LIVE TV LocalCrimeNationalInternationalPoliticsEducationTechnologyEntertainmentSportsFeature
Sports News

ಶಾಲಾ ಆರಂಭಕ್ಕೂ ಮುನ್ನವೇ ಮಕ್ಕಳಿಗೆ ಶಾಕಿಂಗ್ ನ್ಯೂಸ್ ತಾತ್ಕಾಲಿಕವಾಗಿ ಸ್ಥಗಿತಗೊಂಡ ಕಾರ್ಯ ಆತಂಕದಲ್ಲಿ ಶಾಲಾ ಮಕ್ಕಳು.....

ಬೆಂಗಳೂರು -

ರಾಜ್ಯದಲ್ಲಿ ಮೇ 16 ರಿಂದ ಶಾಲೆಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ಕ್ರಮ ಕೈಗೊಂಡಿದೆ.ಪ್ರತಿ ವರ್ಷದಂತೆ ಈ ವರ್ಷವೂ ಮಕ್ಕಳ ಕೈಗೆ ನಿಗದಿತ ಅವಧಿಯೊಳಗೆ ಪಠ್ಯಪು ಸ್ತಕಗಳು ತಲುಪುವುದು ಅನುಮಾನವಾಗಿದೆ‌.ಮುದ್ರಣ ಕಾಗದದ ಕೊರತೆ ಮತ್ತು ಹೆಚ್ಚುತ್ತಿರುವ ವೆಚ್ಚಗಳ ಕಾರಣ ದಿಂದಾಗಿ ರಾಜ್ಯದಲ್ಲಿ ಹಲವಾರು ಪಠ್ಯಪುಸ್ತಕ ಮುದ್ರಣಾಲ ಯಗಳು ತಾತ್ಕಾಲಿಕವಾಗಿ ಕಾರ್ಯಾಚರಣೆ ಸ್ಥಗಿತಗೊ ಳಿಸಿವೆ.ರಷ್ಯಾ - ಉಕ್ರೇನ್ ಯುದ್ಧದ ಪರಿಣಾಮ ಜಾಗತಿಕ ಮಟ್ಟದಲ್ಲಿ ಮುದ್ರಣ ಕಾಗದ ಕೊರತೆ ಕಂಡುಬಂದಿದೆ. ಇದರಿಂದ ಭಾರತದಲ್ಲಿಯೂ ಮುದ್ರಣ ಕಾಗದ ತಯಾರಿ ಸುವ ಕಾರ್ಖಾನೆಗಳ ಮೇಲೆ ಪರಿಣಾಮ ಉಂಟಾಗಿದೆ.

ರಾಜ್ಯದಲ್ಲಿ ಪಠ್ಯ ಪುಸ್ತಕ ಮುದ್ರಣ ಮಾಡುವ ಮುದ್ರಕರಿಗೆ ಮುದ್ರಣ ಕಾಗದ ಕೊರತೆ ಎದುರಾಗಿದೆ.ಹೀಗಾಗಿ ನಿಗದಿತ ಅವಧಿಯೊಳಗೆ ಪಠ್ಯ ಪುಸ್ತಕಗಳನ್ನು ಮುದ್ರಿಸಿ ತಲುಪಿಸು ವುದು ಮುದ್ರಕರಿಗೆ ಕಷ್ಟಸಾಧ್ಯವಾಗಿದೆ.ಬೇಡಿಕೆಯಷ್ಟು ಮುದ್ರಣ ಕಾಗದ ಪೂರೈಕೆಯಾಗದೆ ಇರುವುದರಿಂದ ಪಠ್ಯ ಪುಸ್ತಕಗಳನ್ನು ಮುದ್ರಿಸಲು ಸಾಧ್ಯವಾಗದೆ ಅನೇಕರು ತಾತ್ಕಾಲಿಕವಾಗಿ ಮುದ್ರಣ ಸ್ಥಗಿತಗೊಳಿಸಿದ್ದಾರೆ.ಕರ್ನಾಟಕ ಪಠ್ಯಪುಸ್ತಕ ಮುದ್ರಕರ ಸಂಘದ ಅಧ್ಯಕ್ಷ ಬಿ.ಆರ್. ಸತ್ಯಕು ಮಾರ್ ಅವರು ಪರಿಸ್ಥಿತಿ ಸುಧಾರಿಸದಿದ್ದರೆ ಪಠ್ಯಪುಸ್ತಕ ಪೂರೈಕೆಯ ಮೇಲೆ ಪರಿಣಾಮ ಉಂಟಾಗಲಿದೆ. ಶೇಕಡ 50 ರಷ್ಟು ಮುದ್ರಣ ಕಾರ್ಯ ಪೂರ್ಣಗೊಂಡಿದೆ.ಕಾಗದ ಸರಬರಾಜು ನಿಯಮಿತವಾಗಿ ಪೂರೈಕೆಯಾದಲ್ಲಿ ಶೈಕ್ಷಣಿಕ ವರ್ಷಕ್ಕೆ ಶಾಲೆಗಳು ತೆರೆಯುವ ವೇಳೆಗೆ ಮುದ್ರಣ ಪೂರ್ಣ ಗೊಳಿಸಿ ಪಠ್ಯಪುಸ್ತಕ ಪೂರೈಕೆ ಮಾಡಬಹುದಾಗಿದೆ. ಆದರೆ ಮುದ್ರಣ ಕಾಗದ ಬೆಲೆ ಶೇಕಡ 40 ರಷ್ಟು ಹೆಚ್ಚಾಗಿದೆ. ಪಠ್ಯ ಪುಸ್ತಕ ಮುದ್ರಕರು ಟೆಂಡರ್ ಕರೆದಾಗ ಪ್ರತಿಟನ್ ಗೆ 60 ಸಾವಿರ ರೂ. ಇದ್ದ ಮುದ್ರಣ ಕಾಗದ ದರ 90 ಸಾವಿರ ರೂ.ಗೆ ತಲುಪಿದೆ.

ರಾಜ್ಯದಲ್ಲಿ ಪಠ್ಯಪುಸ್ತಕಗಳನ್ನು ಮುದ್ರಿಸುವ ಸುಮಾರು 21 ಘಟಕಗಳಿದ್ದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ತಮಿಳುನಾಡು ಸರ್ಕಾರಿ ಸ್ವಾಮ್ಯದ ಕಾಗದ ಕಾರ್ಖಾನೆಯಿಂದ ರಾಜ್ಯಕ್ಕೆ ಕಾಗದ ಪೂರೈಕೆ ಮಾಡಲು ಕ್ರಮ ಕೈಗೊಂಡಲ್ಲಿ ಸಮಸ್ಯೆಗೆ ಪರಿಹಾರ ಸಿಗಬಹುದು ಎಂದು ಹೇಳಲಾಗಿದೆ.ಕರ್ನಾಟಕ ಪಠ್ಯಪುಸ್ತಕ ಸೊಸೈಟಿ ನೀಡಿರುವ ಮಾಹಿತಿಯಂತೆ ಶೇಕಡಾ 64 ರಷ್ಟು ಪಠ್ಯಪುಸ್ತಕಗಳ ಮುದ್ರಣವಾಗಿದ್ದು, 57ರಷ್ಟು ಪಠ್ಯಪುಸ್ತಕ ಗಳನ್ನು ವಿತರಣೆಗೆ ತಲುಪಿಸಲಾಗಿದೆ.ಮೇ 16ರಿಂದ 20 ರೊಳಗೆ ಎಲ್ಲಾ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳನ್ನು ತಲುಪಿಸಲು ವ್ಯವಸ್ಥೆ ಮಾಡಲಾಗಿದೆ.ಆದರೆ ಮುದ್ರಣ ಕಾಗದ ಪೂರೈಕೆಯಾಗದೇ ಮುದ್ರಕರು ಮುದ್ರಣ ಕಾರ್ಯ ತಾತ್ಕಾಲಿಕವಾಗಿ ನಿಲ್ಲಿಸಿರುವುದರಿಂದ ನಿಗದಿತ ವೇಳೆಗೆ ಪಠ್ಯ ಪುಸ್ತಕ ಪೂರೈಕೆಯಾಗುವುದು ಅನುಮಾನ ಎನ್ನಲಾಗಿದೆ

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ಸಂಸತ್ತು ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಶಾಸಕ NH ಕೋನರೆಡ್ಡಿ - ನೂತನ ವಿದ್ಯಾರ್ಥಿಗಳ ಸಂಸತ್ತು ನಾಯಕರಿಗೆ ಶುಭಹಾರೈಸಿದ ಜನಸೇವಕ.....ಅರುಣ ಮಜ್ಜಿಗೆ ಶಾಲಾ ಶಿಕ್ಷಕರು ಉಪಸ್ಥಿತಿ.....ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...