LIVE TV LocalCrimeNationalInternationalPoliticsEducationTechnologyEntertainmentSportsFeature
State News

ಪಾಗಲ್ ಪ್ರೇಮಿಯ ಲವ್ ಕಹಾನಿ ಹಿಂದಿನ ಸ್ಟೋರಿ

ಕಾಲಿಗೆ ಗಾಯಗೊಂಡು ಆಸ್ಪತ್ರೆಗೆ ಹೋಗಿದ್ದರು – ಇಂದು ಅದೇ ಆಟೋ ಚಾಲಕನಿಂದಲೇ ಗಾಯಗೊಂಡು ಆಸ್ಪತ್ರೆ ಸೇರಿದ್ರು – ಹುಬ್ಬಳ್ಳಿಯಲ್ಲಿನ ಪಾಗಲ್ ಪ್ರೇಮಿಯ ಲವ್ ಕಹಾನಿ

ಹುಬ್ಬಳ್ಳಿ -

ಹುಬ್ಬಳ್ಳಿಯಲ್ಲಿ ಯುವತಿಯ ಮೇಲೆ ಪಾಗಲ್ ಪ್ರೇಮಿಯ ತಲ್ವಾರ್ ಅಟ್ಯಾಕ್ ಹಿಂದೆ ಒಂದು ದೊಡ್ಡ ಲವ್ ಸ್ಟೋರಿ ಇದೆ. ಹೌದು ಯುವತಿಯ ಹೆಸರು ಶೈನಾ ಹುಬ್ಬಳ್ಳಿಯ ದೇಶಪಾಂಡೆ ನಗರದ ನಿವಾಸಿ. ನಗರದ ಜ್ಯೂವೇಲರಿ ಮಳಿಗೆಯೊಂದರಲ್ಲಿ ಕೆಲಸ ಮಾಡ್ತಾ ಇದ್ದಾರೆ. ದೇಶಪಾಂಡೆ ನಗರದಿಂದ ಶಾಫ್ ಗೆ ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಕಳೆದ ಒಂದೂವರೆ ವರುಷದ ಹಿಂದೆ ಬಿದ್ದು ಗಾಯಮಾಡಿಕೊಂಡಿದ್ದರು. ತೀವ್ರಾವಾಗಿ ಗಾಯವನ್ನು ಮಾಡಿಕೊಂಡಿದ್ದ ಶೈನಾ ನನ್ನು ರಸ್ತೆಯಲ್ಲಿ ಹೋಗುತ್ತಿದ್ದ ಆಟೋಗೆ ಕೈ ಮಾಡಿ ಅದರಲ್ಲಿ ಹತ್ತಿಕೊಂಡು ಆಸ್ಪತ್ರೆಗೆ ಹೋಗಿ ಚಿಕಿತ್ಸೆಯನ್ನು ಪಡೆದುಕೊಂಡು ನಂತರ ಮತ್ತೊಮ್ಮೆ ಆಟೋದಲ್ಲಿ ಶೈನಾ ಅವರನ್ನು ಮಳಿಗೆಗೆ ಬಿಟ್ಟು ನಂತರ ಅವರ ಪೊನ್ ನಂಬರ್ ತಗೆದುಕೊಂಡು ಪರಿಚಯವನ್ನು ಮಾಡಿಕೊಳ್ಳುತ್ತಾನೆ.

ಗ್ರಾಹಕರಂತೆ ಆಟೋದಲ್ಲಿ ಪರಿಚಯವಾದ ಇಮ್ತಿಯಾಜ್ ದಿನ ಕಳೆದಂತೆ ಸ್ನೇಹ ಪ್ರೀತಿಯಾಗುತ್ತದೆ. ನಂತರ ಮಹಾಮಾರಿ ಕರೋನಾ ಗೆ ಲಾಕ್ ಡೌನ್ ಸಮಯದಲ್ಲಿ ಅಲ್ಲಲ್ಲಿ ಸುತ್ತಾಡಿ ಕೆಲವೊಂದಿಷ್ಟು ಸೆಲ್ಪಿ ಪೊಟೊಗಳನ್ನು ಕ್ಲೀಕ್ ಮಾಡಿಕೊಳ್ಳುತ್ತಾರೆ.

ದಿನ ಕಳೆದಂತೆ ಇಮ್ತಿಯಾಜ್ ಶೈನಾ ಅವರನ್ನು ಹೆಚ್ಚು ಪ್ರೀತಿ ಮಾಡಲು ಮುಂದಾಗುತ್ತಾನೆ. ಆದ್ರೂ ಇದಕ್ಕೇ ಅವಕಾಶ ಕೊಡದ ಶೈನಾ ಸ್ವಲ್ಪು ದೂರು ಉಳಿಯಲು ಮುಂದಾಗುತ್ತಾರೆ. ಲಾಕ್ ಡೌನ್ ಮುಗಿಯಿತು ಇತ್ತ ಮತ್ತೇ ಕೆಲಸ ಆರಂಭವಾಯಿತು. ಇಮ್ತಿಯಾಜ್ ನನ್ನು ತುಂಬಾ ಅವೈಡ್ ಮಾಡಲು ಮುಂದಾಗುತ್ತಾರೆ ಶೈನಾ ಪೊನ್ ಮಾಡಿದ್ರು ರಿಸೀವ್ ಮಾಡೊದಿಲ್ಲ ಮೆಸೇಜ್ ಮಾಡಿದ್ರು ರಿಪೈ ಮಾಡೊದಿಲ್ಲ ಇದರಿಂದ ಅಸಮಾಧನಗೊಂಡ ಇಮ್ತಿಯಾಜ್ ಬೇಸತ್ತು ಇಂದು ಹೇಗಾದರೂ ಮಾಡಿ ಮುಗಿಸಬೇಕು ಎಂದುಕೊಂಡು ಸ್ಕೇಚ್ ರೇಡಿ ಮಾಡ್ತಾನೆ.

ಎಂದಿನಂತೆ ಇಂದು ಬೆಳಿಗ್ಗೆ ಕೆಲಸಕ್ಕೇ ದೇಶಪಾಂಡೆ ನಗರದಲ್ಲಿರುವ ಮನೆಯಿಂದ ಕೆಲಸಕ್ಕೇ ಶೈನಾ ಹೊರಟಿರುವಾಗ ಮನೆಯ ಮುಂದೆ ಕಾಯುತ್ತಾ ಕುಳಿತುಕೊಂಡಿದ್ದ ಇಮ್ತಿಯಾಜ್ ತಲ್ವಾರ್ ನಿಂದ ಏಕಾಎಕಿಯಾಗಿ ದಾಳಿ ಮಾಡುತ್ತಾನೆ. ನಡು ರಸ್ತೆಯಲ್ಲಿಯೇ ತಲ್ವಾರ್ ನಿಂದ ಏಳೆನೀರು ಕಡಿದಂತೆ ಯುವತಿಯನ್ನು ನೆಲಕ್ಕೇ ಹಾಕಿ ಕುತ್ತಿಗೆ ಭಾಗಕ್ಕೇ ಹಾಕುತ್ತಾನೆ. ಸಧ್ಯ ಯುವತಿಯನ್ನು ಸ್ಥಳದಲ್ಲಿದ್ದ ಮಂಜುನಾಥ ಎಂಬುವರೇ ರಕ್ಷಣೆ ಮಾಡಿದ್ದಾರೆ.

ಇನ್ನೂ ಇಮ್ತಿಯಾಜ್ ವೃತ್ತಿಯಲ್ಲಿ ಆಟೋ ಚಾಲಕ. ಕುಂದಗೋಳ ತಾಲೂಕಿನ ಕುಂಕುರ ಗ್ರಾಮದವನು. ನಗರದಲ್ಲಿ ಆಟೋ ಓಡಿಸುತ್ತಿದ್ದಾನೆ. ಒಟ್ಟಾರೆ ಕಾಲಿಗೆ ಗಾಯಮಾಡಿಕೊಂಡು ಆಟೋದಲ್ಲಿ ಹೋಗಿ ಚಿಕಿತ್ಸೆಯನ್ನು ಪಡೆದುಕೊಂಡು ಗುಣಮುಖರಾಗಿದ್ದ ಶೈನಾ ಈಗ ಮತ್ತೇ ಅದೇ ಆಟೋ ಚಾಲಕನಿಂದಲೇ ಮಾರಣಾಂತಿಕ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಸಧ್ಯ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದು ಇತ್ತ ಆರೋಪಿ ಇಮ್ತಿಯಾಜ್ ಪೊಲೀಸರ ಅತಿಥಿಯಾಗಿದ್ದಾರೆ.

Author
Suddi Sante
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನೂತನ ಸಚಿವರಿಗೆ ಅಭಿನಂದನೆ ಸಲ್ಲಿಸಿದ ಶಾಸಕ N H ಕೋನರೆಡ್ಡಿ - ಪಕ್ಷದ ಕಾರ್ಯಕರ್ತರು ಮುಖಂಡರೊಂದಿಗೆ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ ಜನಸೇವಕ.....ಸಚಿವರಿಗೆ ಜವಾಬ್ದಾರಿ ಹಂಚಿಕೆ ಮಾಡಿದ CM - ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಸಚಿವರಿಗೆ ಮಹತ್ವದ ಜವಾಬ್ದಾರಿ ನೀಡಿದ CM.....ಸಚಿವ ಸಂತೋಷ ಲಾಡ್ ಗೆ ಅಭಿನಂದನೆ ಸಲ್ಲಿಸಿದ ಅನಿಲಕುಮಾರ್ ಪಾಟೀಲ್ - ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ ಜಿಲ್ಲಾಧ್ಯಕ್ಷರು.....ನಕಲಿ ಅಂಕಪಟ್ಟಿ ನೀಡಿ ಸರ್ಕಾರಿ ನೌಕರಿ ಪಡೆದ ನಾಲ್ವರಿಗೆ ಜೈಲು ಶಿಕ್ಷೆ - DC ದೂರಿನ ಹಿನ್ನಲೆ ನ್ಯಾಯಾಲಯದಿಂದ ಆದೇಶ.....ಸರ್ಕಾರಿ ಶಾಲಾ ಮಕ್ಕಳಿಗೆ ಕಲಿಕಾ ಪರಿಕರಗಳ ವಿತರಣೆ - ಮಕ್ಕಳ ಕಲಿಕೆಗೆ ಸ್ಪೂರ್ತಿಯಾದ ಪರಿಕರಗಳು.....ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿ ನೌಕರರಿಂದ ಮನವಿ - ಸೂಕ್ತ ಕ್ರಮಕೈಗೊಳ್ಳುವಂತೆ ಮನವಿ ನೀಡಿದ ನೌಕರರ ನಿಯೋಗ.....ಶಾಲಾ ಪ್ರಾಂಶುಪಾಲ, ವಾರ್ಡನ್ ಅಮಾನತು - ಅಮಾನತುಗೊಳಿಸಿ ಆದೇಶ ನಿಟ್ಟಿಸಿರು ಬಿಟ್ಟ ವಿದ್ಯಾರ್ಥಿಗಳು ಪೋಷಕರು.....ಸರಳತೆಯ ಯುವ ಮುಖಂಡ ವೆಂಕಟೇಶ ಕಾಟವೆ ಜನ್ಮದಿನ ಬೃಹತ್ ಆರೋಗ್ಯ ತಪಾಸಣಾ,ರಕ್ತದಾನ ಶಿಬಿರ - 40ನೇ ಜನ್ಮದಿನದ ಅಂಗವಾಗಿ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು.....ಯುವ ನ್ಯಾಯವಾದಿ ಅರುಣಕುಮಾರ ಮಜ್ಜಗಿ ಹುಟ್ಟುಹಬ್ಬಕ್ಕೆ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳು - ಅರ್ಥಪೂರ್ಣ ಹುಟ್ಟುಹಬ್ಬಕ್ಕೆ ಸಾಕ್ಷಿಯಾಗಲಿದೆ ನವಲಗುಂದ...ಲೋಕಾಯುಕ್ತ ಬಲೆಗೆ ಬಿದ್ದ ಸರ್ಕಾರಿ ನೌಕರ - 40 ಸಾವಿರ ಲಂಚ ಸ್ವೀಕರಿಸುವಾಗ ಟ್ರ್ಯಾಪ್.....