LIVE TV LocalCrimeNationalInternationalPoliticsEducationTechnologyEntertainmentSportsFeature
State News

ಸರಕಾರಿ ಶಾಲೆಯಲ್ಲಿ ಕೊಳೆತ ಮೊಟ್ಟೆ ವಿತರಣೆ - ಭುಗಿಲೆದ್ದ ಆಕ್ರೋಶ ಅಸಮಧಾನ.....

ಬೀದರ್ -

ಹೌದು ಇಂತಹ ದೊಂದು ಆರೋಪ ಘಟನೆ ಯೊಂದು ಬೀದರ್ ನಲ್ಲಿ ಬೆಳಕಿಗೆ ಬಂದಿದೆ ಸರಕಾರಿ ಶಾಲೆಯಲ್ಲಿ ಕೊಳೆತ ಮೊಟ್ಟೆ ವಿತರಣೆ ಮಾಡಿದ್ದರಿಂದಾಗಿ ಮೊಟ್ಟೆ ಸೇವನೆ ಮಾಡಿದ ವಿದ್ಯಾರ್ಥಿಗಳಲ್ಲಿ ಹೊಟ್ಟೆನೋವು ಕಾಣಿಸಿಕೊಂಡ ಘಟನೆ ಖಾಸಿಂಪುರ್ (ಸಿ) ಗ್ರಾಮದಲ್ಲಿ ನಡೆದಿದೆ.ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಿಸುವ ಉದ್ದೇಶ ದಿಂದ ರಾಜ್ಯದ ಸರಕಾರಿ ಶಾಲೆಗಳಲ್ಲಿ ವಾರದ ಆರು ದಿನಗಳು ಮೊಟ್ಟೆಗಳನ್ನು ವಿತರಿಸಲಾಗುತ್ತಿದೆ.

ಆದರೆ ಬೀದರ್ ತಾಲ್ಲೂಕಿನ ಖಾಸಿಂಪುರ್ (ಸಿ) ಗ್ರಾಮ ದಲ್ಲಿ ಕಳೆದ ಕೆಲವು ದಿನಗಳಿಂದ ಕೊಳೆತ ಮೊಟ್ಟೆಗಳು ವಿತರಿಸುತ್ತಿದ್ದರಿಂದ ಮಕ್ಕಳ ಹೊಟ್ಟೆಯಲ್ಲಿ ನೋವು ಕಾಣಿಸಿಕೊಂಡಿದೆ.ಕಳೆದ ಒಂದು ತಿಂಗಳಿನಿಂದ ನಮಗೆ ಕೊಳೆತ, ರಬ್ಬರ್ ನಂತಿರುವ ಮೊಟ್ಟೆಗಳು ವಿತರಿಸಲಾಗು ತ್ತಿದೆ. ಇದನ್ನು ನಾವು ಮುಖ್ಯೋಪಾಧ್ಯಯರಿಗೆ ತಿಳಿಸಿ ದರೆ ಅವರು ಏನೂ ಆಗುವುದಿಲ್ಲ ಅದನ್ನೇ ತಿನ್ನಿ ಎಂದು ತಾಕಿತು ಮಾಡುತ್ತಾರೆ ಎಂದು ವಿದ್ಯಾರ್ಥಿಗಳು ಆರೋಪಿ ಸಿದ್ದಾರೆ.

ಮೊಟ್ಟೆಗಳು ಕೆಟ್ಟ ವಾಸನೆ ಬರುತ್ತಿದ್ದರಿಂದ ಕೆಲ ವಿದ್ಯಾರ್ಥಿಗಳು ಮೊಟ್ಟೆ ತಿನ್ನುವುದು ಬಿಟ್ಟಿದ್ದೇವೆ. ಆದರೆ ಮೊಟ್ಟೆ ಸೇವನೆ ಮಾಡಿದ ವಿದ್ಯಾರ್ಥಿಗಳಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿದೆ ಎಂದು ವಿದ್ಯಾರ್ಥಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.ಕೆಲ ದಿನಗಳಿಂದ ನನ್ನ ಮಗಳ ಹೊಟ್ಟೆ ನೋವಾಗುತ್ತಿತ್ತು. ಸ್ಕ್ಯಾನಿಂಗ್ ಮಾಡಿದರೆ ಯಾವುದೇ ರೀತಿಯ ರೋಗಗಳು ಕಂಡು ಬಂದಿಲ್ಲ.

ಕೊನೆಗೆ ವೈದ್ಯರು ಫುಡ್ ಪಾಯಿಸನ್ (ವಿಷಹಾರ) ಆಗಿದೆ ಎಂದು ಹೇಳಿದರು. ಮೊನ್ನೆ ನನ್ನ ಮಗ ಶಾಲೆ ಯಿಂದ ಮೊಟ್ಟೆ ತಂದು ತೋರಿಸಿದನು. ಅದು ಸಂಪೂರ್ಣವಾಗಿ ಕೆಟ್ಟು ವಾಸನೆ ಬರುತಿತ್ತು. ನಾನು ಶಾಲೆಗೆ ಭೇಟಿ ನೀಡಿ ಇದರ ಬಗ್ಗೆ ಮುಖ್ಯೋಪಾಧ್ಯ ಯರಿಗೆ ತಿಳಿಸಿದ್ದೇನೆ. ಆದರೆ ಅವರು ಇದರ ಬಗ್ಗೆ ಗಮನ ಹರಿಸಲಿಲ್ಲ. ಶಾಲೆಯಲ್ಲಿ ಇನ್ನು 350 ಮೊಟ್ಟೆಗಳಿದ್ದು, ಅವೆಲ್ಲ ಸಂಪೂರ್ಣವಾಗಿ ಕೆಟ್ಟು ರಬ್ಬರ್ ನಂತಾಗಿವೆ ಎಂದು ಪೋಷಕರೊಬ್ಬರು ತಮ್ಮ ಅಳಲು ತೋಡಿ ಕೊಂಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಬೀದರ್.....

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ಸಂಸತ್ತು ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಶಾಸಕ NH ಕೋನರೆಡ್ಡಿ - ನೂತನ ವಿದ್ಯಾರ್ಥಿಗಳ ಸಂಸತ್ತು ನಾಯಕರಿಗೆ ಶುಭಹಾರೈಸಿದ ಜನಸೇವಕ.....ಅರುಣ ಮಜ್ಜಿಗೆ ಶಾಲಾ ಶಿಕ್ಷಕರು ಉಪಸ್ಥಿತಿ.....ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...