LIVE TV LocalCrimeNationalInternationalPoliticsEducationTechnologyEntertainmentSportsFeature
State News

ಸುಳ್ಳು ಸುದ್ದಿ ಹಬ್ಬಿಸಿದ್ರು – ಕುರಿಗಳನ್ನು ಕದ್ದೊಯ್ದರು

ಬಾಗಲಕೋಟ - ನಿನ್ನೆಯ ಭಾರತ ಬಂದ್ ವೇಳೆಯಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸಿ ನೂರಾರು ಕುರಿಗಳನ್ನು ಕಳ್ಳತನ ಮಾಡಿದ್ದಾರೆ. ಹೌದು ಇಂಥಹದೊಂದು ಸುಳ್ಳು ಸುದ್ದಿಯನ್ನು ಹಬ್ಬಿಸಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಕುರಿಗಳನ್ನು ಕಳ್ಳತನ ಮಾಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಕೇಂದ್ರ ಸರ್ಕಾರದ ಕೃಷಿ ವಿರೋಧ ನೀತಿಯನ್ನು ದೇಶವ್ಯಾಪಿ ಭಾರತ್ ಬಂದ್ ಗೆ ಕರೆ ನೀಡಲಾಗಿತ್ತು. ಬಂದ್ ಗೆ ಕರೆ ಕೊಟ್ಟಿರುವ ಲಾಭವನ್ನು ಪಡೆದುಕೊಂಡ ಕಿಡಗೇಡಿಗಳು ಬಾಗಲಕೋಟೆಯ ಕೆರೂರಿನಲ್ಲಿ ಖತರ್ನಾಕ್ ಕೆಲಸ ಮಾಡಿದ್ದಾರೆ.

ಕೆರೂರು ನಿನ್ನೇ ದೊಡ್ಡ ಪ್ರಮಾಣದಲ್ಲಿ ಕುರಿ ಮೇಕೆಗಳ ಸಂತೆ ಇತ್ತು. ಪಟ್ಟಣದಲ್ಲೂ ಬಂದ್ ಹಿನ್ನಲೆಯಲ್ಲಿ ನಿನ್ನೇ ದೊಡ್ಡ ಪ್ರಮಾಣದಲ್ಲಿ ಮೇಕೆ-ಕುರಿ ಸಂತೆಯಲ್ಲಿ ಕಿಡಗೇಡಿಗಳ ಸುಳ್ಳು ಸುದ್ದಿಗೆ ಚೆಲ್ಲಾಪಿಲ್ಲಿಯಾಗಿ ಜನ ಓಡಾಡಿದ್ದಾರೆ. ಬಂದ್ ಇದ್ದರೂ ತಮ್ಮ ಪಾಡಿಗೆ ತಾವುಗಳು ಕುರಿ ಮೇಕೆಯಲ್ಲಿ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದರು. ಎಲ್ಲರೂ ಸಂತೆಯಲ್ಲಿ ಕುರಿ ಮೇಕೆಗಳ ಭರ್ಜರಿಯಾದ ವ್ಯಾಪಾರದಲ್ಲಿ ತೊಡಗಿರುವ ಕೆಲ ಕಿಡಗೇಡಿಗಳು ಸಂತೆಯಲ್ಲಿ ಬಂದ್ ಹಿನ್ನಲೆಯಲ್ಲಿ ಪೊಲೀಸರು ಹಿಡಿದು ಹೊಡೆಯುತ್ತಾರೆ ಎಂದು ಸುಳ್ಳು ಸುದ್ದಿ ಹರಡಿದ್ದಾರೆ.

ಹೀಗೆ ಸುಳ್ಳು ಸುದ್ದಿ ಒಬ್ಬರ ಬಾಯಿಂದ ಒಬ್ಬರಿಗೆ ಕೇಳಿ ಬರುತ್ತಿದ್ದಂತೆ ಸಂತೆಯಲ್ಲಿದ್ದರು ತಮ್ಮ ತಮ್ಮ ಕೈಯಲ್ಲಿ ಮೇಕೆ,ಕುರಿ ಹಿಡಿದು ದಿಕ್ಕಾಪಾಲಾಗಿ ಓಡಿದ್ದಾರೆ.ಭಾರತ ಬಂದ್ ಹಿನ್ನೆಲೆ. ಪ್ರತಿಭಟನಾಕಾರರನ್ನು ಪೊಲೀಸರು ಹೊಡೆದು ಓಡಿಸುತ್ತಿದ್ದಾರೆಂದು ವದಂತಿ ಹಬ್ಬಿಸಿದ ದುಷ್ಕರ್ಮಿಗಳಿಂದ.ಜಾನುವಾರು ಸಂತೆ ಬಳಿಯೇ ಪ್ರತಿಭಟನೆಗೆ ಮುಂದಾಗಿದ್ದ ವಿವಿಧ ಸಂಘಟನೆಗಳು.40 ಕ್ಕೂ ಹೆಚ್ಚು ಕುರಿ, ಮೇಕೆ ಕಳುವು ಮಾಡಿದ್ದಾರೆ. ಲಕ್ಷಾಂತರ ರೂಪಾಯಿಗಳನ್ನು ಕೆಲವರು ಕಳೆದುಕೊಂಡ್ರೆ ಇನ್ನೂ ಕೆಲವರು ತಾವು ಮಾರಲು ತಗೆದುಕೊಂಡು ಬಂದಿದ್ದ ಕುರಿ ಮೇಕೆಗಳನ್ನು ಕಳೆದುಕೊಂಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧ ಕುರಿ, ಜಾನುವಾರು ಸಂತೆ ಇದಾಗಿದೆ.

ಕೆರೂರ ಪಟ್ಟಣದ ಎಪಿಎಂಸಿ ಆವರಣದಲ್ಲಿ ಮಂಗಳವಾರ ನಡೆದಿದ್ದ ಕುರಿ, ಜಾನುವಾರು ಸಂತೆಯಲ್ಲಿ ಸುಳ್ಳು ಸುದ್ದಿಯ ವದಂತಿ ಬಹುತೇಕರು ದಿಗಿಲುಗೊಂಡು ತೋಚಿದ ಕಡೆಗಳಲ್ಲಿ ಓಡಾಡಿದ್ದಾರೆ.ವದಂತಿ ಹಬ್ಬಿಸಿ ದುಷ್ಕರ್ಮಿಗಳು ನೂರಕ್ಕೂ ಹೆಚ್ಚು ಕುರಿ, ಮೇಕೆ ಮತ್ತು ಟಗರು ಮರಿಗಳನ್ನು ಕಳುವು ಮಾಡಿದ್ದಾರೆ. ಈ ಕುರಿತಂತೆ ಯಾರು ಕೂಡಾ ಕೆರೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿಲ್ಲ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ - 40 ಸಾವಿರ ಲಂಚ ಸ್ವೀಕರಿಸುವಾಗ ಟ್ರ್ಯಾಪ್.....