ಹುಬ್ಬಳ್ಳಿ ಧಾರವಾಡ –
ಹುಬ್ಬಳ್ಳಿ ಧಾರವಾಡ ಮಧ್ಯೆ ಸಂಚಾರ ಮಾಡುತ್ತಿರುವ ಚಿಗರಿ ಬಸ್ ಗಳು ಆರಂಭಗೊಂಡು ಏಳು ವರ್ಷ ಗಳಾಗಿದ್ದು ಸಧ್ಯ ಈ ಒಂದು ಒಂದು ಬಸ್ ಗಳನ್ನು ಸರಿಯಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಅದರಲ್ಲೂ ಅಧಿಕಾರಿಗಳ ಬೆ ಜವಬ್ದಾರಿ ಯಿಂದಾಗಿ ಸಧ್ಯ ಬಸ್ ಗಳು ಸಂಪೂರ್ಣವಾಗಿ ಹಾಳಾಗಿದ್ದು ಇದರ ನಡುವೆ ಸಧ್ಯ ಈ ಒಂದು ಬಸ್ ಗಳ ಖರೀದಿ ಕುರಿತು ತನಿಖೆಯನ್ನು ಮಾಡಲು ನಿರ್ಧಾರ ತೆಗೆದುಕೊಳ್ಳಲಾಗಿದೆ
ಹೌದು ‘ಚಿಗರಿ’ ಬಸ್ ಖರೀದಿ ಮಾಡಿರುವ ಕುರಿತು ತನಿಖೆಗೆ ವಾಯವ್ಯ ಸಾರಿಗೆ ಸಂಸ್ಥೆಯ ಅಧ್ಯಕ್ಷರಾಗಿರುವ ರಾಜು ಕಾಗೆ ಮುಂದಾಗಿದ್ದಾರೆ.ಹುಬ್ಬಳ್ಳಿ-ಧಾರವಾಡ ನಗರ ಮಧ್ಯೆ ಸಂಚರಿಸುತ್ತಿರುವ ಚೀನ ನಿರ್ಮಿತ “ಚಿಗರಿ’ ಬಸ್‌ಗಳು ಕಳಪೆ ಮಟ್ಟದ್ದಾಗಿವೆ. ಈ ಬಸ್‌ಗಳನ್ನು ಖರೀದಿಸಿದಾಗ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರು ಯಾರಿದ್ದರು ಎಂಬ ಮಾಹಿತಿ ಪಡೆದು ತನಿಖೆಗೆ ಸೂಚಿಸಲಾಗುವುದು ಎಂದು ಶಾಸಕ ಹಾಗೂ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಅಧ್ಯಕ್ಷ ರಾಜು ಕಾಗೆ ಹೇಳಿದರು
ಮಾಧ್ಯಮದೊಂದಿಗೆ ಮಾತನಾಡಿದ ಅವರು, “ಚಿಗರಿ’ ಬಸ್‌ಗಳ ಬಗ್ಗೆ ಕಳೆದ ಮೇ 13ರಂದು ಬೆಂಗಳೂರಿನಲ್ಲಿ ಚರ್ಚೆ ನಡೆದಿದೆ. ವಾಯವ್ಯ ವಿಭಾಗಕ್ಕೆ ಕಳಪೆ ಮಟ್ಟದ ಬಸ್‌ಗಳನ್ನು ಖರೀದಿಸಿದ್ದರಿಂದ ಸಾರಿಗೆ ಇಲಾಖೆಗೆ ಹಾನಿ ಯಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು ಎಂದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ ಧಾರವಾಡ……