LIVE TV LocalCrimeNationalInternationalPoliticsEducationTechnologyEntertainmentSportsFeature
State News

ನಿವೃತ್ತರಾದರು ಕಾಯಕ ಬಿಡದ ಶ್ಯಾಮಣ್ಣ ಮೇಷ್ಟ್ರು - ಪ್ರತಿದಿನ ಶಾಲೆಗೆ ಹೋಗಿ ಮಕ್ಕಳಿಗೆ ಹೊಸದೊಂದು ಪ್ರಯೋಗ ಮಾಡುತ್ತಾ ಮಕ್ಕಳಿಗೆ ಪಾಠ ಬೋಧನೆ.....

ಹನುಮಸಾಗರ -

ಶ್ಯಾಮಣ್ಣ ಮೇಷ್ಟ್ರು ಮನೆಗೆ ಅಂದ್ರೆ ಮಕ್ಕಳು ಖುಷ್ ಖುಷಿಯಾಗಿ ಓಡೋಡಿ ಬರುತ್ತಾರ.ಹಾಗೆ ಬಂದವರಿಗೆ ಮರಳಿ ಮನೆಗೆ ಹೋಗುವ ಮನಸ್ಸೆ ಬಾರದು.ಪಾಲಕರು ಕರೆಯಲು ಬಂದಾಗಲೇ ‌ಮಕ್ಕಳಿಗೆ ತಮ್ಮ ಮನೆಯ ನೆನಪಾಗುವುದು.ಕುಷ್ಟಗಿಯಲ್ಲಿ ನೆಲೆಸಿರುವ 67ರ ಹರೆಯದ ಶ್ಯಾಮರಾವ್ ಕುಲಕರ್ಣಿ ಅವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಪ್ರೌಢ ಶಾಲಾ ಶಿಕ್ಷಕರಾಗಿ ಪದೋನ್ನತಿ ಹೊಂದಿ ಈಗ ನಿವೃತ್ತಿ ಜೀವನ ನಡೆಸುತ್ತಿದ್ದಾರೆ.2016 ರಲ್ಲಿಯೇ ಸೇವೆಯಿಂದ ನಿವೃತ್ತಿಯಾದರೂ ಪ್ರವೃತ್ತಿಯಿಂದ ಮಾತ್ರ ನಿವೃತ್ತರಾಗದೇ ಪ್ರತಿ ದಿನ ಶೈಕ್ಷಣಿಕ ಬೆಳವಣಿಗೆಗೆ ಏನಾದರೊಂದು ಪ್ರಯೋಗ ಮಾಡುತ್ತಲೇ ಇರುತ್ತಾರೆ. ಶಾಲೆ ಇರುವಾಗ ನಿತ್ಯ ಒಂದೊಂದು ಶಾಲೆಗೆ ಹೋಗಿ ವಿಜ್ಞಾನ ಬೋಧನೆಯ ಜತೆಗೆ ಮಕ್ಕಳ ತಾರ್ಕಿಕ ಜ್ಞಾನಕ್ಕೆ ಇಂಬುಕೊಟ್ಟು ಬರುತ್ತಾರೆ. ಮನೆಯಲ್ಲಿದ್ದಾಗ ಅಕ್ಕರೆ ಯಿಂದ ತಮ್ಮೊಂದಿಗೆ ಬರುವ ಮಕ್ಕಳೊಂದಿಗೆ ತಾವೂ ಮಗುವಾಗಿ ಆಟವಾಡುತ್ತಾ ಮಕ್ಕಳಿಗೆ ಅವರಿಗೆ ಅರಿವಿಲ್ಲ ದಂತೆ ವಿಜ್ಞಾನದ ವನ್ನು ಕಲಿಸುತ್ತಾರೆ.ಇದಕ್ಕೆಲ್ಲ ಅವರ ಶ್ರೀಮತಿಯವರ ಸಹಕಾರವೂ ಇದೆ.

ಇವರ ಮನೆಯಲ್ಲಿ ಯಾವ ಭಾಗದಲ್ಲಿ ನೋಡಿದರೂ ಬೊಂಬೆಗಳು,ಆಟಿಕೆಗಳು,ವಿಜ್ಞಾನ ಕಲಿಕೆಗೆ ನೆರವಾಗು ವಂತೆ ತಾವೇ ತಯಾರಿಸಿದ ಸಾಧನಗಳು,ಮತ್ತಷ್ಟು ಸಾಧನ ತಯಾರಿಸುವುದಕ್ಕಾಗಿ ಸಂಗ್ರಹಿಸಿಟ್ಟ ರಟ್ಟು,ಬಿದಿರು, ಅಂಟು,ಥರ್ಮೋಕೋಲ್,ಹಳೆಯ ಬಟ್ಟೆ,ಹತ್ತಿ,ಹೀಗೆಲ್ಲ ಕಚ್ಚಾ ವಸ್ತುಗಳು ತುಂಬಿಕೊಂಡಿವೆ.

ಬೊಂಬೆಗಳೆಂದರೆ ಏನೋ ಇವು ಸಣ್ಣಪುಟ್ಟ ಸಾಮಾನ್ಯ ಬೊಂಬೆಗಳು ಅಂತಲ್ಲ.ಕೀಲಿಬೊಂಬೆ,ಮಾತನಾಡುವ ಬೊಂಬೆ,ನಗಿಸುವ ಬೊಂಬೆ,ಮಾತನಾಡಿಸುವ ಬೊಂಬೆ, ವಿಜ್ಞಾನದ ತಾರ್ಕಿಕ ತಿಳಿಸುವ ಬೊಂಬೆ, ಒತ್ತಡ, ಗಾಳಿ, ಬೆಳಕು, ಗುರುತ್ವಾಕರ್ಷಣೆ, ಬೆಳಕಿನ ಸಂಯೋಜನೆ ಹೀಗೆಲ್ಲ ವಿವಿಧ ವಿಷಯಗಳನ್ನು ಕಲಿಸುವ ಬೊಂಬೆಗಳು ಇವು. ಈ ಬೊಂಬೆಗಳನ್ನು ಇಡುವುದಕ್ಕಾಗಿಯೇ ಒಂದು ಬಾಡಿಗೆ ಮನೆ ಹಿಡಿದಿದ್ದಾರೆ.ಮಕ್ಕಳ ಮನಸ್ಸನ್ನು ತಮ್ಮೆಡೆಗೆ ಸೆಳೆ ಯುವ ಹಾಗೂ ಅವರಲ್ಲಿ ಏಕಾಗ್ರತೆ ಮೂಡಿಸುವ ಕೌಶಲ್ಯ ಈ ಮೇಷ್ಟ್ರಿಗೆ ಕರಗತವಾಗಿದೆ.

ವಿಜ್ಞಾನ ವಿಷಯವನ್ನು ಸರಳವಾಗಿ ಬೋಧಿಸುತ್ತೇನೆ ಬನ್ನಿರೋ ಎಂದರೆ ಮಕ್ಕಳು ಬರುವುದಿಲ್ಲ.ಮಕ್ಕಳೇ ನಿಮ್ಮ ಕೈಗೆ ಬೊಂಬೆಗಳನ್ನು ನೀಡುತ್ತೇನೆ ಆಟವಾಡಲು ಬರ್ರಿ ಎಂದರೆ ಓಡೋಡಿ ಬರುತ್ತಾರೆ.ಹೀಗೆ ಬಂದವರು ಈ ಬೊಂಬೆ ಹೀಗೇಕೆ ಮಾಡುತ್ತದೆ ಅದೇಕೆ ಓಲಾಡುತ್ತದೆ ಇದೇಕೆ ಬೀಳುವುದಿಲ್ಲ ಅದೇಕೆ ಬಾಗಿ ನಿಂತಿದೆ ಇಂತಹ ತರಹೆವಾರಿ ಪ್ರಶ್ನೆಗಳನ್ನು ಕೇಳಲು ಆರಂಭಿಸುತ್ತಾರೆ. ಅವರು ಕೌತುಕವಾಗಿ ಕೇಳುವ ಪ್ರಶ್ನೆಗಳಿಗೆ ಉತ್ಸಾಹದಿಂದ ನನ್ನ ಉತ್ತರ ಬರುತ್ತದೆ ಅದೇ ಮಕ್ಕಳಿಗೆ ಸರಳ ಕಲಿಕೆಯ ಪಾಠವಾಗುತ್ತದೆ' ಎಂದು ಶ್ಯಾಮಣ್ಣ ಮೇಷ್ಟ್ರು ಖುಷಿ ಯಿಂದ ಹೇಳುತ್ತಾರೆ.

ರಾಜ್ಯಮಟ್ಟದ ಸಂಪನ್ಮೂಲ ಶಿಕ್ಷಕರಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ತರಬೇತಿ ನೀಡಿದ್ದರು ಆದರೆ ನಿವೃತ್ತಿಯಾದ ಬಳಿಕ ಈಗ ಹೆಚ್ಚಾಗಿದೆ.ಸ್ಥಳೀಯ ಕಚ್ಚಾವಸ್ತು ಬಳಸಿ ತಾವೇ ವಿಜ್ಞಾನ,ಗಣಿತದ ಮಾದರಿಗಳನ್ನು ತಯಾರಿಸುತ್ತಾರೆ. ಇದೆಲ್ಲವನ್ನು ಮಕ್ಕಳಿಗಾಗಿಯೇ ನಿರ್ವಹಿಸಿದ್ದು ಮಕ್ಕಳ ಪಾಲಿಗೆ ಇವರ ಮನೆ ಮಿನಿ ವಿಜ್ಞಾನ ಪ್ರಯೋಗಾಲಯವು ಹೌದು ಆಟಿಕೆ ಮನೆಯೂ ಹೌದು.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಶಾಲಾ ಸಂಸತ್ತು ಕಾರ್ಯಕ್ರಮ ದಲ್ಲಿ ಪಾಲ್ಗೊಂಡ ಶಾಸಕ NH ಕೋನರೆಡ್ಡಿ - ನೂತನ ವಿದ್ಯಾರ್ಥಿಗಳ ಸಂಸತ್ತು ನಾಯಕರಿಗೆ ಶುಭಹಾರೈಸಿದ ಜನಸೇವಕ.....ಅರುಣ ಮಜ್ಜಿಗೆ ಶಾಲಾ ಶಿಕ್ಷಕರು ಉಪಸ್ಥಿತಿ.....ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...