LIVE TV LocalCrimeNationalInternationalPoliticsEducationTechnologyEntertainmentSportsFeature
State News

ಗೆಳೆಯಾ ಅಂತಾ ನಂಬಿದವನಿಗೆ ಮಾಡಿದ್ದೇನು ನೋಡಿ.

ಹಾಸನ -

ಸ್ನೇಹಿತನಿಗೆ ವಂಚಿಸಿದ್ದ ಖತರ್ನಾಕ್ ಕಿಲಾಡಿ ಆರೋಪಿಯನ್ನು ಹಾಸನದಲ್ಲಿ ಬಂಧಿಸಲಾಗಿದೆ. ಆರೋಪಿಯ ಖತರ್ನಾಕ್ ಕೃತ್ಯವನ್ನು ಪೊಲೀಸರು ಬಯಲು ಮಾಡಿದ್ದಾರೆ. ಹೌದು ಗೆಳೆಯನ ಬಳಿ ಕಾಳು ಮೆಣಸು ‌ಖರೀದಿಸಿ ನಂತರ ಅವುಗಳನ್ನು ಮಾರಾಟ ಮಾಡಿ ಈಗ ಪೊಲೀಸರ ಕೈಗೆ ಸಿಕ್ಕಿ ಅತಿಥಿಯಾಗಿದ್ದಾನೆ ತಾರಿಕ್. ತಾರಿಕ್ ಅರೆಹಳ್ಳಿಯ ನಿವಾಸಿ ಇನ್ನೂ ದಿನೇಶ್ ಸಕಲೇಶಪುರ ನಿವಾಸಿ. ತುಂಬಾ ದಿನಗಳಿಂದ ಇಬ್ಬರು ಸ್ನೇಹಿತರಾಗಿದ್ದರು. ದಿನೇಶ್ ಗೆಳೆಯನಾದ ತಾರೀಕ್ ಗೆ ತಾನು ಬೆಳೆದ ಕಾಳು ಮೆಣಸನ್ನು ನೀಡಿದ್ದಾರೆ. ತನ್ನ ಗೆಳೆಯ ದಿನೇಶನ ಬಳಿ ಕಾಳು ಮೆಣಸನ್ನು ಖರೀದಿ ಮಾಡಿದ ತಾರೀಕ್ ನಂತರ ಮಾರಾಟ ಮಾಡಿ ಅದರಿಂದ ಬಂದ 16 ಲಕ್ಷ ರೂಪಾಯಿಯನ್ನು ದಿನೇಶ್ ಗೆ ಕೊಡದೆ ವಂಚನೆಗೆ ಸ್ಕೆಚ್ ಹಾಕಿದ್ದ ದುಷ್ಟ ಗೆಳೆಯ ತಾರಿಕ್ ನ ಬಣ್ಣವನ್ನು ಪೊಲೀಸರು ಬಯಲು ಮಾಡಿದ್ದಾರೆ. ಕಾಳು ಮೆಣಸು ಖರೀದಿ ಮಾಡಿದ್ದ ಬೇಲೂರು ತಾಲ್ಲೂಕಿನ ಅರೆಹಳ್ಳಿಯ ಮೊಹಮ್ಮದ್ ತಾರೀಕ್ ಮೆಣಸು ಮಾರಾಟ ಮಾಡಿ ವಾಪಸ್ ಬರೋ ವೇಳೆ ಕಾರು ಅಪಘಾತವಾಗಿ ಹಣ ಕಳೆದುಕೊಂಡು ನಾಟಕವನ್ನು ಮಾಡಿದ್ದ.

ತಾರಿಕ್ ತಾನೇ ‌ಕಾರು ಅಪಘಾತವಾದಂತೆ ನಿಲ್ಲಿಸಿ ಆಸ್ಪತ್ರೆಗೆ ಕೂಡಾ ದಾಖಲಾಗಿದ್ದ .ನಂತರ ಆಸ್ರತ್ರೆ ಸೇರಿದ ಮೇಲೆ ಕಾರು ಅಪಘಾತವಾಗಿದೆ ಆ ಒಂದು ಸಮಯದಲ್ಲಿ ಯಾರೋ ಅಪರಿಚಿತರು ಹಣವನ್ನು ಲಪಟಾಯಿಸಿಕೊಂಡು ಹೋಗಿದ್ದಾರೆ. ಎಂದು ತಾರೀಕ್ ದಿನೇಶ್ ಗೆ ಪೊನ್ ಮಾಡಿ ಹೇಳಿದ್ದಾನೆ. ತಾರೀಕ್ ನ ಮಾತಿನಲ್ಲಿ ನಂಬಿಕೆ ಕಾಣದ ದಿನೇಶ್ ಅರೆಹಳ್ಳಿಯ ಪೊಲೀಸ್ ಠಾಣೆಗೆ ಹೋಗಿ ಆಗಿರುವ ವಿಚಾರವನ್ನು ಪೊಲೀಸರ ಮುಂದೆ ಹೇಳಿದ್ದಾನೆ. ಆಯಿತು ಬಿಡಿ ಎಂದುಕೊಂಡ ಅರೆಹಳ್ಳಿಯ ಪೊಲೀಸರು ನಂತರ ತಾರೀಕ್ ನನ್ನು ಕರೆದು ವಿಚಾರಣೆ ಮಾಡಿದ್ದಾಗ ಬಣ್ಣ ಬಯಲಾಗಿದೆ. 16 ಲಕ್ಷ ರೂಪಾಯಿ ವಂಚನೆಗೆ ಸ್ಕೇಚ್ ಆಗಿದ್ದ ಖತರ್ನಾಕ್ ತಾರೀಕ್ ನ ಬಣ್ಣವನ್ನು ಪೊಲೀಸರು ಬಯಲು ಮಾಡಿದ್ದಾರೆ.

ಆರೋಪಿ ತಾರೀಕ್

ಇನ್ನೂ ಇತ್ತ ಗೆಳೆಯನೆಂದು ನಂಬಿದ್ದ ದಿನೇಶ್ ಗೆ ತಾರೀಖ್ ನ ವಂಚನೆಯ ಪುರಾಣವನ್ನು ಪೊಲೀಸರು ಬಯಲು ಮಾಡಿ ಆರೋಪಿಯನ್ನು ಬಂಧಿಸಿರುವ ಇನಸ್ಪೇಕ್ಟರ್ ಸಿದ್ದರಾಮೇಶ್ವರ , ಪಿಎಎಸೈ ಮಹೇಶ್ ತಾರೀಕ್ ನ ವಂಚನೆಯ ಪುರಾಣವನ್ನು ಬಯಲು ಮಾಡಿ ಆರೋಪಿಯನ್ನು ಬಂಧಿಸಿ 16 ಲಕ್ಷ ರೂಪಾಯಿ ಹಣವನ್ನು ವಶಪಡಿಸಿಕೊಂಡು ಮರಳಿ ದಿನೇಶ್ ನಿಗೆ ನೀಡಿದ್ದಾರೆ.

ಹಣದೊಂದಿಗೆ ದಿನೇಶ್

ಖತರ್ನಾಕ್ ವಂಚಕ ಗೆಳೆಯ ತಾರೀಕ್ ನನ್ನು ಜೈಲಿಗೆ ಅಟ್ಟಿದ್ದಾರೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಸಚಿವ ಸಂಪುಟದಲ್ಲಿ ಮಹಿಳೆಯರಿಗೆ ಸಿಗಲಿದೆ ಸ್ಥಾನ CM ಭರವಸೆ - ಸಚಿವ ಸ್ಥಾನ ನಿರೀಕ್ಷೆ ಯಲ್ಲಿದ್ದ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದ ನಾಡ ದೊರೆ.....ಶಾಲಾ ಸಂಸತ್ತು ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಶಾಸಕ NH ಕೋನರೆಡ್ಡಿ - ನೂತನ ವಿದ್ಯಾರ್ಥಿಗಳ ಸಂಸತ್ತು ನಾಯಕರಿಗೆ ಶುಭಹಾರೈಸಿದ ಜನಸೇವಕ.....ಅರುಣ ಮಜ್ಜಿಗೆ ಶಾಲಾ ಶಿಕ್ಷಕರು ಉಪಸ್ಥಿತಿ.....ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....