LIVE TV LocalCrimeNationalInternationalPoliticsEducationTechnologyEntertainmentSportsFeature
State News

ಹಲವರ ಜೀವ ಉಳಿಸಿ ಆಪತ್ಭಾಂಧವ ನಾಗಿದ್ದ ಪ್ರವೀಣ್ BJP ಪಕ್ಷದ ಸಂಘಟನೆ ಮಾಡುತ್ತಾ ಪರೋಪಕಾರ ಗುಣದಿಂದ ಲೇ ಮಾದರಿ.....

ಪುತ್ತೂರು -

ಹತ್ಯೆಯಾಗಿರುವ ಪ್ರವೀಣ್ ಕೇವಲ ಬಿಜೆಪಿ ಪಕ್ಷದ ಕಾರ್ಯಕರ್ತನಾಗಿರದೆ ಇದರೊಂದಿಗೆ ಹತ್ತು ಹಲವಾರು ಸಾಮಾಜಿಕ ಕೆಲಸ ಕಾರ್ಯಗಳ ಮೂಲಕ ಅದರಲ್ಲೂ ಹಲವರ ಜೀವವನ್ನು ಉಳಿಸುವ ಮೂಲಕ ಆಪತ್ಭಾಂಧವ ನಾಗಿದ್ದರು.ಹೌದು ಹಲವರ ಜೀವ ಉಳಿಸಿದ ಆಪತ್ಭಾಂ ಧವ ಈ ಪ್ರವೀಣ.ಪಾರ್ಥಿವ ಶರೀರದ ಯಾತ್ರೆ ಸಾಗುವ ಲ್ಲೆಲ್ಲ ಕೇಳಿಬಂದ ಒಂದು ಸಾಮಾನ್ಯ ಮಾತೆಂದರೆ ಈ ಪ್ರವೀಣ ಹಲವರ ಜೀವವನ್ನು ಉಳಿಸಿದ್ದ ಆಪತ್ಭಾಂಧವ ಎಂಬುದು.

ಪ್ರವೀಣ ಅವರ ಇತಿಹಾಸವನ್ನು ನೋಡಿದರೆ ಅಪರಾಧ ಪ್ರಕರಣದ ಯಾವುದೇ ಚಹರೆ ಇರಲಿಲ್ಲ.ತಮ್ಮ ಸಮುದಾ ಯದ ಸಂಘಟನೆ,ಊರಿನ ಸಂಘಟನೆಗಳು ಹಾಗೂ ಬಿಜೆಪಿಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು ಇಷ್ಟೆಲ್ಲ ಇದ್ದರೂ ಪ್ರವೀಣ್‌ ಎಲ್ಲರಿಗೂ ಇಷ್ಟವಾಗಿದ್ದುದು ಅವರ ಪರೋಪಕಾರದ ಗುಣದಿಂದಲೇ.

ಒಂದು ಮಿಸ್ಡ್ ಕಾಲ್‌ಕೊಟ್ಟರೆ ಸಾಕು.ಎಷ್ಟೇ ಹೊತ್ತಿರಲಿ ಎಲ್ಲಿಂದಲೇ ಇರಲಿ.ವಾಪಸು ಕರೆ ಮಾಡಿ ಏನು ಸಮಾ ಚಾರ ಎಂದು ವಿಚಾರಿಸುತ್ತಿದ್ದರು.ಅಗತ್ಯವಿದ್ದರೆ ಹೋಗಿ ಸಹಾಯ ಮಾಡುತ್ತಿದ್ದರು.ಎಂಥದ್ದೇ ಕಷ್ಟವಿರಲಿ ಅಲ್ಲಿಗೆ ಹಾಜರಾಗಿ ಸಹಾಯ ಹಸ್ತ ಚಾಚುತ್ತಿದ್ದರು.ಹಾಗೆಂದು ಸಿಕ್ಕಾಪಟ್ಟೆ ಶ್ರೀಮಂತರೇನೂ ಆಗಿರಲಿಲ್ಲ.ಆದರೆ ಹೃದಯ ಶ್ರೀಮಂತಿಕೆಯಿಂದ ಕೂಡಿತ್ತು ಈ ಪ್ರವೀಣ್ ನಲ್ಲಿ

ಹತ್ತಾರು ಬಾರಿ ರಕ್ತದಾನ ಮಾಡಿ ಹಲವರ ಜೀವ ಉಳಿಸಿ ದ್ದರು.ರಕ್ತದಾನ,ಕಷ್ಟದಲ್ಲಿ ರುವವರಿಗೆ ಸಹಾಯ ಮಾಡುವು ದರಲ್ಲಿ ಹಿಂಜರಿದವರಲ್ಲ ಪ್ರವೀಣ್‌.ಹಾಗಾಗಿ ಈ ಸಾವು ಬರೀ ಪ್ರವೀಣ್‌ ಮನೆಗಷ್ಟೇ ಆಲ್ಲ ನೆಟ್ಟಾರು ಪರಿಸರದ ಪ್ರತಿ ಮನೆಯಲ್ಲಿಯೂ ಪ್ರವೀಣ್‌ ಸಾವಿನ ಸೂತಕದ ಛಾಯೆ ಎದ್ದು ಕಾಣುತ್ತಿತ್ತು.

ಜೀವನೋತ್ಸಾಹಸದ ಚಿಲುಮೆ
ನೆಟ್ಟಾರಿನಲ್ಲಿ ಯುವಕ ಮಂಡಲದ ಕಾರ್ಯ ಕ್ರಮಗಳಲ್ಲಿ ಸದಾ ಸಕ್ರಿಯವಾಗಿದ್ದವರು ಪ್ರವೀಣ್‌. ಜೀವನೋತ್ಸಾಹ ಸದಾ ಪುಟಿ ಯುತ್ತಿತ್ತು. ಸರಕಾರಿ ಸವಲತ್ತುಗಳನ್ನು ಎಲ್ಲ ಜನರಿಗೂ ತಲುಪಿಸಲು ವಿವಿಧ ರೀತಿಯಲ್ಲಿ ಪ್ರಯತ್ನಿಸುತ್ತಿದ್ದರು. ಶಿಬಿರಗಳನ್ನು ಆಯೋ ಜಿಸುವುದು, ಮಾಹಿತಿ ಕಾರ್ಯಕ್ರಮ ನೀಡುವುದು ಹೀಗೆ-ಹತ್ತಾರು ಚಟುವಟಿಕೆಗಳ ಮೂಲಕ ಜನರಿಗೆ ಆಪ್ತರಾಗಿದ್ದರು. ಪುತ್ತೂರಿನ ವಿಜಯ ಸಾಮ್ರಾಟ್‌ ಸಂಘಟನೆಯಲ್ಲೂ ಸಕ್ರಿಯರಾಗಿದ್ದರು.

ಬಿಲ್ಲವ ಸಮುದಾಯದ ಸಂಘಟನೆಯ ನೇತೃತ್ವದಲ್ಲಿ ತನ್ನೂರಿನಲ್ಲಿ ಕೆಸರು ಗದ್ದೆಯಂತಹ ತುಳುನಾಡಿನ ಕ್ರೀಡಾ ಕೂಟ ಆಯೋಜಿಸಿದ್ದರು.ಸಾಂಸ್ಕೃತಿಕ,ಧಾರ್ಮಿಕ ಕಾರ್ಯ ಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು.ಜನಾನುರಾಗಿಯಾ ಗಿದ್ದ ಪ್ರವೀಣರು ಯಾರೊಂದಿಗೂ ದ್ವೇಷ ಕಟ್ಟಿಕೊಂಡ ವರೂ ಇಲ್ಲ.

ನೆಟ್ಟಾರು,ಬೆಳ್ಳಾರೆ ಪರಿಸರದ ಬಹುತೇಕರಿಗೆ ಪ್ರವೀಣ ಪರಿಚಿತರೇ.ಸದಾ ಪರೋಪಕಾರ ಮಾಡುತ್ತಾ,ಕಷ್ಟದಲ್ಲಿದ್ದ ವರಿಗೆ ಸ್ಪಂದಿಸುತ್ತಿದ್ದ ಮನುಷ್ಯನಿಗೆ ಇಂಥ ದಾರುಣ ಸಾವೇ ಎಂಬ ಪ್ರಶ್ನೆ ಎಲ್ಲರದ್ದಾಗಿದೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ಸಂಸತ್ತು ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಶಾಸಕ NH ಕೋನರೆಡ್ಡಿ - ನೂತನ ವಿದ್ಯಾರ್ಥಿಗಳ ಸಂಸತ್ತು ನಾಯಕರಿಗೆ ಶುಭಹಾರೈಸಿದ ಜನಸೇವಕ.....ಅರುಣ ಮಜ್ಜಿಗೆ ಶಾಲಾ ಶಿಕ್ಷಕರು ಉಪಸ್ಥಿತಿ.....ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...