LIVE TV LocalCrimeNationalInternationalPoliticsEducationTechnologyEntertainmentSportsFeature
State News

ಪ್ರೇಮಿಗಳ ದಿನದಂದು ರಾಧೆ ಶ್ಯಾಮ್ ಟೀಸರ್ ರಿಲೀಸ್.......

ಬೆಂಗಳೂರು -

ಪ್ರಭಾಸ್‌-ಪೂಜಾ ಹೆಗ್ಡೆ ಅಭಿನಯದ ಬಹುನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾ ʻರಾಧೆ ಶ್ಯಾಮ್‌ʼ ಇದೇ 2021 ರ ಜುಲೈ 30 ಕ್ಕೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ಪೋಸ್ಟರ್‌ ನಿಂದಲೇ ಭಾರಿ ಸದ್ದು ಮಾಡಿದ್ದ ʻರಾಧೆ ಶ್ಯಾಮ್‌ʼ ಚಿತ್ರದ ಟೀಸರ್‌ ನ್ನು ವ್ಯಾಲಂಟೈನ್ಸ್‌ ಡೇ ಪ್ರಯುಕ್ತ ಚಿತ್ರ ತಂಡ UV Creations Youtube Channel‌ನಲ್ಲಿ ಇಂದು ಬಿಡುಗಡೆ ಮಾಡಿದೆ.

ರೋಮ್‌ನ ಅತ್ಯಂತ ರಮಣೀಯ ಪ್ರದೇಶವೊಂದರ ದೃಶ್ಯಗಳೊಂದಿಗೆ ಆರಂಭವಾಗುವ ಟೀಸರ್‌ ನಲ್ಲಿ ರೊಮೇನಿಯನ್ ರೈಲ್ವೆ ನಿಲ್ದಾಣದಲ್ಲಿ ಜನಸಮೂಹದ ನಡುವೆ ಪ್ರಭಾಸ್‌ - ಪೂಜಾ ಹೆಗ್ಡೆಯನ್ನ ಹುಡುಕುತ್ತಾ ಇಟಾಲಿಯನ್‌ ಭಾಷೆಯಲ್ಲಿ 'Sei Un Angelo? Devo Morire per incontrarti? ಎಂದು ಕರೆಯುವುದು ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸುತ್ತದೆ. ಆ ನಂತರ ಇಬ್ಬರ ನಡುವಿನ ಪ್ರೀತಿಯ ಸಂಭಾಷಣೆ ಹೈಲೈಟ್‌.

ಸದಾ ಆಕರ್ಷಕವಾಗಿರುವ ರೋಮ್ ಪಟ್ಟಣ ಮತ್ತು ಅಲ್ಲಿನ ಅರಣ್ಯದ ಸುಂದರ ಪ್ರದೇಶಗಳಲ್ಲಿ ʻರಾಧೆ ಶ್ಯಾಮ್‌ʼ ಚಿತ್ರೀಕರಣಗೊಂಡಿದ್ದು, ಚಿತ್ರ ರಸಿಕರಿಗೆ ರಸದೌತಣ ನೀಡಲಿದೆ. ಇದರ ಝಲಕ್‌ನ ಮೊದಲ ವಿಡಿಯೋದ ಮೂಲಕ ಪ್ರೇಕ್ಷಕರಿಗೆ ತೋರಿಸಿ ಕೊಟ್ಟಿದೆ ಚಿತ್ರತಂಡ. ಈ ದಶಕದ ಅತಿದೊಡ್ಡ ಪ್ರೇಮಕಥೆ ಅಂತಲೇ ಬಿಂಬಿತವಾಗಿರೋ ʻರಾಧೆ ಶ್ಯಾಮ್‌ʼ ಬಹುಭಾಷಾ ಚಿತ್ರವಾಗಿದ್ದು, ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಡಾ.ಯು.ವಿ.ಕೃಷ್ಣಂ ರಾಜು ಗರು ಮತ್ತು ಗೋಪಿಕೃಷ್ಣ ಚಲನಚಿತ್ರಗಳು ಪ್ರಸ್ತುತಪಡಿಸಿದ ಈ ಚಿತ್ರಕ್ಕೆ ರಾಧಾ ಕೃಷ್ಣ ಕುಮಾರ್ ನಿರ್ದೇಶಕರು. ಯುವಿ ಕ್ರಿಯೇಷನ್ಸ್ ನಿರ್ಮಾಣದ ಈ ಚಿತ್ರದಲ್ಲಿ ಪ್ರಭಾಸ್ ಮತ್ತು ಪೂಜಾ ಹೆಗ್ಡೆ ಮುಖ್ಯ ಪಾತ್ರದಲ್ಲಿದ್ದಾರೆ.ಈ ಚಿತ್ರವನ್ನು ವಂಶಿ, ಪ್ರಮೋದ್ ಮತ್ತು ಪ್ರಸೀಡಾ ನಿರ್ಮಿಸುತ್ತಿದ್ದಾರೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ಸಂಸತ್ತು ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಶಾಸಕ NH ಕೋನರೆಡ್ಡಿ - ನೂತನ ವಿದ್ಯಾರ್ಥಿಗಳ ಸಂಸತ್ತು ನಾಯಕರಿಗೆ ಶುಭಹಾರೈಸಿದ ಜನಸೇವಕ.....ಅರುಣ ಮಜ್ಜಿಗೆ ಶಾಲಾ ಶಿಕ್ಷಕರು ಉಪಸ್ಥಿತಿ.....ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...