ಧಾರವಾಡ –
ಸಮಸ್ಯೆ ಸರಿ ಮಾಡೊದನ್ನ ಬಿಟ್ಟು ಸುದ್ದಿ ಬರೆದವರ ಮೇಲೆ ಕೇಸ್ ಮಾಡಲು ಹೇಳಿದ ಅಧಿಕಾರಿಗಳು ದಾಖಲೆಗಳೊಂದಿಗೆ ಧಾರವಾಡದ ಹೊಸ ಬಸ್ ನಿಲ್ದಾಣಗಳಲ್ಲಿನ ಅವ್ಯವಸ್ಥೆಯ ಮತ್ತಷ್ಟು ಸ್ಪೋಟಕ ಸುದ್ದಿಗಳು ನಿರೀಕ್ಷಿಸಿ…..ಸಾರಿಗೆ ಸಚಿವರೇ ಹೇಗಿದೆ ಅಧಿಕಾರಿಗಳ ವ್ಯವಸ್ಥೆ ನೋಡಿ
ಧಾರವಾಡದ ಹೊಸ ಬಸ್ ನಿಲ್ದಾಣದಲ್ಲಿನ ವಾಣಿಜ್ಯ ಮಳಿಗೆಗಳ ಬಾಡಿಗೆಯನ್ನು ಬೇಕಾಬಿಟ್ಟಿಯಾಗಿ ತಗೆದುಕೊಳ್ಳಲಾಗುತ್ತಿದೆ.ಕಡಿಮೆ ದರದಲ್ಲಿ ಟೆಂಡರ್ ತಗೆದುಕೊಂಡು ದುಬಾರಿಯಾದ ಹಣವನ್ನು ಬಾಡಿಗೆ ತಗೆದುಕೊಳ್ಳಲಾಗುತ್ತಿದೆ ಎಂಬ ಸ್ಪೋಟಕ ವಿಚಾರ ಕುರಿತಂತೆ ಸುದ್ದಿ ಸಂತೆ ಟೀಮ್ ವರದಿಗಳನ್ನು ಪ್ರಕಟಿಸಿತ್ತು ಇದರೊಂದಿಗೆ ದುಡಿದು ತಿನ್ನುವವರನ್ನು ಇಲ್ಲಿ ಹೇಗೆ ಸುಲಿದು ತಿನ್ನುತ್ತಾರೆ ಎಂಬೊದನ್ನು ತಿಳಿಸ ಲಾಗಿತ್ತು
ಇಲ್ಲಿನ ವ್ಯವಸ್ಥೆ ಕುರಿತಂತೆ ಸುದ್ದಿ ಸಂತೆ ಯಲ್ಲಿ ಸರಣಿ ಸ್ಪೋರಿಗಳು ಬರುತ್ತಿದ್ದಂತೆ ಇದನ್ನು ಸರಿ ಮಾಡದ ಇಲಾಖೆಯ ಅಧಿಕಾರಿಗಳು ಬಾಡಿಗೆದಾರರನ್ನು ಕರೆಯಿಸಿ ಮಾಹಿತಿಯನ್ನು ಪಡೆದುಕೊಂಡಿದ್ದಾರೆ ಬಾಡಿಗೆಯನ್ನು ಎಷ್ಟು ಕೋಡುತ್ತಿದ್ದಿರಿ ಏನೇನು ಕಥೆ ಎಲ್ಲವನ್ನು ಕೇಳಿದ್ದಾರೆ ದಾಖಲೆಗಳೊಂದಿಗೆ ಮಾಹಿತಿ ನೀಡಿದ್ದಾರೆ ಈ ಒಂದು ಮಾಹಿತಿಯನ್ನು ಪಡೆದುಕೊಂಡ ಇಲಾಖೆಯ ಅಧಿಕಾರಿಯೊಬ್ಬರು ಸುಲಿದು ತಿನ್ನುವವರ ಮೇಲೆ ಕ್ರಮವನ್ನು ಕೈಗೊಳ್ಳುವ ಬದಲಾಗಿ ಸುದ್ದಿ ಬರೆದವರ ಮೇಲೆ ಕೇಸ್ ಹಾಕಿ ಪ್ರಶ್ನೆ ಮಾಡಿ ಎಂದು ಹೇಳಿದ್ದಾರೆ.
ಇದನ್ನು ನೋಡ್ತಾ ಇದ್ದರೆ ಇಲಾಖೆಯ ವೇತನವನ್ನು ತಗೆದುಕೊಳ್ಳುವ ಅಧಿಕಾರಿಗಳು ಜನ ಸಾಮಾನ್ಯರ ಪರವಾಗಿ ಇರದೇ ಸುಲಿದು ತಿನ್ನುವವರ ಧ್ವನಿಯಾಗಿ ಕೆಲಸ ಮಾಡ್ತಾರೆ ಎಂಬೊದು ಕಂಡು ಬರುತ್ತಿದ್ದು ಇದನ್ನು ತಿಳಿದ ಸುದ್ದಿ ಸಂತೆ ಟೀಮ್ ಕೈಕಟ್ಟಿ ಸುಮ್ಮನೇ ಕುಳಿತು ಕೊಳ್ಳದೇ ಹೀಗೆ ಹೇಳಿದ ಅಧಿಕಾರಿಯ ಕಾರ್ಯವೈಖ ರಿಯ ಬಗ್ಗೆ ಮತ್ತು ಹೊಸ ಬಸ್ ನಿಲ್ದಾಣದಲ್ಲಿನ ಅವ್ಯವಸ್ಥೆಯ ಕುರಿತಂತೆ ಇನ್ನಿತರ ಕೆಲವೊಂದಿಷ್ಟು ವಿಚಾರಗಳನ್ನು ದಾಖಲೆಗಳೊಂದಿಗೆ ನಿಮ್ಮ ಮುಂದೆ ವರದಿ ಪ್ರಕಟಿಸಲಿದೆ.
ಸಾರಿಗೆ ಸಚಿವರೇ ಧಾರವಾಡ ಜಿಲ್ಲೆಯ ಜನಪ್ರತಿನಿ ಧಿಗಳೇ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರೇ ಹೇಗಿದ್ದಾರೆ ನಿಮ್ಮ ಅಧಿಕಾರಿಗಳು ಒಮ್ಮೇ ನೋಡಿ ದಾಖಲೆಗಳೊಂದಿಗೆ ಮತ್ತಷ್ಟು ಸ್ಟೋರಿ ನಿರೀಕ್ಷಿಸಿ
ಸುದ್ದಿ ಸಂತೆ ನ್ಯೂಸ್ ಧಾರವಾಡ …..