ್ಲಂ ನಿವಾಸಿಗಳಾಗಿದ್ದಾರೆ‌.

ಇಬ್ಬರು ಬಂಧಿತ ಸಹೋದರರಿಂದ ಒಟ್ಟು 5,13.050 ರೂಪಾಯಿ ಮೌಲ್ಯದ ವಸ್ತುಗಳನ್ನು ಹಾಗೂ ಕೃತ್ಯಕ್ಕೆ ಬಳಿಸಿದ ದ್ವಿಚಕ್ರ ವಾಹನ, ಕಳ್ಳತನ ಮಾಡಿದ ಎರಡು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಸಿಐಬಿ ಮತ್ತು ಸಿಸಿಬಿ ಪೊಲೀಸ್ ಇನ್ಸ್ಪೆಕ್ಟರ್ ಗಳಾದ ಭರತ್‌ರೆಡ್ಡಿ, ಅಲ್ತಾಪ್ ಮುಲ್ಲಾ, ಎಂ ಎಂ ನದಾಫ ರವರ ನೇತೃತ್ವದಲ್ಲಿ ಸಿಬ್ಬಂದಿ ಗಳಾದ ಎ ಎಸ್ ಐ ಶಿವಾಜಿ ಸಾಳಂಕೆ, ಎಂ ಎಚ್ ಶಿವರಾಜ,ಎಂ ಎಸ್ ಚಿಕ್ಕಮಠ, ಎಸ್ ಪಿ.ಲಮಾಣಿ, ನೀಲಗಾರ, ಎಲ್ ವಿ ಗಾಣದಾಳ, ಅನಿಲಕುಮಾರ ಹುಗ್ಗಿ ,ಐ ಕೆ ಅತ್ತಾರ, ಆರ್ ಎಸ್ ಗುಂಜಳ, ಡಿ ಎನ್ ಗುಂಡಗಾಯಿ,, ಎಸ್ ಎಚ್ ಕೆಂಪೊಡಿ, ಎ ಆರ್ ಮರಿಯಪ್ಪನವರ, , ಬಿ ವಿ ಸಣ್ಣಪ್ಪನವರ, ರಾಜು,ರಾಘವೇಂದ್ರ ಬಡಂಕರ್ ಬಿಷ್ಟಂಡನವರ ,ರವಿ ,ಸಂತೋಷ ಇಚ್ಚಂಗಿ,ವಿಜಯ, ಮತ್ತು ಇತರೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಧಾರವಾಡ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಅಣ್ಣ ತಮ್ಮನನ್ನು ಜೈಲಿಗೆ ಕಳಿಸಿದ್ದಾರೆ.ಇನ್ನೂ ಉತ್ತಮವಾಗಿ ಕೆಲಸ ಮಾಡಿದ ಎರಡು ಟೀಮ್ ಗಳಿಗೆ ಪೊಲೀಸ್ ಆಯುಕ್ತರು ಹುಬ್ಬಳ್ಳಿ-ಧಾರವಾಡ ನಗರ ರವರು ಸದರಿಯವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಬಹುಮಾನ ಘೋಷಣೆ ಮಾಡಿದ್ದಾರೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ಸಂಸತ್ತು ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಶಾಸಕ NH ಕೋನರೆಡ್ಡಿ - ನೂತನ ವಿದ್ಯಾರ್ಥಿಗಳ ಸಂಸತ್ತು ನಾಯಕರಿಗೆ ಶುಭಹಾರೈಸಿದ ಜನಸೇವಕ.....ಅರುಣ ಮಜ್ಜಿಗೆ ಶಾಲಾ ಶಿಕ್ಷಕರು ಉಪಸ್ಥಿತಿ.....ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...