ಧಾರವಾಡ –
ಬಾಡಿಗೆ ಕೊಟ್ಟು ಅಂಗಡಿಗಳತ್ತ ಸುಳಿಯದ ಅಧಿಕಾರಿಗಳು – ಬಾಡಿಗೆ ನೆಪದಲ್ಲಿ ಸುಲಿಗೆ ನಡೆಯುತ್ತಿದ್ದರು ಅಧಿಕಾರಿಗಳು ಮೌನ ಮೌನ ಲೆಕ್ಕದಲ್ಲಿ ಒಂದು ಬಾಡಿಗೆಯಲ್ಲಿ ಲಕ್ಷ ಲಕ್ಷ….ದುಡಿದು ತಿನ್ನುವವರನ್ನು ಸುಲಿದು ತಿನ್ನುವವರು…..
ಸಾಮಾನ್ಯವಾಗಿ ಸರ್ಕಾರಿ ಸ್ಥಳಗಳಲ್ಲಿ ಏನನ್ನಾದರೂ ಬಾಡಿಗೆ ತಗೆದುಕೊಳ್ಳಬೇಕೆಂದರೆ ನೂರೆಂಟು ನಿಮಯ ಗಳು ನೂರೆಂಟು ಕಟ್ಟುಪ್ಪಣೆಗಳು ಇವೆ.ಆದರೆ ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿ ಇಲಾಖೆ ಯವರು ಏನೇ ಸೂಚನೆ ಒಪ್ಪಂದ ಹಾಕಿದ್ರು ಕೂಡಾ ಇವುಗಳನ್ನು ಮೀರಿ ಬಾಡಿಗೆಗಾರರು ಚಾಪೆಯ ಕೆಳಗೆ ನುಗ್ಗಿ ಬೇರೆಯವರಿಗೆ ಬಾಡಿಗೆ ಕೊಟ್ಟು ಲಕ್ಷ ಲಕ್ಷ ವಸೂಲಿ ಮಾಡ್ತಾ ಇದ್ದಾರೆ.ಹೌದು ಇದಕ್ಕೆ ಸಾಕ್ಷಿ ಬಸ್ ನಿಲ್ದಾಣ ದಲ್ಲಿನ ಮಳಿಗೆಗಳ ಬಾಡಿಗೆ ವಿಚಾರ.ಇಲ್ಲಿನ ಪ್ರತಿಯೊಂದು ಮಳಿಗೆಗಳಿಗೆ ಭೇಟಿ ನೀಡಿ ವಿಚಾರ ಮಾಡಿದ್ರೆ ಸಾಕು ಬಾಡಿಗೆ ಲೆಕ್ಕ ಪಕ್ಕಾ ಸಿಗುತ್ತದೆ.
ಬಾಡಿಗೆಯನ್ನು ಇಲಾಖೆಯ ನಿಮಯಗಳಂತೆ ಯಾರು ಕೂಡಾ ವಸೂಲಿ ಮಾಡ್ತಾ ಇಲ್ಲ ಎಂಬೊದನ್ನೇ ಸಧ್ಯ ಬಾಡಿಗೆ ತಗೆದುಕೊಂಡಿರುವ ವ್ಯಾಪಾರಿಗಳೇ ಹೇಳುತ್ತಾರೆ.ಮೂಲ ಬಾಡಿಗೆದಾರರು ಇಲಾಖೆಗೆ ಕಟ್ಟೊದು ಮಾತ್ರ ಅಲ್ಪ ಸ್ವಲ್ಪ ಆದರೆ ಬೇರೆಯವರಿಗೆ ಬಾಡಿಗೆ ಕೊಟ್ಟು ಪ್ರತಿದಿನ ಸಂಜೆಯಾಗುತ್ತಲೆ ನಾರಾರು ರೂಪಾಯಿ ಅಲ್ಲ ಸಾವಿರಾರು ರೂಪಾಯಿ ಬಾಡಿಗೆ ಯನ್ನು ವಸೂಲಿ ಮಾಡ್ತಾರೆ.ಸಂಜೆ ದೀಪ ಹಚ್ಚುತ್ತಿದ್ದಂತೆ ಅಂಗಡಿ ಮುಂದೆ ಬಾಡಿಗೆ ಕೊಟ್ಟವರು ಥಟ್ ಅಂತಾ ಹಾಜರಾಗುತ್ತಾರೆ
ವ್ಯಾಪಾರ ಆದರೂ ಆಯಿತು ಆಗಲಿಲ್ಲ ಅಂದರೂ ಆಯಿತು ಹೇಳಿದಷ್ಟು ಬಾಡಿಗೆಯನ್ನು ತಪ್ಪದೆ ಕೊಡಬೇಕು ಇಲ್ಲವಾದರೆ ಕಿರಿಕಿರಿ.ಹಲವಾರು ಅಂಗಡಿ ಗಳ ನಡುವೆ ವ್ಯಾಪಾರ ಆಗೊದು ಕೂಡಾ ಅಷ್ಟಕಷ್ಟ ಹೀಗಿರುವಾಗ ದುಬಾರಿಯಾದ ಬಾಡಿಗೆ ವ್ಯಾಪಾರಿಗಳಿಗೆ ದೊಡ್ಡ ತಲನೋವಾಗಿದ್ದು
ಬಾಡಿಗೆಯನ್ನು ಕೊಟ್ಟಿರುವ ಇಲಾಖೆಯ ಅಧಿಕಾರಿಗಳೇ ಇನ್ನಾದರೂ ಎಚ್ಚೇತ್ತು ಕೊಂಡು ಏನೇನಾಗುತ್ತಿದೆ ಎಂಬೊದನ್ನು ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ ದುಡಿದು ತಿನ್ನುವ ವರನ್ನು ಹೇಗೆ ಸುಲಿದು ತಿನ್ನುತ್ತಾರೆ ನೋಡಿ ಈ ಒಂದು ನಿರೀಕ್ಷೆಯಲ್ಲಿ ಇಲ್ಲಿನ ವ್ಯಾಪಾರಿಗಳು ಇದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..