LIVE TV LocalCrimeNationalInternationalPoliticsEducationTechnologyEntertainmentSportsFeature
State News

ಅತಂತ್ರದಲ್ಲಿ 100 ಕ್ಕೂ ಹೆಚ್ಚು ಶಿಕ್ಷಕರು - ಶಿಕ್ಷಕರ ಮನವಿಗೆ,ನೋವಿಗೆ ಸ್ಪಂದಿಸದ ಅಧಿಕಾರಿಗಳು.

ಬೆಂಗಳೂರು -

ಹೌದು ಇಂತಹ ದೊಂದು ಪ್ರಕರಣ ಬೀದರ್ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನಲ್ಲಿ ಬೆಳಕಿಗೆ ಬಂದಿದೆ ವಿವಿಧ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 119 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಮಾಸಿಕ ವೇತನ ಸಕಾಲಕ್ಕೆ ಸಿಗುತ್ತಿಲ್ಲ.ಇದರಿಂದಾಗಿ ಶಿಕ್ಷಕರು ತೊಂದರೆ ಅನುಭವಿಸುವಂತಾಗಿದೆ.

2023ರ ನವೆಂಬರ್‌ನಲ್ಲಿ ತಾಲ್ಲೂಕಿಗೆ 110 ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರು ನೇಮಕ ಗೊಂಡು ಶಾಲೆಗಳಿಗೆ ಹಾಜರಾಗಿದ್ದಾರೆ.ಅವರಲ್ಲದೇ ಶಾಲೆಗಳಲ್ಲಿ ಹುದ್ದೆಗಳು ಖಾಲಿ ಇಲ್ಲದ ಕಾರಣ, 9 ಶಿಕ್ಷಕರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೆಶಕರ ಕಚೇರಿಯಲ್ಲಿ ಹಾಜರಾಗಿ ವರದಿ ಮಾಡಿಕೊಂಡಿದ್ದರು.

ಒಟ್ಟು 119 ಶಿಕ್ಷಕರು ನಿರಂತರ ವೇತನ ಸಮಸ್ಯೆ ಎದುರಿಸುತ್ತಿದ್ದಾರೆ. 110 ಶಿಕ್ಷಕರ ವೇತನ 2023ರ ಮಾರ್ಚ್‌ನಿಂದ 2024ರ ಆಗಸ್ಟ್‌ವರೆಗೆ ಪಾವತಿ ಯಾಗಿದೆ. ಆದರೆ ಅವರು ನೇಮಕವಾಗಿದ್ದು, 2023ರ ನವೆಂಬರ್‌ನಲ್ಲಿ. ಹೀಗಾಗಿ ನವೆಂಬರ್, ಡಿಸೆಂಬರ್, ಜನವರಿ ಮತ್ತು ಫೆಬ್ರುವರಿ.. ಹೀಗೆ ನಾಲ್ಕು ತಿಂಗಳ ವೇತನ 10 ತಿಂಗಳಾದರೂ ಬಂದಿಲ್ಲ. ಇದು ಬಾಕಿ ಇರಿಸಿಕೊಳ್ಳಲಾಗಿದೆ ಎಂಬುದು ಶಿಕ್ಷಕರ ಆರೋಪ.

ಈ ಬಗ್ಗೆ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ವಿಚಾರ ಮಾಡಿದರೆ ಬಜೆಟ್ ಬಂದ ಮೇಲೆ ಮಾಡುತ್ತೇವೆ ಎನ್ನುತ್ತಿದ್ದಾರೆ ಎಂಬುದು ಶಿಕ್ಷಕರ ಅಳಲಾಗಿದೆ. 2023ರ ನವೆಂಬರ್‌ನಲ್ಲಿ ನೇಮಕವಾಗಿ ಡಿಡಿಪಿಐ ಕಚೇರಿಯಲ್ಲಿ ಸೇವೆಗೆ ವರದಿ ಮಾಡಿಕೊಂಡ 9 ಶಿಕ್ಷಕರಲ್ಲಿ (2 ಶಿಕ್ಷಕರಿಗೆ) ಇಬ್ಬರಿಗೆ ಮಾತ್ರ ವೇತನ ದೊರಕಿದೆ.

ಮಾರ್ಚ್‌ 2023ರಿಂದ ಸೆಪ್ಟೆಂಬರ್-2024ರವರೆಗೆ ವೇತನ ಪಾವತಿಸಲಾಗಿದೆ.ಇಬ್ಬರು ಸರ್ಕಾರಿ ಸೇವೆ ಯಲ್ಲಿ ದ್ವಿತೀಯ ದರ್ಜೆಸಹಾಯಕರಾಗಿದ್ದರು. ಹೀಗಾಗಿ ಅವರಿಗೆ ವೇತನ ಬೇಗ ಲಭಿಸಿದೆ. ಉಳಿದವರು ವೇತನಕ್ಕಾಗಿ ಜಾತಕ ಪಕ್ಷಿಯಂತೆ 11 ತಿಂಗಳಿನಿಂದ ಕಾಯುವಂತಾಗಿದೆ.

ಡಿಡಿಪಿಐ ಕಚೇರಿಯಲ್ಲಿ ವರದಿ ಮಾಡಿಕೊಂಡಿದ್ದವರ ಪೈಕಿ 9 ಮಂದಿಗೆ ಕಳೆದ ಜೂನ್ ತಿಂಗಳಲ್ಲಿ ತಾಲ್ಲೂಕಿನ ವಿವಿಧ ಶಾಲೆಗಳಲ್ಲಿ ಸ್ಥಳ ನಿಯುಕ್ತಿಗೊಳಿಸಲಾಗಿದೆ. ಅವರ ವೇತನ ವಿಳಂಬಕ್ಕೆ ಎನ್‌ಪಿಎಸ್ ಮತ್ತು ಕೆಜಿಐಡಿ ಹಾಗೂ ಎಚ್‌ಆರ್‌ಎಂಎಸ್ ಆಗದ ಕಾರಣ ವೇತನ ಸಮಸ್ಯೆ ಎದುರಿಸುವಂತಾಗಿದೆ.

ಹೊರತಾಗಿಯೂ ಪದವೀಧರ ಶಿಕ್ಷಕರಿಗೆ ನಿರಂತರ ವೇತನ ಲಭಿಸುವಂತಾಗಲು ಇವರು ಪ್ರತಿ 3 ತಿಂಗಳಿ ಗೊಮ್ಮೆ ಬಜೆಟ್ ತರಿಸಿಕೊಂಡು ವೇತನ ಪಾವತಿಸು ವಂತಾಗಿದೆ.ಆದರೆ ಅವರನ್ನು ನಾನ್ ಪ್ಲಾನ್‌ನಲ್ಲಿ ಸೇರಿಸಿದ್ದರೆ ಎಲ್ಲಾ ಶಿಕ್ಷಕರಂತೆ ನಮಗೂ ನಿಗದಿತ ಸಮಯದಲ್ಲಿ ವೇತನ ಪಡೆಯಬಹುದಾಗಿದೆ ಎಂದು ಶಿಕ್ಷಕರು ಹೇಳುತ್ತಿದ್ದಾರೆ

ಸುದ್ದಿ ಸಂತೆ ನ್ಯೂಸ್ ಚಿಂಚೊಳಿ.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ಸಂಸತ್ತು ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಶಾಸಕ NH ಕೋನರೆಡ್ಡಿ - ನೂತನ ವಿದ್ಯಾರ್ಥಿಗಳ ಸಂಸತ್ತು ನಾಯಕರಿಗೆ ಶುಭಹಾರೈಸಿದ ಜನಸೇವಕ.....ಅರುಣ ಮಜ್ಜಿಗೆ ಶಾಲಾ ಶಿಕ್ಷಕರು ಉಪಸ್ಥಿತಿ.....ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...