ಅವ್ಯವಹಾರ ಪ್ರಶ್ನೆ ಮಾಡಿದ ಶಿಕ್ಷಕಿಯ ಮೇಲೆ ದೌರ್ಜನ್ಯ ದಾಖಲಾಯಿತು ದೂರು…..

ಮೈಸೂರು –

ಹಣದ ಅವ್ಯವಹಾರ ಪ್ರಶ್ನಿಸಿದ ಶಿಕ್ಷಕಿಯ ಮೇಲೆ ದೌರ್ಜನ್ಯ ನಡೆದ ಆರೋಪ ಕೇಳಿ ಬಂದಿದೆ.ಹೌದು ಮೈಸೂರು ಶ್ರೀರಾಂಪುರ ಮರ್ಸಿ ಕಾನ್ವೆಂಟ್‌ನಲ್ಲಿ ಹಣ ದುರುಪಯೋಗ ಆಗುತ್ತಿರುವ ಬಗ್ಗೆ ಸಿಸ್ಟರ್ ಎಲ್ಸಿನಾ ಪ್ರಶ್ನಿಸಿದ್ದಾರೆ.ಇದನ್ನು ಪ್ರಶ್ನೆ ಮಾಡಿದ ಶಿಕ್ಷಕಿಯ ಮೇಲೆ ಈಗ ಸಾಕಷ್ಟು ಪ್ರಮಾಣ ದಲ್ಲಿ ಚಿತ್ರಹಿಂಸೆ ನೀಡಿದ ಆರೋಪ ಕೇಳಿ ಬಂದಿದೆ

ಬಲವಂತವಾಗಿ ಇಂಜೆಕ್ಷನ್ ನೀಡಿ ಹುಚ್ಚಿ ಪಟ್ಟ ಕಟ್ಟಲು ಯತ್ನಸಿದ್ದಾರೆ ಎಂದು ಶಾಲಾ ಮುಖ್ಯಸ್ಥೆ ಬಿಂದು ಸಿಸ್ಟರ್ ಆನ್‌ಮೇರಿ,ಸಿಸ್ಟರ್ ದೀಪಾ ವಿರುದ್ಧ ದೂರು ನೀಡಿದ್ದಾರೆ ಸಂಸ್ಥೆಗೆ ದಾನಿಗಳು ನೀಡಿರುವ ಹಣ ದುರುಪಯೋಗ ಆಗುತ್ತಿದೆ.ಇದನ್ನು ಪ್ರಶ್ನಿಸಿದ್ದಕ್ಕೆ ನನ್ನ ಕೈ ಕಟ್ಟಿ ಹಾಕಿ ಬಲವಂ ತವಾಗಿ ಇಂಜೆಕ್ಷನ್ ಕೊಟ್ಟರು.ಸೆಂಟ್ ಮೇರಿಸ್ ಮನೋ ರೋಗ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿದರು ಎಂದು ಸಿಸ್ಟರ್ ಎಲ್ಸೀನಾ ಆರೋಪಿಸಿದ್ದಾರೆ.

error: Content is protected !!
%d bloggers like this: