LIVE TV LocalCrimeNationalInternationalPoliticsEducationTechnologyEntertainmentSportsFeature
State News

ರಾಜ್ಯದ 21 ಪೊಲೀಸ್ ಅಧಿಕಾರಿ ಗಳಿಗೆ 'ರಾಷ್ಟ್ರಪತಿ' ಗೌರವ.....

ಬೆಂಗಳೂರು -

ರಾಜ್ಯದ ಇಬ್ಬರು ಎಡಿಜಿಪಿಗಳು ಸೇರಿದಂತೆ ಒಟ್ಟು 21 ಮಂದಿ ಪೊಲೀಸ್ ಅಧಿಕಾರಿಗಳಿಗೆ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಾಷ್ಟ್ರಪತಿಯವರ ವಿಶಿಷ್ಟ ಹಾಗೂ ಶ್ಲಾಘನೀಯ ಸೇವಾ ಪದಕ ದೊರೆತಿದೆ. ಜೊತೆಯಲ್ಲಿ ಸಿಐಎಸ್‍ಎಫ್‍ನ ಹಿರಿಯ ಅಧಿಕಾರಿಗೆ ಹಾಗೂ ಅಗ್ನಿಶಾಮಕ ದಳ ಗೃಹ ರಕ್ಷಕ ದಳದ ಸಿಬ್ಬಂದಿಗಳಿಗೂ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.

ರಾಷ್ಟ್ರಪತಿಯವರ ವಿಶಿಷ್ಟ ಸೇವಾ ಪದಕಕ್ಕೆ ಸಿಐಡಿ ಆರ್ಥಿಕ ಅಪರಾಧಗಳ ಎಡಿಜಿಪಿ ಉಮೇಶ್ ಕುಮಾರ್,ಆಂತರಿಕ ಭದ್ರತೆ ವಿಭಾಗದ ಎಡಿಜಿಪಿ ಅರುಣ್ ಚಕ್ರವರ್ತಿ ಅವರು ಭಾಜರಾಗಿದ್ದಾರೆ. ಶ್ಲಾಘನೀಯ ಸೇವಾ ಪದಕಕ್ಕೆ ಬೆಂಗಳೂರಿನ KSRP 3ನೇ ಬೆಟಾಲಿಯನ್‍ನ ಕಮಾಂಡೆಂಟ್ ಎಂ.ವಿ.ರಾಮಕೃಷ್ಣ ಪ್ರಸಾದ್,ಮಲ್ಲೇಶ್ವರ ಉಪ ವಿಭಾಗದ ಎಸಿಪಿ ಕೆ.ಎಸ್.ವೆಂಕಟೇಶ್ ನಾಯ್ಡು ಚಿಕ್ಕಪೇಟೆ ಉಪವಿಭಾಗದ ಎಸಿಪಿ ರವಿ.ಪಿ,ರಾಜ್ಯ ಗುಪ್ತವಾರ್ತೆ ವಿಭಾಗದ ಡಿವೈಎಸ್ಪಿ ನವೀನ್ ಕುಲಕರ್ಣಿ ದಕ್ಷಿಣ ವಿಭಾಗದ ತಲ್ಲಘಟ್ಟಪುರ ಪೊಲೀಸ್ ಠಾಣೆಯ ಇನ್‍ಸ್ಪೆಕ್ಟರ್ ಜಿ.ಸಿದ್ದರಾಜು,

ಎಸಿಬಿ ಇನ್ಸ್ಪೆಕ್ಟರ್ ಎನ್.ಜೆ.ದಯಾನಂದ್, ಕಲಬುರಗಿ ಗ್ರಾಮಾಂತರ ವೃತ್ತದ ಸಿಪಿಐ ಶಂಕರ ಗೌಡ ಪಾಟೀಲ್,ಬೆಳಗಾವಿಯ KSRP ತರಬೇತಿ ಶಾಲೆಯ ವಿಶೇಷ ಆರ್ ಎಸ್‍ಐ ಎಸ್.ಬಿ.ಮಾಳಗಿ, ರಾಜ್ಯ ಗುಪ್ತವಾರ್ತೆ ವಿಭಾಗದ ಮಹಿಳಾ ಪಿಎಸ್‍ಐ ಎಸ್.ಇ.ಗೀತಾ,KSRP 3ನೇ ಬೆಟಾಲಿಯನ್‍ನ ವಿಶೇಷ ಎಆರ್ ಎಸ್‍ಐ ಬಿ.ಎಸ್. ಗೋವರ್ಧನ ರಾವ್, ಮಂಗಳೂರು ನಗರದ ಸೈಬರ್ ಅಪರಾಧ ಗಳ ಠಾಣೆಯ ಎಎಸ್‍ಐ ಮೋಹನ್, ಬೆಂಗಳೂರಿನ ವೈರ್‍ಲೆಸ್ ವಿಭಾಗದ ಎಎಸ್‍ಐ ರಾಮನಾಯಕ್,

ತುಮಕೂರಿನ ಜಯನಗರ ಪೊಲೀಸ್ ಠಾಣೆಯ ಹೆಡ್‍ಕಾನ್‍ಸ್ಟೆಬಲ್ ಮೊಹಮ್ಮದ್ ಮುನಾವರ್ ಪಾಷಾ, ಬೆಂಗಳೂರಿನ KDRP 4ನೇ ಬೆಟಾಲಿಯ ನ್‍ನ ವಿಶೇಷ ಆರ್ ಎಚ್‍ಸಿ ಎಸ್.ಪಿ.ಕೆರುಟಗಿ, ಬಳ್ಳಾರಿ DAR ಎಎಚ್‍ಸಿ ಬಿ.ಎಸ್.ದಾದಾ ಅಮೀರ್ ಯಲಹಂಕ ಎಪಿಟಿಎಸ್‍ನ ಎಎಚ್‍ಸಿ ವಿ.ಸೋಮಶೇಖರ್ ಚಿಕ್ಕಮಗಳೂರು ಕಂಪ್ಯೂಟರ್ ವಿಭಾಗದ ಸಿಎಚ್‍ಸಿ ಆರ್.ಕುಮಾರ್, ಬೆಂಗಳೂರು KSRP 3ನೇ ಬೆಟಾಲಿಯನ್ ವಿಶೇಷ ಆರ್ ಎಚ್‍ಸಿ ಸಯ್ಯದ್ ಅಬ್ದುಲ್ ಖಾದರ್,ಹುಬ್ಬಳ್ಳಿ ಧಾರವಾಡದ ಸಿಸಿಆರ್‍ಬಿಯ ಸಿಎಚ್‍ಸಿ ಗೋಪಾಲ ದೇವೇಂದ್ರಪ್ಪ ಕೊಟಬಾಗಿ ಅವರಿಗೆ ಪ್ರಶಸ್ತಿ ಸಂದಿವೆ.

ಮಂಗಳೂರಿನ ಸಿಐಎಸ್‍ಎಫ್‍ನ ಸಹಾಯಕ ಕಮಾಂಡೆಂಟ್ ಸಂತೋಷ್‍ಕುಮಾರ್.ಪಿ ಅವರಿಗೂ ಶ್ಲಾಘನೀಯ ಸೇವಾ ಪದಕ ದೊರೆತಿದೆ.

ಗೃಹ ರಕ್ಷಕ ದಳ ಮತ್ತು ನಾಗರಿಕ ರಕ್ಷಣಾ ಪಡೆಯ ವಿಶೇಷ ಪದಕಕ್ಕೆ ಕರ್ನಾಟಕದ ಗೃಹ ರಕ್ಷಕ ದಳದ ಕಮಾಂಡೆಂಟ್ ಅಜ್ಮಲ್ ಸಾಕೀಬ್ ಮೊಹಮ್ಮದ್, ಫ್ಲಟೂನ್ ಕಮಾಂಡರ್ ಳಾದ ಸುಜೇಂದ್ರ ಕುಮಾರ್ ನಾರೇಪ್ಪ ಸಿ,ಜಗನ್ನಾಥ್ ಕರಿಯಪ್ಪ,ವಿಶೇಷ ಫ್ಲಟೂನ್ ಕಮಾಂಡರ್ ನಿಂಬಣ್ಣಗೌಡ,ನಾಗರಿಕ ರಕ್ಷಣಾ ಪಡೆಯ ವಿಭಾಗೀಯ ವಾರ್ಡನ್‍ಗಳಾದ ರಾಜೇಶ್ ಶಂಕರನಾರಾಯಣ ಮಾಕಂ,ಮೋಹನ್ ಕೃಷ್ಣಪ್ಪ ಅವರು ಭಾಜನರಾಗಿದ್ದಾರೆ.

ಅಗ್ನಿಶಾಮಕ ದಳದ ಫೈರ್ ಸ್ಟೇಷನ್ ಆಫೀಸರ್ ಬಿ.ಪಿ.ಕೃಷ್ಣಪ್ಪ, ಸಹಾಯಕ ಅಗ್ನಿಶಾಮಕ ಅಧಿಕಾರಿ ಚಿದಾನಂದ ದುಂಡಪ್ಪ ಮಾನೆ, ಮುಂಚೂಣಿ ಅಗ್ನಿಶಾಮಕ ಸಿಬ್ಬಂದಿ ಮೀರ್ ಮೊಹಮ್ಮದ್ ಗೌಸ್, ಚಾಲಕರುಗಳಾದ ಕೆ.ಆರ್.ಮಂಜುನಾಥ್, ಪ್ರಶಾಂತ್‍ಕುಮಾರ್ ಅವರುಗಳು ರಾಷ್ಟ್ರಪತಿ ಅವರ ಶೌರ್ಯ ಪದಕಕ್ಕೆ ಭಾಜನರಾಗಿದ್ದಾರೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ಸಂಸತ್ತು ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಶಾಸಕ NH ಕೋನರೆಡ್ಡಿ - ನೂತನ ವಿದ್ಯಾರ್ಥಿಗಳ ಸಂಸತ್ತು ನಾಯಕರಿಗೆ ಶುಭಹಾರೈಸಿದ ಜನಸೇವಕ.....ಅರುಣ ಮಜ್ಜಿಗೆ ಶಾಲಾ ಶಿಕ್ಷಕರು ಉಪಸ್ಥಿತಿ.....ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...