LIVE TV LocalCrimeNationalInternationalPoliticsEducationTechnologyEntertainmentSportsFeature
Local News

ಖಾಸಗಿ ವಾಹನಗಳ ಓಡಿಸಲು ಅಧಿಕಾರಿಗಳ ಪ್ಲಾನ್ - ಅಧಿಕಾರಿಗಳ ಮಾತಿಗೆ ಬಗ್ಗದ ನೌಕರರು

ಹುಬ್ಬಳ್ಳಿ ಧಾರವಾಡ - ಕೆಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿರುವ ಸಾರಿಗೆ ನೌಕರರ ಹೋರಾಟ ಮುಂದುವರೆದಿದೆ.ಎರಡು ದಿನಗಳಿಂದ ರಾಜ್ಯವ್ಯಾಪಿ ಸಾರಿಗೆ ನೌಕರರು ಹೋರಾಟವನ್ನು ಮಾಡ್ತಾ ಇದ್ದಾರೆ. ದಿನದಿಂದ ದಿನಕ್ಕೇ ಹೋರಾಟ ತೀವ್ರ ಸ್ವರೂಪವನ್ನು ಪಡೆದುಕೊಳ್ಳುತ್ತಿದ್ದು ಇವೆಲ್ಲದರ ನಡುವೆ ಇಲಾಖೆಯ ಅಧಿಕಾರಿಗಳು ಹೇಗಾದರೂ ಮಾಡಿ ಬಸ್ ಆರಂಭ ಮಾಡಬೇಕು. ಬಸ್ ಗಳಿಲ್ಲದೇ ಪರದಾಡುತ್ತಿರುವ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ತೆರೆ ಮರೆಯಲ್ಲಿ ಏನೇಲ್ಲಾ ಮಾಡುತ್ತಿದ್ದಾರೆ.

ಆದ್ರೂ ಯಾವುದು ಸಾಧ್ಯವಾಗುತ್ತಿಲ್ಲ. ಇನ್ನೂ ಪೊಲೀಸರ ಮೂಲಕ ಬಂಧನ ಮಾಡುವ ಪ್ಲಾನ್ ಮಾಡಿಸಿ ಅದು ಸಾಧ್ಯವಾಗದಿದ್ದಾಗ ಹುಬ್ಬಳ್ಳಿ ಧಾರವಾಡದಲ್ಲಿ ರಾತ್ರೊ ರಾತ್ರಿ ಸಾರಿಗೆ ಅಧಿಕಾರಿಗಳು ಮತ್ತೊಂದು ಪ್ರಯತ್ನವನ್ನು ಮಾಡಿದ್ರು.

ಹೌದು ಅವಳಿ ನಗರದ ಬಸ್ ನಿಲ್ದಾಣದಲ್ಲಿ ಎಲ್ಲೇಂದರಲ್ಲಿ ನಿಂತುಕೊಂಡಿರುವ ಬಸ್ ಗಳನ್ನು ಹೇಗಾದರೂ ಮಾಡಿ ಡಿಪೋ ಗಳಿಗೆ ಸೇರಿಸಿ ಬಸ್ ನಿಲ್ದಾಣಗಳನ್ನು ಖಾಲಿ ಮಾಡಿಸಿ ಖಾಸಗಿ ವಾಹನಗಳನ್ನು ಓಡಿಸಲು ಅಧಿಕಾರಿಗಳು ಯೋಜನೆ ಹಾಕಿಕೊಂಡು ನಿಲ್ದಾಣಗಳಲ್ಲಿ ಇದ್ದ ನೌಕರರಿಗೆ ತಮ್ಮ ತಮ್ಮ ಬಸ್ ಗಳನ್ನು ತಗೆದುಕೊಂಡು ಹೋಗುವಂತೆ ಹೇಳಿದರು.

ಅಧಿಕಾರಿಗಳು ಹೀಗೆ ಹೇಳುತ್ತಿದ್ದಂತೆ ಅವರ ಮಾತಿನ ಉದ್ದೇಶವನ್ನು ತಿಳಿದುಕೊಂಡ ನೌಕರರು ನಾವು ಯಾವುದೇ ಕಾರಣಕ್ಕೂ ಬಸ್ ಗಳನ್ನು ತಗೆದುಕೊಂಡು ಡಿಪೋ ಗಳಿಗೆ ಹೊಗೊದಿಲ್ಲ ನೀವು ಏನಾದರೂ ಮಡಿಕೊಳ್ಳಿ ಎಂದು ಖಡಕ್ ಆಗಿ ಹೇಳಿದರು.

ಹೀಗೆ ಹೇಳುತ್ತಿದ್ದಂತೆ ಮಾಡಿಕೊಂಡಿದ್ದ ಪ್ಲಾನ್ ಕೂಡಾ ಎಡವಟ್ಟಾಯಿತೆಂದುಕೊಂಡು ಸುಮ್ಮನಾದರೂ. ನಿಲ್ದಾಣಗಲ್ಲಿರುವ ಬಸ್ ಗಳನ್ನು ಡಿಪೋ ಗಳಿಗೆ ಕಳಿಸಿ ಖಾಲಿ ಮಾಡಿಸಿದ ನಂತರ ಖಾಸಗಿ ವಾಹನಗಳನ್ನು ಓಡಿಸೊದು ಅಧಿಕಾರಿಗಳ ಪ್ಲಾನ್ ಆಗಿತ್ತು.

ಆದರೆ ಪ್ಲಾನ್ ತಿಳಿದುಕೊಂಡ ನೌಕರರು ಇದಕ್ಕೇ ಒಪ್ಪದೇ ತಮ್ಮ ಪಾಡಿಗೆ ತಾವುಗಳು ಹೋರಾಟವನ್ನು ಮುಂದುವರೆಸಿದ್ರು. ಒಟ್ಟಾರೆ ಕೆಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡುತ್ತಿರುವ ಸಾರಿಗೆ ನೌಕರರ ಹೋರಾಟ ದಿನದಿಂದ ದಿನಕ್ಕೇ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು ಇನ್ನಾದರೂ ರಾಜ್ಯ ಸರ್ಕಾರ ಎಚ್ಚೇತ್ತುಕೊಂಡು ಇವರೊಂದಿಗೆ ಮಾತುಕತೆ ಮಾಡಬೇಕು ಇಲ್ಲವಾದ್ರೆ ಇನ್ನೂ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ಸಂಸತ್ತು ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಶಾಸಕ NH ಕೋನರೆಡ್ಡಿ - ನೂತನ ವಿದ್ಯಾರ್ಥಿಗಳ ಸಂಸತ್ತು ನಾಯಕರಿಗೆ ಶುಭಹಾರೈಸಿದ ಜನಸೇವಕ.....ಅರುಣ ಮಜ್ಜಿಗೆ ಶಾಲಾ ಶಿಕ್ಷಕರು ಉಪಸ್ಥಿತಿ.....ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...