LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಶಿಕ್ಷಕರ ವರ್ಗಾವಣೆ ನಿಯಮ ಸ್ನೇಹಿಯಾಗಲಿ - ಡಾ.ಲತಾ.ಎಸ್. ಮುಳ್ಳೂರ ಆಗ್ರಹ.....

ಧಾರವಾಡ -

ಪ್ರತೀ ವರ್ಷ‌ ಮೇ ನಲ್ಲಿ ನಡೆಯಬೇಕಾದ ಶಿಕ್ಷಕರ ವರ್ಗಾವಣೆ ಹಲವಾರು ನಿಯಮಗಳ ಗೊಂದಲ ಹಾಗೂ ಕಾನೂನು ಸಮಸ್ಯೆಗಳ ಕಾರಣ ಎರಡು ಮೂರು ವರ್ಷಗಳಿಂದ ವರ್ಗಾವಣೆ ಪ್ರಕ್ರಿಯೆ ನಡೆದಿರುವುದಿಲ್ಲ.ಈ ವರ್ಷ ಘನ ಸರ್ಕಾರ ಈಗಾಗ ಲೇ ವರ್ಗಾವಣೆ ಪ್ರಕ್ರಿಯೆಗೆ ಸಿದ್ದತೆ ನಡೆಸಲು ಸೂಚ ನೆ ನೀಡಿರುವುದು ಸಂತೋಷಕರವಾದ ವಿಷಯವಾ ಗಿದೆ.ಶಿಕ್ಷಣ ಇಲಾಖೆಯು ಕೂಡಲೇ ವರ್ಗಾವಣೆಯ ಸಂಬಂಧ ಯಾವುದೇ ಗೊಂದಲಗಳಿಗೆ ಎಡೆಮಾಡ ದೇ ಸೂಕ್ತ ವರ್ಗಾವಣೆ ಮಾರ್ಗಸೂಚಿ ಸಿದ್ದಪಡಿಸಿ
ವರ್ಗಾವಣೆ ಪ್ರಕ್ರಿಯೆಗೆ ಚಾಲನೆ ನೀಡಬೇಕು ವರ್ಗಾವಣಾ ಮಾರ್ಗಸೂಚಿಯು ಪ್ರತಿ ಶಿಕ್ಷಕರ ಸ್ನೇಹಿಯಾಗಿರಬೇಕು ಎಂಬುದು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘದ ಸಂಸ್ಥಾ ಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್. ಮುಳ್ಳೂರ ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

೧) ಹಲವಾರು ವರ್ಷಗಳಿಂದ ಪ್ರಸ್ತುತ ಒಂದೇ ಶಾಲೆ ಯಲ್ಲಿ ಕೆಲಸ ನಿರ್ವಹಿಸುವ ಶಿಕ್ಷಕ-ಶಿಕ್ಷಕಿಯರಿಗೆ ಮೊದಲ ಆದ್ಯತೆಯಲ್ಲಿ ಅವರ ಕೋರಿಕೆ ಮೇರೆಗೆ ವರ್ಗಾವಣೆ ಮಾಡಬೇಕು ಆಗಮಾತ್ರ ಇದುವರೆಗೂ ಒಮ್ಮೆಯೂ ವರ್ಗಾವಣೆ ಆಗಿಲ್ಲದ ಶಿಕ್ಷಕರುಗಳಿಗೆ ನ್ಯಾಯ ಸಿಗುವಂತಾಗುತ್ತದೆ.

೨) ಹೆಚ್ಚುವರಿ ಶಿಕ್ಷಕರ ಜೇಷ್ಟ ಪಟ್ಟಿ ತಯಾರಿಸುವಂ ತೆಯೇ ಶಿಕ್ಷಕರ ಪೂರ್ಣ ಸೇವಾವಧಿಯನ್ನು ಪರಿಗ ಣಿಸದೆಯೇ ಪ್ರಸ್ತುತ ಶಾಲೆಯಲ್ಲಿನ ಸೇವಾವಧಿ ಯನ್ನು ಮಾತ್ರ ಆಧರಿಸಿ ವರ್ಗಾವಣೆ ಸಂಬಂಧ ಜೇಷ್ಟತಾ ಪಟ್ಟಿ ತಯಾರಿಸಬೇಕು

೩) ತೀವ್ರತರ ಖಾಯಿಲೆ,ವಿಕಲಚೇತನ,ವಿಧವಾ ಶಿಕ್ಷಕಿಯರಿಗೆ, ಬೇರೆ ಬೇರೆ ಜಿಲ್ಲೆ/ವಲಯಗಳಲ್ಲಿ ಇರುವಂತ ದಂಪತಿ‌ ಪ್ರಕರಣಗಳಿಗೆ ಹಿಂದಿನಿಂದಲೂ ಇದ್ದ ಹಾಗೆಯೇ ಜೇಷ್ಟತೆಯಲ್ಲಿ ಮೊದಲ ಆದ್ಯತೆ ಕಲ್ಪಿಸಬೇಕು

೪) ಪ್ರತೀ ತಾಲ್ಲೂಕಿನ ಖಾಲಿ‌ಹುದ್ದೆ ಶೇ.25% ಮಿತಿಯನ್ನು ರದ್ದುಪಡಿಸಬೇಕು.

೫) ಸೇವಾವಧಿಯಲ್ಲಿ ಒಮ್ಮೆಯಾದರೂ ಶಿಕ್ಷಕ-ಶಿಕ್ಷಕಿಯರುಗಳಿಗೆ ತಮ್ಮ ಸ್ವಂತ ಜಿಲ್ಲೆಗಳಿಗೆ ವರ್ಗಾವಣೆ ಪಡೆಯಲು ಅವಕಾಶ ಕಲ್ಪಿಸಬೇಕು

೬) ಪರಸ್ಪರ ವರ್ಗಾವಣೆಗೆ ನಿಗದಿ ಪಡಿಸಿರುವ ಏಳು ವರ್ಷದ ಮಿತಿಯನ್ನು ಮೂರು ವರ್ಷಕ್ಕೆ ಇಳಿಸ ಬೇಕು,ಬೇರೆ ಯಾವ ಷರತ್ತುಗಳನ್ನು ವಿಧಿಸಬಾ ರದು.

೭) ಕಲ್ಯಾಣ ಕರ್ನಾಟಕ ಭಾಗದ ಶಿಕ್ಷಕರುಗಳಿಗೆ ಇತರ ಭಾಗದ ಜಿಲ್ಲೆಗಳಿಗೆ ವರ್ಗಾವಣೆ ಹೊಂದಲು ಬಯಸಿದರೆ ಸುಲಭ ರೀತಿಯಲ್ಲಿ ಅವಕಾಶ ಕಲ್ಪಿಸಬೇಕು

ಆಗಮಾತ್ರ ಶಿಕ್ಷಕರುಗಳ ಸ್ನೇಹಿ‌ ವರ್ಗಾವಣೆ ಸಾದ್ಯ ಎಂದು ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ.ಲತಾ.ಎಸ್.ಮುಳ್ಳೂರ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಜ್ಯೋತಿ ಹೆಚ್ ರವರು ತಿಳಿಸಿದ್ದಾರೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ಸಂಸತ್ತು ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಶಾಸಕ NH ಕೋನರೆಡ್ಡಿ - ನೂತನ ವಿದ್ಯಾರ್ಥಿಗಳ ಸಂಸತ್ತು ನಾಯಕರಿಗೆ ಶುಭಹಾರೈಸಿದ ಜನಸೇವಕ.....ಅರುಣ ಮಜ್ಜಿಗೆ ಶಾಲಾ ಶಿಕ್ಷಕರು ಉಪಸ್ಥಿತಿ.....ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...