LIVE TV LocalCrimeNationalInternationalPoliticsEducationTechnologyEntertainmentSportsFeature
State News

ವಿವಾಹಕ್ಕೇ ವಿರೋಧ –ಅಪ್ಪಿಕೊಂಡು ನಾಲೆಗೆ ಬಿದ್ದ ಪ್ರೇಮಿಗಳಿಬ್ಬರು ಆತ್ಮಹತ್ಯೆ

ತುಮಕೂರು -

ಅಂತರ್ಜಾತಿ ವಿವಾಹಕ್ಕೇ ಮನೆಯವರು ವಿರೋಧ ಮಾಡಿದ್ದಾರೆಂದು ನೊಂದಕೊಂಡ ಇಬ್ಬರು ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ. ಕಳೆದ ಹಲವು ವರುಷಗಳಿಂದ ರಮೇಶ ಮತ್ತು ಸುಶ್ಮೀತಾ ಪರಸ್ಪರ ಪ್ರೀತಿಸುತ್ತದ್ದರು. ಇನ್ನೇನು ವಿವಾಹ ಮಾಡಿಕೊಳ್ಳಬೇಕು ಎನ್ನುವಷ್ಟರಲ್ಲಿ ಮನೆಯವರು ವಿರೋಧ ಮಾಡುತ್ತಿದ್ದರಂತೆ. ಇವರಿಬ್ಬರ ವಿವಾಹಕ್ಕೇ ಜಾತಿ ಅಡ್ಡಿಯಾಗಿದ್ದು ಮನೆಯವರು ಒಪ್ಪೊದಿಲ್ಲ ಎಂದು ಆರೋಪಿಸಿರುವ ಇಬ್ಬರು ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ತುಮಕೂರಿನ ಹೇಮಾವತಿ ನಾಲೆಗೆ ಇಬ್ಬರು ಪ್ರೇಮಿಗಳಿಬ್ಬರೂ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ರಮೇಶ ಮತ್ತು ಸುಶ್ಮಿತಾ ಮೃತ ಪ್ರೇಮಿಗಳಾಗಿದ್ದಾರೆ. ಅಂತರ್ಜಾತಿ‌ ಕಾರಣಕ್ಕೆ‌ ಮನೆಯವರ ವಿರೋಧಕ್ಕೆ ಹೆದರಿ ಹೇಮಾವತಿ ಕಾಲುವೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನವೆಂಬರ್ 16 ರಂದು ಬಾಗೂರು ಬಳಿಯ ಹೇಮಾವತಿ ಕಾಲುವೆ ಸುರಂಗದ ಬಳಿ ಬೈಕ್ ನಿಲ್ಲಿಸಿದ ಇಬ್ಬರು ಆತ್ಮಹತ್ಯೆ ಶರಣಾಗಿದ್ದಾರೆ.

ಚನ್ನರಾಯಪಟ್ಟಣ ತಾಲ್ಲೂಕಿನ ಬಾಗೂರು ಗ್ರಾಮ ತಾಲ್ಲೂಕಿನ ಹಿರೀಸಾವೆ ಗ್ರಾಮದ ಸುಶ್ಮಿತ(18), ಹಾಗೂ ಮತಿಘಟ್ಟ ಗ್ರಾಮದ ರಮೇಶ್(19) ಮೃತರಾಗಿದ್ದಾರೆ. ಐಟಿಐ ಓದುತ್ತಿದ್ದ ರಮೇಶ್‌ ಹಾಗೂ ಪದವಿ ಓದುತ್ತಿದ್ದ ಸುಸ್ಮಿತಾ ನಡುವೆ ಪ್ರೀತಿ ಮೂಡಿತ್ತು.ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರು ಜೋಡಿಗಳ ಮದುವೆಗೆ ಮನೆಯವರ ವಿರೋಧಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರೊ ಯುವ ಜೋಡಿ ಬಾಗೂರು ಸುರಂಗ ಬಳಿ ಬೈಕ್ ನಿಲ್ಲಿಸಿ ಬೈಕ್ ಬಳಿ ಇಬ್ಬರ ಚಪ್ಪಲಿ ಬಿಟ್ಟು ಕಾಲುವೆಗೆ ಜಿಗಿದಿದ್ದಾರೆ.

ಪ್ರೇಮಿಗಳು ಪರಸ್ಪರ ಅಪ್ಪಿಕೊಂಡು ಹಗ್ಗ ಕಟ್ಟಿಕೊಂಡು ಕಾಲುವೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರೇಮಿಗಳ ಮೃತದೇಹ ಕಾಲುವೆಯಲ್ಲಿ ತೇಲಿಹೋಗೋ ವೀಡಿಯೋ ವೈರಲ್ ಆಗಿದ್ದು ತುಮಕೂರು ಜಿಲ್ಲೆ ನೊಣವಿನಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತ ಹಾಸನದ ಹಿರಿಸಾವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ‌ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. ಇವೆಲ್ಲದರ ನಡುವೆ ಈಗ ಇಬ್ಬರ ಮೃತ ದೇಹಗಳು ಸಿಕ್ಕಿದ್ದು ಸ್ಥಳಕ್ಕೇ ಭೇಟಿ ನೀಡಿರುವ ನೋವಿನಕೇರೆ ಪೊಲೀಸರು ತನಿಖೆ ಮಾಡ್ತಾ ಇದ್ದಾರೆ.

ಇನ್ನೂ ಮನಸ್ಸು ಮಾಡಿದರೆ ಇವರಿಬ್ಬರು ಮನೆಯಲ್ಲಿ ಪಾಲಕರೊಂದಿಗೆ ಮಾತನಾಡಿಕೊಂಡು ಹೇಗಾದರೂ ಮಾಡಿ ಒಪ್ಪಿಸಬಹುದಿತ್ತ ಇಲ್ಲವೇ ಮದುವೆಯಾಗಿಯಾದ್ರೂ ಬದುಕಬಹುದಿತ್ತು ಇವೆರಡನ್ನು ಮಾಡದೇ ನಮ್ಮ ಮದುವೆಗೆ ಕುಟುಂಬದವರು ಅಡ್ಡಿ ಮಾಡುತ್ತಿದ್ದಾರೆ ಒಪ್ಪುತ್ತಿಲ್ಲವೆಂದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ನಿಜಕ್ಕೂ ವಿಷಾದದ ಸಂಗತಿಯಾಗಿದೆ. ಇಬ್ಬರ ಮೃತ ದೇಹಗಳು ಇಂದು ಬೆಳಿಗ್ಗೆ ತಿಪಟೂರು ತಾಲ್ಲೂಕಿನ ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ - 40 ಸಾವಿರ ಲಂಚ ಸ್ವೀಕರಿಸುವಾಗ ಟ್ರ್ಯಾಪ್.....