LIVE TV LocalCrimeNationalInternationalPoliticsEducationTechnologyEntertainmentSportsFeature
Entertainment News

'ಲವ್ ಇನ್ ಲಾಕ್ ಡೌನ್' - ಚಿತ್ರೀಕರಣ ಆರಂಭ

ಬೆಂಗಳೂರ -

ಶ್ರೀ ಕನ್ನಡಾಂಬೆ ಮೂವೀಸ್ ಬ್ಯಾನರ್ ನ ಅಡಿಯಲ್ಲಿ ಮಂಜುನಾಥ್ ಬಿ ರಾಮ್ ರ ಕಥೆ ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ 'ಲವ್ ಇನ್ ಲಾಕ್ ಡೌನ್' ಚಿತ್ರದ ಚಿತ್ರಿಕರಣ ಭರದಿಂದ ನಡೆದಿದೆ.ಲಾಕ್ ಡೌನ್ ಸಮಯದಲ್ಲಿ ನಡೆದ ಪ್ರೀತಿ ಪ್ರೇಮ ಪ್ರಣಯ ಹಾಗೂ ದುರಂತವೊಂದನ್ನು ಕಣ್ಣಾರೆ ಕಂಡು ತನ್ನ ಕಣ್ಮುಂದೆ ನಡೆದ ನೈಜ್ಯ ಘಟನೆಯನ್ನು ಸಿನಿಮಾ ರೂಪಕ್ಕೆ ತಂದು ನಿರ್ಮಿಸುತ್ತಿರುವ ಚಿತ್ರ ಲವ್ ಇನ್ ಲಾಕ್ ಡೌನ್ ಚಿತ್ರ‌ .

ನಿರ್ದೇಶಕನಾಗುವ ಕನಸು ಕಾಣುವ ಹುಡುಗನೊಬ್ಬ ಕಥೆಯೊಂದರ ಹುಡುಕಾಟದಲ್ಲಿರುವ ನಾಯಕ ನಟನಿಗೆ ಹುಡುಗಿಯೊಬ್ಬಳು ಪರಿಚಯವಾಗಿ.ಆಕೆಯೊಂದಿಗೆ ಪ್ರೀತಿ ರೂಪಗೊಳ್ಳುತ್ತದೆ.ಆದರೆ ವಿಧಿ ಕರೊನ ಕಂಟಕದಲ್ಲಿ ದೂಡಿ ಬಲಿತೆಗೆದುಕೊಳ್ಳುವ ದೃಷ್ಟಾಂತ ಕಥೆ ಇದರಲ್ಲಿದೆ.ಇತ್ತೀಚೆಗೆ ಚಿಕ್ಕಬಳ್ಳಾಪುರದ ರಂಗಸ್ಥಳದ ಶ್ರೀ ರಂಗನಾಥಸ್ವಾಮಿ ದೇವಾಲಯದಲ್ಲಿ ಮುಹೂರ್ತ ಆಚರಿಸಿಕೊಳ್ಳುವುದರ ಜೊತೆಗೆ ನಾ ಕನ್ನಡಿಗನೆಂದುಕೊಂಡು ಬಾಳು ಮಗಾ ಎನ್ನುವ ಕನ್ನಡದ ಮತ್ತು ಕನ್ನಡ ನಾಡಿನ ಮಹತ್ವ ಸಾರುವ ಗೀತೆಯನ್ನು ಸುಮಾರು 40 ಮಂದಿ ನೃತ್ಯ ಕಲಾವಿದರನ್ನು ಬಳಸಿ ಚಿತ್ರೀಕರಿಸಲಾಯಿತು.

ಲವ್ ಇನ್ ಲಾಕ್ ಡೌನ್ ಚಿತ್ರಕ್ಕೆ ಎಂ ನಾರಾಯಣಸ್ವಾಮಿ ಯವರು ಬಂಡವಾಳ ಹೂಡಿದ್ದಾರೆ.ನಾಯಕನಟನಾಗಿ ಉದಯೋನ್ಮುಖ ಪ್ರತಿಭೆ ಮಂಜುನಾಥ್ ಮತ್ತು ನಾಯಕಿಯಾಗಿ ಯಶಸ್ವಿ ನಟಿಸುತ್ತಿದ್ದಾರೆ.ಯಶಸ್ವಿ ಈ ಹಿಂದೆ ಲೆಕ್ಕಾಚಾರ ಎಂಬ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದು ಇದು ಎರಡನೇ ಚಿತ್ರವಾಗಿದೆ.ಚಿತ್ರದಲ್ಲಿ ಕಿಲ್ಲರ್ ವೆಂಕಟೇಶ್ ಬ್ಯಾಂಕ್ ಜನಾರ್ದನ್ ,ಗಣೇಶ್ ರಾವ್ ,ಬಲರಾಮ್ ಪಾಂಚಾಲ್, ಪಲ್ಲವಿ, ರಾಜೇಂದ್ರ.ಅಪ್ಪು ಶ್ರೀನಾಥ್,ಸಂತೋಷ್ ರೆಹಮಾನ್ ಮೊದಲಾದವರು ಈ ಒಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ.

ರಮೇಶ್ ಕೊಯಿರಾ ಛಾಯಾಗ್ರಹಣ, ಡ್ಯಾನಿಯಲ್ ಸಂಗೀತ ನಿರ್ದೇಶನ,ಪ್ರಸನ್ನ ಮತ್ತು ಬ್ಲೂಸ್ಟಾರ್ ಸಂತೋಷ್ ನೃತ್ಯ, ಶಿವು ಸಾಹಸ,ನಾಗಸುಮಂತ್ ಸ್ಥಿರಚಿತ್ರಣ ,ಡಾ.ಪ್ರಭು ಗಂಜಿಹಾಳ , ಹಿರಿಯ ಪತ್ರಕರ್ತ ಡಾ.ವೀರೇಶ್ ಹಂಡಗಿ ರವರ ಪ್ರಚಾರ ಕಲೆ ಹಾಗೂ ಹಲವಾರು ಚಲನಚಿತ್ರಗಳನ್ನು ನಿರ್ದೇಶಿಸಿರುವ ಯುವ ನಿರ್ದೇಶಕ ರಾಜೀವ್ ಕೃಷ್ಣ ಈ ಚಿತ್ರ ನಿರ್ಮಾಣ ನಿರ್ವಹಣೆಯ ಜವಾಬ್ದಾರಿ ಹೊತ್ತಿದ್ದಾರೆ.

ಈಗಾಗಲೇ ಚಿತ್ರಿಕರಣ ಆರಂಭಗೊಂಡಿದ್ದು ಇದರೊಂದಿಗೆ ಇನ್ನೂ ಮೂರು ಹಂತದಲ್ಲಿ ಚಿತ್ರೀಕರಣ ನಡೆಯಲಿದ್ದು ಚಿಕ್ಕಬಳ್ಳಾಪುರ , ಕೊಲಾರ ಗಜೇಂದ್ರಗಡ , ಬಾಗಲಕೋಟ ಜಿಲ್ಲೆಯಲ್ಲಿ ಚಿತ್ರೀಕರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಪ್ರಚಾರ ಕಲೆಯ ಜವಾಬ್ದಾರಿ ಹೊತ್ತುಕೊಂಡಿರುವ ಹಿರಿಯ ಪತ್ರಕರ್ತ ಡಾ ವಿರೇಶ ಹಂಡಗಿ ಸುದ್ದಿ ಸಂತೆ ವೇಬ್ ನ್ಯೂಸ್ ಗೆ ಹೇಳಿದ್ದಾರೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ಸಂಸತ್ತು ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಶಾಸಕ NH ಕೋನರೆಡ್ಡಿ - ನೂತನ ವಿದ್ಯಾರ್ಥಿಗಳ ಸಂಸತ್ತು ನಾಯಕರಿಗೆ ಶುಭಹಾರೈಸಿದ ಜನಸೇವಕ.....ಅರುಣ ಮಜ್ಜಿಗೆ ಶಾಲಾ ಶಿಕ್ಷಕರು ಉಪಸ್ಥಿತಿ.....ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...