ತುಮಕೂರು –
ಶಿಕ್ಷಣ ಸಭೆಯಲ್ಲಿ ನಿದ್ರೆಗೆ ಜಾರಿದ ಅಧಿಕಾರಿಗಳು
ಹೌದು ತುಮಕೂರು ಜಿಲ್ಲಾ ಪಂಚಾಯತ್ ಕಚೇರಿ ಯಲ್ಲಿ ನಡೆದ ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯು ವಿವಾದಗಳಲ್ಲಿ ಸಿಲುಕಿದೆ. ಶಿಕ್ಷಣ ಸಚಿವ ಮಧು ಬಂಗಾರಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಈಸಭೆಯಲ್ಲಿ, ಅಧಿಕಾರಿಗಳು ಸಭೆ ಶುರುವಾಗುತ್ತಿದ್ದಂತೆಯೇ ನಿದ್ರೆಗೆ ಜಾರಿದ್ದುಸಾರ್ವಜನಿಕರಿಗೆಆಶ್ಚರ್ಯ ಮೂಡಿಸಿದೆ
ಸಭೆಯ ಪ್ರಾರಂಭದಲ್ಲಿಯೇ ಕುಳಿತ ಸ್ಥಳದಲ್ಲೇ ನಿದ್ರೆ ಮಾಡಿದ ಅಧಿಕಾರಿಗಳು, ಸುಮಾರು 20 ನಿಮಿಷಗಳ ಕಾಲ ಸಭೆಯ ಸುದೀರ್ಘ ಚರ್ಚೆಗಳಿಗೆ ಗಮನ ಕೊಡದೇ ಇದ್ದರು. ಜಿಲ್ಲೆಯ ಶಾಲೆಗಳಲ್ಲಿ ಅಧೋರಣೆ, ಸೌಕರ್ಯಗಳ ಕೊರತೆ, ಮತ್ತು ಶಿಕ್ಷಕರ ಸಮಸ್ಯೆಗಳ ಕುರಿತು ಚರ್ಚೆ ನಡೆಯುತ್ತಿದ್ದರೂ, ಅಧಿಕಾರಿಗಳ ನಿಷ್ಕ್ರಿಯತೆ ಸಭೆಯ ಗಂಭೀರತೆಗೆ ಕಳಂಕ ತಂದಿದೆ. ಸಭೆಯಲ್ಲಿ ಹಾಜರಿದ್ದ ಶಿಕ್ಷಣಾಥಿಕಾರಿಗಳು ಪೋಷಕರು ಮತ್ತು ಶಿಕ್ಷಕರು, ‘ಸರ್ಕಾರಿ ಸಭೆಗಳು ಕೇವಲ ಔಪಚಾರಿ ಕತೆಗಳಿಗೆ ಸೀಮಿತವಾಗಿವೆ’ ಎಂದು ಟೀಕಿಸಿದ್ದಾರೆ.
ಮಧು ಬಂಗಾರಪ್ಪನವರ ಈ ಒಂದು ಸಭೆಯಲ್ಲಿ ಜಿಲ್ಲೆಯ ಶಿಕ್ಷಣ ಪರಿಸ್ಥಿತಿಯನ್ನು ಸುಧಾರಿಸಲು ಕ್ರಮಗಳನ್ನು ಪ್ರಸ್ತಾಪಿಸಿದರೂ, ಅಧಿಕಾರಿಗಳು ನಿದ್ರೆಯ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ
ಸುದ್ದಿ ಸಂತೆ ನ್ಯೂಸ್ ತುಮಕೂರು…..