ಹುಬ್ಬಳ್ಳಿ –
ಒಂಬತ್ತು ನಿಮಿಷ ಬೇಗ ಬಂದಿದ್ದಕ್ಕೆ BRTS ಚಾಲಕನಿಗೆ ಮೆಮೊ – ಮಾಡಲಾರದ ತಪ್ಪಿಗಾಗಿ ಚಾಲಕನಿಗೆ ಮೆಮೊ ನೀಡಿದ ಅಧಿಕಾರಿಗಳು…..ಹತ್ತಾರು ಸಮಸ್ಯೆಗಳ ನಡುವೆ ಡೂಟಿ ಮಾಡುತ್ತಿರುವ ಚಾಲಕರಿಗೆ ಮತ್ತೊಂದು ಟಾರ್ಚರ್ ಇದೇನಿದು DC ಯವರೇ…..
ಹುಬ್ಬಳ್ಳಿ ಧಾರವಾಡ ಮಧ್ಯೆ ಸಂಚಾರ ಮಾಡುತ್ತಿರುವ ಚಿಗರಿ ಬಸ್ ಸಂಚಾರ ಹೆಸರಿಗಷ್ಟೇ ಸುಗಮ ಸಾರಿಗೆ ಆರಂಭಗೊಂಡು ಐದಾರು ವರ್ಷ ಕಳೆದರು ಕೂಡಾ ಒಂದು ಕಡೆಗೆ ಸರಿಯಾಗಿ ಬಸ್ ಗಳ ಸರಿಯಾದ ನಿರ್ವಹಣೆ ಇಲ್ಲ ಇನ್ನೊಂದೆಡೆ ಹತ್ತಾರು ಸಮಸ್ಯೆಗಳ ನಡುವೆ ಚಾಲಕರು ಡೂಟಿ ಮಾಡ್ತಾ ಇದ್ದು ಇದರ ನಡುವೆ ಸಧ್ಯ ಚಾಲಕರಿಗೆ ಮತ್ತೊಂದು ತಲೆನೋವು ಎದುರಾಗಿದೆ
ಹೌದು ಒಂದು ಕಡೆಗೆ ಪದೇ ಪದೇ ರಸ್ತೆಯಲ್ಲಿ ಕೈ ಕೊಡುತ್ತಿರುವ ಬಸ್ ಗಳು ಇದರ ನಡುವೆ ಅಧಿಕಾರಿಗಳ ಟಾರ್ಚರ್ ಜೊತೆಗೆ ಸರಿಯಾಗಿ ಡೂಟಿ ಮಾಡಿದ್ರು ಒಂದು ಸಮಸ್ಯೆ ಸರಿಯಾಗಿ ಡೂಟಿ ಮಾಡದಿದ್ದರು ಮತ್ತೊಂದು ಸಮಸ್ಯೆ ಎನ್ನುತ್ತಿರುವ ನಡುವೆ ಈಗ ಮತ್ತೊಂದು ತಲೆನೋವಿನ ಸಂಗತಿಯೊಂದು ನಡೆದಿದೆ.
ಹೌದು ಒಂಬತ್ತು ನಿಮಿಷ ಬೇಗ ಬಂದಿರುವ ಚಾಲಕ ರೊಬ್ಬರಿಗೆ ಬಿಆರ್ ಟಿಎಸ್ ಅಧಿಕಾರಿಗಳು ಮೆಮೊ ನೀಡಿದ್ದಾರೆ.ಹೌದು ಮಧ್ಯಾಹ್ನ 3 ಗಂಟೆ 50 ನಿಮಿಷಕ್ಕೆ ಹುಬ್ಬಳ್ಳಿಯ ರೇಲ್ವೆ ನಿಲ್ದಾಣಕ್ಕೆ ಬರಬೇಕಾದ 100 ಬಸ್ ಒಂಬತ್ತು ನಿಮಿಷಗಳ ಮುಂಚಿತವಾಗಿ ಬಂದಿದೆ.ಬಸ್ ಸಮಯಕ್ಕಿಂತ ಮುಂಚಿತವಾಗಿ ಬಂದಿದ್ದೇ ತಡ ಕಂಟ್ರೋಲರ್ ಪೊನ್ ಮಾಡಿ ಮೇಲಾಧಿಕಾರಿಗಳಿಗೆ ಪುಂಗಿ ಊದಿದ್ದಾರೆ
ಈ ಒಂದು ಪುಂಗಿ ನಾದ ಬಂದಿದ್ದೇ ತಡ ಎದ್ದೊ ಬಿದ್ದೇ ಎಂದುಕೊಂಡು ಸಾರಿಥಿಯಲ್ಲಿ ಬಂದ ರಜಪೂತರು ಚಾಲಕನನ್ನು ಕೇಳದೆ ನೋಡದೆ ಪರಿಶೀಲನೆ ಮಾಡದೇ ಚಾಲಕನಿಗೆ ಮೆಮೊ ನೀಡಿ ಆತ್ಮಸ್ಥೈರ್ಯವನ್ನು ಕುಗ್ಗಿಸಿ ದ್ದಾರೆ ಈ ಒಂದು ವಿಚಾರ ಕುರಿತಂತೆ ಚಾಲಕ ಮೇಲಾಧಿಕಾರಿಗಳನ್ನು ಪ್ರಶ್ನೆ ಮಾಡಿದ್ದಾನೆ ಯಾರು ಕೂಡಾ ಸರಿಯಾಗಿ ಸರಿಯಾಗಿ ಸ್ಪಂದಿಸಿಲ್ಲ ಬೇಸತ್ತ ಚಾಲಕ ಸಧ್ಯ ಮೆಮೊ ನೀಡಿದ ಅಧಿಕಾರಿಗಳ ಹೆಸರನ್ನು ಬರೆದಿಟ್ಟು…..ಗೆ ನಿರ್ಧಾರ ಮಾಡಿದ್ದಾನೆ
ಸಧ್ಯ ಚಿಗರಿ ಬಸ್ ನಲ್ಲಿ ಪ್ರತಿಯೊಬ್ಬ ಚಾಲಕರು ಹತ್ತಾರು ಸಮಸ್ಯೆಗಳ ನಡುವೆ ಉಸಿರು ಗಟ್ಟಿದ ವಾತಾವರಣ ವಿದ್ದು ಚಾಲಕರಿಗೆ ಆತ್ಮಸ್ಥೈರ್ಯವನ್ನು ನೀಡಬೇಕಾದ ಮೇಲಾಧಿಕಾರಿಗಳು ಸಮಸ್ಯೆಗಳ ನಡುವೆ ಮತ್ತೊಂದಿಷ್ಟು ಸಮಸ್ಯೆಗಳನ್ನು ಚಾಲಕರಿಗೆ ನೀಡುತ್ತಿದ್ದು ಡಿಸಿಯವರೇ ಇದೇನಿದು ನಿಮ್ಮ ಕೆಳಮಟ್ಟದಲ್ಲಿ ಏನೇನಾಗುತ್ತಿದೆ ಒಮ್ಮೆ ನೋಡಿ ದೊಡ್ಡ ಅನಾಹುತಗ ಳಾಗುವ ಮುನ್ನವೇ ಸ್ಪಂದಿಸಿ ನೋಡಿ…..
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..