LIVE TV LocalCrimeNationalInternationalPoliticsEducationTechnologyEntertainmentSportsFeature
Local News

ದೂರದೃಷ್ಟಿಯ ಹಾಗೂ ನವ. ಭಾರತ ನಿರ್ಮಾಣದ ಐತಿಹಾಸಿಕ ಬಜೆಟ್ - ಪ್ರಲ್ಹಾದ ಜೋಶಿ.....

ನವದೆಹಲಿ -

ಕೇಂದ್ರ ಅರ್ಥ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ೨೦೨೨-೨೩ ನೇ ಸಾಲಿನ ಆಯ ವ್ಯಯ ಆರೋಗ್ಯ ಹಾಗೂ ಸಮೃದ್ಧ ಭಾರತ ನವನಿರ್ಮಾ ಣದ ಐತಿಹಾಸಿಕ ಹೆಜ್ಜೆಯಾಗಿದೆಯೆಂದು ಕೇಂದ್ರ ಸಂಸ ದೀಯ ವ್ಯವಹಾರಗಳ ಸಚಿವ ಶ್ರೀ ಪ್ರಲ್ಹಾದ ಜೋಶಿ ಬಣ್ಣಿಸಿದ್ದಾರೆ.ಈ ಅಯವ್ಯಯದಲ್ಲಿ ಆರು ಮುಖ್ಯ ಆಧಾರ ಸ್ಥಂಭಗಳನ್ನು ಪರಿಚಯಿಸಿದ ಅರ್ಥಸಚಿವರು ಇದರ ಒಟ್ಟು ಸಾರವಾಗಿ ಈ ದಶಮಾನದ ಪ್ರಥಮ ಅಯವ್ಯಯ ಹೇಗೆ ಕೋವಿಡ್ ನಂತರದ ಭಾರತ ದೇಶ ಮುಂಬರುವ ವರ್ಷ ಗಳಲ್ಲಿ ಆರೋಗ್ಯ ಹಾಗೂ ಸಮೃದ್ಧ ಭಾರತವಾಗಿ ಆತ್ಮ ನಿರ್ಭರ ದೇಶವಾಗಿ ಹೊರ ಹೊಮ್ಮುವುದೆಂಬುದನ್ನು ದೇಶದ ಮುಂದೆ ವಿಸ್ತೃತವಾಗಿ ವಿವರಿಸಿದ್ದಾರೆ. ಹೊಸ ಆರೋಗ್ಯ ಹಾಗೂ ಸಮೃದ್ಧ ಭಾರತದ ನಿರ್ಮಾಣದ ಮುಖ್ಯ ಸಂಕೇತವಾಗಿದೆ ಎಂದು ಜೋಶಿ ಹೇಳಿದ್ದಾರೆ.

ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲ ಒದಗಿಸುವ ನಿಟ್ಟಿ ನಲ್ಲಿ ೨೦೨೨-೨೩ ವರ್ಷದಿಂದಲೇ ಇ-ಪಾಸ್ಪೋರ್ಟ್ಗಳನ್ನು ಜಾರಿಗೆ ತರಲಾಗುವುದೆಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿರುವುದು ವಿದ್ಯಾರ್ಥಿಗಳಿಗೆ ಹಾಗೂ ಉದ್ಯಮಿಗಳಿಗೆ ಬಾರಿ ಅನುಕೂಲವಾಗುವು ದಲ್ಲದೇ ಈ ಮೂಲಕ ಪಾಸ್ಪೋರ್ಟ್ ವ್ಯವಸ್ಥೆಯನ್ನು ಸರಳೀಕರಣಗೊಳಿಸಿದಂತಾಗಿದೆ ಎಂದಿದ್ದಾರೆ.ನಿನ್ನೆ ಮಾನ್ಯ ರಾಷ್ಟ್ರಪತಿಗಳು ತಮ್ಮ ಭಾಷಣದಲ್ಲಿ ಪ್ರತಿಫಲಿಸಿದಂತೆ ಕೃಷಿ ಕಲ್ಯಾಣದ ಗ್ರಾಮಾಭಿವೃದ್ಧಿ ಜೊತೆಯಾಗಿ ನಗರಾಭಿವೃದ್ಧಿ ಆಡಳಿತದ ಎಲ್ಲಾ ಸ್ಥರಗಳಲ್ಲಿ ತಂತ್ರಜ್ಞಾನದ ರಚನಾತ್ಮಕ ಉಪಯೋಗ ಮೂಲಭೂತ ನಿರ್ಮಾಣದ ಎಲ್ಲ ಕ್ಷೇತ್ರಗ ಳಲ್ಲಿ ಆತ್ಮನಿರ್ಭರ ಭಾರತದ ಕಲ್ಪನೆ ಬಡಜನರ ಹಾಗೂ ರೈತರ ಕಲ್ಯಾಣ ಹಾಸುಹೊಕ್ಕಾಗಿರುವಂತೆ ಮಾನ್ಯ ಅರ್ಥ ಸಚಿವರು ನೋಡಿಕೊಂಡಿರುವುದು ಮುಂಬರುವ ವರ್ಷಗ ಳಲ್ಲಿ ಭಾರತ ನವಭಾರತವಾಗಿ ಜಾಗತಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂಬ ಪಕ್ಕಾ ಭವಿಷ್ಯ ಇದರಲ್ಲಿ ಅಡಗಿದೆಯೆಂಬುದು ಸ್ಪಷ್ಟವಾಗಿದೆ ಎಂದು ಸಚಿವ ಜೋಶಿ ವಿವರಿಸಿದ್ದಾರೆ.

ಈ ಬಜೆಟ್ಟಿನ ಮತ್ತೊಂದು ಪ್ರಮುಖ ಧ್ಯೇಯ ಎಂದರೆ ಬಡವರ ಅಭಿವೃದ್ಧಿಯಾಗಿದೆ.ಬಡವರಿಗೆ ಮನೆ, ಶೌಚಾ ಲಯ,ಗ್ಯಾಸ್ ಸಂಪರ್ಕ,ಇಂಟರ್ನೆಟ್ ಸಂಪರ್ಕ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಒತ್ತು ನೀಡಲಾಗಿದೆ ಇನ್ನು ಪರ್ವತ ಪ್ರದೇಶಗಳಲ್ಲಿನ ಜನರು ಮೂಲಭೂತ ಸೌಕ ರ್ಯಗಳಿಲ್ಲದೇ ಅಲ್ಲಿಂದ ಪಲಾಯನ ಮಾಡಬಾರದು. ಹಿಮಾಲಯ ಉತ್ತರಖಂಡ,ಜಮ್ಮು ಕಾಶ್ಮೀರ ಸೇರಿದಂತೆ ಪರ್ವತ ಪ್ರದೇಶಗಳ ರಾಜ್ಯಗಳ ಅಭಿವೃದ್ಧಿಗೆ ಪರ್ವತ ಮಾಲಾ ಯೋಜನೆ ಜಾರಿಗೊಳಿಸಲಾಗಿದೆ. ಮೂಲಸೌ ಕರ್ಯ,ಹೈವೇಗಳು,೪೦೦ ರೈಲು ಯೋಜನೆಗಳು ಘೋಷ ಣೆಯಾಗಿದೆ.ಇದರಿಂದ ಕೋಟ್ಯಂತರ ಉದ್ಯೋಗಗಳು ಸಿಗಲಿವೆ.ನದಿಗಳ ಜೋಡಣೆ,ಪ್ರತಿ ಮನೆಗಳಿಗೂ ಶುದ್ಧ ಕುಡಿಯುವ ನೀರಿನ ಸಂಪರ್ಕ ಒದಗಿಸುವುದು ಹಾಗೂ ಪ್ರಧಾನಮಂತ್ರಿ ಆವಾಸ್ ಯೋಜನೆಗೆ ಒತ್ತು ನೀಡಿ, ೨೦೨೩ ರ ವರ್ಷವನ್ನು ಅಂತರಾಷ್ಟ್ರೀಯ ಸಿರಿಧಾನ್ಯ ವರ್ಷವೆಂದು ಘೋಷಣೆ ಮಾಡಿದ್ದು, ಒಟ್ಟಾರೆಯಾಗಿ ಜನಪರವಾದ ಆಯವ್ಯಯ ಇದಾಗಿದೆ ಎಂದೂ ಜೋಶಿ ಹೇಳಿದ್ದಾರೆ.

ರಕ್ಷಣಾ ಕ್ಷೆತ್ರದಲ್ಲಿ ಶೇ. ೬೮% ರಷ್ಟು ದೇಶಿಯ ವಸ್ತು ಖರೀದಿ ೨೦೨೨ ರ ೫ ಜಿ ತರಲು ಮುಂದಾಗಿ ಬಹುದಿನದ ಕನಸು ನನಸಾಗಿಸಿದ್ದಾರೆ. ದೇಶದಲ್ಲಿ ಎಲ್ಲೇ ಇದ್ರೂ ಭೂಮಿ ಖರೀದಿ ಸಲು ರಿಜಿಸ್ಟರ್ ಮಾಡಿಸಲು ಅನುವು ಮಾಡಿ ರೋದು ಒಳ್ಳೆಯದು. ಮಹಿಳೆಯ ಸಬಲೀಕರಣಕ್ಕಾಗಿ ಮಿಷನ್ ಶಕ್ತಿ ಜಾರಿಗೆ ತಂದಿದ್ದಾರೆ. ರಕ್ಷಣಾ ಕ್ಷೇತ್ರದಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಸರ್ಕಾರ ಒತ್ತು ನೀಡಲಿದೆ. ಡಿಆ ರ್ಡಿಓ ಸಹಯೋಗದಲ್ಲಿ ಸಂಶೋಧನೆಗಳನ್ನು ನಡೆಸಲು ಆಸಕ್ತರಿಗೆ ಅವಕಾಶ ನೀಡಲಾಗುವುದು. ಭದ್ರತೆಗೆ ಅಗತ್ಯ ವಿರುವ ಯುದ್ಧೋಪಕರಣಗಳೂ ಸೇರಿದಂತೆ ಎಲ್ಲ ಬಗೆಯ ಆಯುಧಗಳ ದೇಶೀ ಉತ್ಪಾದನೆಗೆ ಹೆಚ್ಚು ಒತ್ತು ನೀಡಲಾ ಗುವುದು. ಅಗತ್ಯ ಅನುಕೂಲಗಳನ್ನೂ ಕಲ್ಪಿಸಲಾಗಿದೆಯ ಲ್ಲದೇ, ರೈತರಿಗಾಗಿ ‘ಒನ್ ಸ್ಟೇಷನ್ ಒನ್ ಪ್ರಾಡಕ್ಟ್’ ಯೋಜನೆ ಅನುಷ್ಠಾನಗೊಳಿಸಲಾಗುವುದು.ನಾಲ್ಕು ಸ್ಥಳಗ ಳಲ್ಲಿ ಮಲ್ಟಿ ಮಾಡೆಲ್ ಲಾಜೆಸ್ಟಿಕ್ ಪಾರ್ಕ್ ಸ್ಥಾಪಿಸಲು ಯೋಜನೆ ರೂಪಿಸಿರುವುದು ರೈತ ವಲಯದಲ್ಲಿ ಹರ್ಷ ತಂದಿದೆ, ಪ್ರಧಾನ ಮಂತ್ರಿ ಗತಿಶಕ್ತಿ ಮಾಸ್ಟರ್ ಪ್ಲಾನ್ ಮೂಲಕ ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಮೂಲಸೌ ಕರ್ಯ ಅಭಿವೃದ್ಧಿಗೆ ಒತ್ತು ನೀಡಲಾಗಿದೆ. ರಾಷ್ಟ್ರೀಯ ಮೂಲಸೌಕರ್ಯ ಪೈಪ್ಲೈನ್ ರೂಪುರೇಷೆ ಮೂಲಕ ದೇಶದ ಭವಿಷ್ಯ ಅವಶ್ಯಕತೆಗಳನ್ನು ಅರಿತುಕೊಳ್ಳಲು ಮತ್ತು ಅದನ್ನು ಸಾಕಾರಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಕೃಷಿ ವಲಯದಲ್ಲಿ ಡ್ರೋನ್ ಬಳಕೆಗೆ ಕೇಂದ್ರ ಮುಂದಾಗಿದೆ. ಬೆಳೆ ದಾಖಲು, ಬೆಳೆ ಮೌಲ್ಯಮಾಪನಕ್ಕೆ, ಕೀಟನಾಶಕಗ ಳನ್ನು ಸಿಂಪಡಿಸಲು ಕಸಾನ್ ಡ್ರೋನ್ ಬಳಕೆ ಉಪಯೋ ಗವಾಗುತ್ತದೆ ಎಂದೂ ಜೋಶಿಯವರು ಪ್ರತಿಕ್ರಯಿಸಿದ್ದಾರೆ.
ಬಂಡವಾಳ ವೆಚ್ಚದ ೩೫% ರಷ್ಟು ಬೃಹತ್ ಹೆಚ್ಚಳದಂತಹ ಕ್ರಮಗಳು ಆರ್ಥಿಕ ಬೆಳವಣಿಗೆಗಳಿಗೆ ಕಾರಣವಾಗಬಲ್ಲ ಉದ್ದಿಮೆ, ವ್ಯಾಪಾರ ವಹಿವಾಟುಗಳ ಮೇಲೆ ಅನುಕೂ ಲಕರ ಪರಿಣಾಮ ಬೀರಲಿದ್ದು ದೇಶದ ಮಾರುಕಟ್ಟೆಯಲ್ಲಿ ಹೊಸ ಚೈತನ್ಯ ತುಂಬುವುದಲ್ಲದೇ ಚೇತೋಹಾರಿ ವಾತಾ ವರಣ ಬರಲಿದೆ. ಸರಕಾರದ ಪ್ರತಿ ರೂಪಾಯಿಯನ್ನೂ ಅರ್ಥ ಪೂರ್ಣವಾಗಿ ವೆಚ್ಚಮಾಡಿ ಮೋದಿಯವರ ಆತ್ಮನಿ ರ್ಭರ ಭಾರತದ ಕಲ್ಪನೆಯನ್ನು ಸಾಕಾರಗೊಳಿಸುವು ದರೊಂದಿಗೆ ದೇಶ ಬಡಜನರ ಹಿಂದುಳಿದ ಹಾಗೂ ರೈತರ ಕಲ್ಯಾಣ ಹಾಗೂ ಅವರ ಆರ್ಥಿಕ ಹಾಗೂ ಸರ್ವತೋ ಮುಖ ಅಭಿವೃದ್ಧಿಗೆ ಒತ್ತು ನೀಡುವ ಮೂಲಕ ಅರ್ಥ ಪೂರ್ಣ ಸಮತೋಲನದ ಬಜೆಟ್ ಐತಿಹಾಸಿಕವಾಗಿದೆ. ಭೂದಾಖಲೆಯ ಖಚಿತವಾದ ಮಾಹಿತಿ ನೀಡುವಲ್ಲಿ ಕೃಷಿ ಡ್ರೋನ್ಗಳ ಬಳಕೆ ಕ್ರಿಪ್ಟೋ ಕರೇನ್ಸಿ ಮೇಲಿನ ಕರ ಆಕರಣೆ ಡಿಜಿಟಲ್ ಕರೇನ್ಸಿ, ಪ್ರಧಾನಮಂತ್ರಿ ಗತಿಶಕ್ತಿ ಯೋಜನೆ, ದೇಶದ ಎಲ್ಲಾ ಗ್ರಾಮಗಳಲ್ಲಿ ಆಪ್ಟಿಕಲ್ ಫೈಬರ್ ಸಂಪರ್ಕ ಸಾಧನೆಗಳ ಉಪಯೋಗದಂತಹ ಕ್ರಮಗಳು ಇದು ಹಿಂದಿನ ಭಾರತವಲ್ಲ, ಜಾಗತಿಕವಾಗಿ ಮುನ್ನಡೆಯುತ್ತಿರುವ ನವಭಾರತ ನಿರ್ಮಾಣದ ಬಜೆಟ್ ಎಂದು ಶ್ರೀ ಜೋಶಿ ಕೊಂಡಾಡಿದ್ದಾರೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸಿಗಲಿದೆ ಸ್ಥಾನ CM ಭರವಸೆ - ಸಚಿವ ಸ್ಥಾನ ನಿರೀಕ್ಷೆ ಯಲ್ಲಿದ್ದ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದ ನಾಡ ದೊರೆ.....ಶಾಲಾ ಸಂಸತ್ತು ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಶಾಸಕ NH ಕೋನರೆಡ್ಡಿ - ನೂತನ ವಿದ್ಯಾರ್ಥಿಗಳ ಸಂಸತ್ತು ನಾಯಕರಿಗೆ ಶುಭಹಾರೈಸಿದ ಜನಸೇವಕ.....ಅರುಣ ಮಜ್ಜಿಗೆ ಶಾಲಾ ಶಿಕ್ಷಕರು ಉಪಸ್ಥಿತಿ.....ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....