LIVE TV LocalCrimeNationalInternationalPoliticsEducationTechnologyEntertainmentSportsFeature
State News

ಗುತ್ತಿಗೆದಾರನ ವಿರುದ್ಧ ಸಚಿವರು ಗರಂ

ಬೀದರ್ -

ಹೇಳದೇ ಕೇಳದೇ ಕಾಮಗಾರಿ ಆರಂಭಿಸೊಕೆ ನಿನೇನು ನಿಮ್ಮಪ್ಪನ ರಾಜ್ಯದಲ್ಲಿ ಇದ್ದಿಯಾ. ಹೀಗೆಂದು ರಾಜ್ಯ ಸರ್ಕಾರದ ಸಚಿವರೊಬ್ಬರು ಹೇಳಿದ್ದಾರೆ. ಹೌದು ಪವರ್ ಪ್ಲಾಂಟ್ ಕಾಮಗಾರಿ ವಿಚಾರದಲ್ಲಿ ಸಚಿವರನ್ನು ಕೇಳದೆ ಗುತ್ತಿಗೆದಾರನೊಬ್ಬ ಕಾಮಗಾರಿ ಆರಂಭ ಮಾಡಿದ್ದಾರೆ. ಗಮನಕ್ಕೆ ತರಲಾರದೇ ಕಾಮಗಾರಿ ಆರಂಭ ಮಾಡಿದಕ್ಕೆ ಸಚಿವ ಪ್ರಭು ಚೌಹಾನ್ ಜೇಸ್ಕಾಂ ಗುತ್ತಿಗೆದಾರನ ವಿರುದ್ಧ ಕಿಡಿಕಾರಿದ್ದಾರೆ.

ಜೇಸ್ಕಾಂ ಪವರ್ ಸ್ಟೇಷನ್ ಗುತ್ತಿಗೆದಾರನ ವಿರುದ್ಧ ಸಚಿವರು ರಾಂಗ್ ರಾಂಗ್ ಆಗಿ ಮಾತುಗಳನ್ನು ಆಡಿದ್ದಾರೆ. ಲೇಬರ್ ಕಾಂಟ್ರ್ಯಾಕ್ಟರ್ ರಮೇಶ್ ಮೇಲೆ ಈ ಒಂದು ದರ್ಪವನ್ನು ತೋರಿಸಿದ ಸಚಿವರು ಜನರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಕೆಲಸ‌ ಮಂಜೂರು ಮಾಡಿದ್ದವರು ನಾವು.ದುಂಬಾಲು ಬಿದ್ದು ಸರ್ಕಾರದಲ್ಲಿ ಕೆಲಸ ಮಂಜೂರು ಮಾಡಿದ್ದೇವೆ. ನೀನು ನನಗೆ ಹೇಳದೇ ಕೇಳದೇ ಕೆಲಸ ಆರಂಭಿಸಿದರೇ ನನ್ನ ಹೆಸರು ಹೇಗೆ ಆಗಬೇಕು.ನಮ್ಮ ಗಮನಕ್ಕೆ ತಂದು ಕೆಲಸ ಆರಂಭಿಸಬೇಕು.ಯಾರು ಆಫೀಸರು, ಯಾರು ಗುತ್ತಿಗೆದಾರ ಎಂದು ಸಚಿವರು ಬಹಿರಂಗವಾಗಿ ಮಾತನಾಡಿದ್ದಾರೆ. ಯನಗುಂದಾ ಬಳಿ ಪವರ್ ಪ್ಲ್ಯಾಂಟ್ ಗೆ ಭೇಟಿ ವೇಳೆ ಸಚಿವರು ದರ್ಪವನ್ನು ತೋರಿದ್ದಾರೆ.ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಯನಗುಂದಾ ಬಳಿ ಈ ಒಂದು ಘಟನೆ ನಡೆದಿದೆ. ಕಾಮಗಾರಿ ಆರಂಭಿಸಿದ ಅಧಿಕಾರಿಗೆ ಸಚಿವ ಪ್ರಭು ಚೌಹಾನ್ ಬಹಿರಂಗವಾಗಿ ಆವಾಜ್ ಹಾಕಿರುವ ವಿಡಿಯೋ ಈಗ ವೈರಲ್ ಆಗಿದ್ದು ಬೀದರ್ ಜಿಲ್ಲಾ ಉಸ್ತುವಾರಿ ಸಚಿವರ ಬಾಯಿಯಲ್ಲಿ ಎಂಥ ಮಾತು ಎಂದು ಬೀದರ್ ಜಿಲ್ಲೆಯ ಜನರು ಈಗ ಮಾತನಾಡಿಕೊಳ್ಳುತ್ತಿದ್ದಾರೆ‌.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ - 40 ಸಾವಿರ ಲಂಚ ಸ್ವೀಕರಿಸುವಾಗ ಟ್ರ್ಯಾಪ್.....