ಬೆಳಗಾವಿ -
ಡಿಕೆ ಶಿವಕುಮಾರ್ ವಾಹನ ಹಾಗೂ ಎಸ್ಕಾರ್ಟ್ ವಾಹನಗಳ ಮೇಲೆ ಚಪ್ಪಲಿ ಎಸೆತ, ಕಲ್ಲು ತೂರಾಟ ಮಾಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ ವಿಮಾನ ನಿಲ್ದಾಣದಿಂದ ತೆರಳುವಾಗ ರಮೇಶ್ ಜಾರಕಿಹೊಳಿ ಬೆಂಬಲಿಗರು ಕಾರ್ಯಕರ್ತ ರು ಮುಖಂಡರು ಅಭಿಮಾನಿಗಳು ಡಿಕೆಶಿ ಹೊರ ಟಿದ್ದ ವಾಹನಗಳ ಮೇಲೆ ಕಲ್ಲು ತೂರಾಟ ಮಾಡಿ ಚಪ್ಪಲಿ ಎಸೆದೆರು

ಬೆಳಗಾವಿ ಲೋಕಸಭಾ ಚುನಾವಣೆ ವಿಚಾರ ಕುರಿತು ಪಕ್ಷದ ಮುಖಂಡರೊಂದಿಗೆ ಚರ್ಚಿಸಲು ಡಿಕೆಶಿ ಬೆಳಗಾವಿ ಯಲ್ಲಿ ಸಭೆ ಮಾಡಲಿದ್ದು ಇದಕ್ಕಾಗಿ ನಗರಕ್ಕೆ ಆಗಮಿಸುತ್ತಿದ್ದಂತೆ ಇವರಿಗೆ ವಿರೋಧ ವ್ಯಕ್ತಪಡಿಸಿದರು
https://youtu.be/DaaaYIi_duc
ಇನ್ನೂ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಕೂಡಾ ಹರಸಾಹಸ ಪಟ್ಟು ಕೊನೆಯಲ್ಲಿ ಲಘು ಲಾಠಿ ಪ್ರಹಾರ ಮಾಡಿದರು.ಡಿಕೆಶಿ ಕಾರ್ ತೆರಳು ವಾಗ ಮುತ್ತಿಗೆಗೆ ಯತ್ನಿಸಿದ ನೂರಾರು ಬೆಂಬಲಿಗರು ರಸ್ತೆಯಲ್ಲಿ ಈ ಒಂದು ಘಟನೆ ನಡೆಯಿತು ಇನ್ನೂ ಡಿಕೆಶಿ ಸಭೆ ಹಿನ್ನೆಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪೊಲೀಸ್ ಭದ್ರತೆ ಒದಗಿಸಲಾಗಿದೆ