ಬೆಂಗಳೂರು –
SSLC ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಿಸಿದ್ದು ಮಾರ್ಚ್ 31 ರಿಂದ ಪರೀಕ್ಷೆ ಗಳು ಆರಂಭವಾಗಲಿದ್ದು ಪ್ರಥಮ ಭಾಷೆಯ ಪರೀಕ್ಷೆ ಮಾರ್ಚ್ 31ಕ್ಕೆ ನಡೆಯಲಿದೆ ಈ ಮೊದಲು ಏಪ್ರಿಲ್ 3ಕ್ಕೆ ನಿಗದಿಯಾಗಿದ್ದ ಮಹಾವೀರ ಜಯಂತಿಯ ಸಾರ್ವತ್ರಿಕ ರಜೆ ಯನ್ನು ಏಪ್ರಿಲ್ ನಾಲ್ಕಕ್ಕೆ ಸರ್ಕಾರ ಮರು ನಿಗದಿ ಪಡಿಸಿತ್ತು.
ಈ ಹಿನ್ನೆಲೆಯಲ್ಲಿ ಏಪ್ರಿಲ್ ನಾಲ್ಕಕ್ಕೆ ನಿಗದಿಯಾ ಗಿದ್ದ ಗಣಿತ ಮತ್ತು ಸಮಾಜ ಶಾಸ್ತ್ರ ಪರೀಕ್ಷೆಯ ದಿನಾಂಕದಲ್ಲಿ ಬದಲಾವಣೆ ಮಾಡುವ ಅನಿವಾ ರ್ಯತೆ ಸೃಷ್ಟಿಯಾಗಿತ್ತು.ಈ ಹಿನ್ನೆಲೆಯಲ್ಲಿ ಏಪ್ರಿಲ್ 1 ಕ್ಕೆ ನಿಗದಿಯಾಗಿದ್ದ ಪ್ರಥಮ ಭಾಷೆಯ ಪರೀಕ್ಷೆ ಯನ್ನು ಮಾ.31ಕ್ಕೆ ಮುಂದೂಡಲಾಗಿದೆ.ಏಪ್ರಿಲ್ 4 ಕ್ಕೆ ನಿಗದಿಯಾಗಿದ್ದ ಗಣಿತ ಮತ್ತು ಸಮಾಜ ಶಾಸ್ತ್ರ ಪರೀಕ್ಷೆಯನ್ನು ಏ. 3ಕ್ಕೆ ಮರು ನಿಗದಿ ಮಾಡಲಾಗಿದೆ.ಹಾಗೆಯೇ ಗಣಿತ ಮತ್ತು ಸಮಾಜ ಶಾಸ್ತ್ರ ಪರೀಕ್ಷೆ ಏಪ್ರಿಲ್ 3ಕ್ಕೆ ನಡೆಯಲಿದೆ.
ಏ.15ಕ್ಕೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಕ್ತಾ ಯಗೊಳ್ಳಲಿದೆ.ಹೆಚ್ಚಿನ ಮಾಹಿತಿಗೆ https://sslc.karnataka.gov.in/ ವೆಬ್‌ಸೈಟ್ ನೋಡಬಹುದು.
ಇನ್ನೂ ಎಲ್ಲಾ ಪರೀಕ್ಷೆಗಳು ಬೆಳಗ್ಗೆ 10.30ರಿಂದ ಮಧ್ಯಾಹ್ನ 1.45ರ ವರೆಗೆ ನಡೆಯಲಿದೆ.ಕೋರ್ ವಿಷಯಗಳಲ್ಲಿ ಸಂಗೀತ ವಿಷಯದ ಪರೀಕ್ಷೆಗಳು ಮಾತ್ರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 5.15ರ ವರೆಗೆ ನಡೆಯಲಿದೆ.ಎನ್‌ಎಸ್‌ಕ್ಯೂಎಫ್ ಪರೀಕ್ಷೆ ಗಳು ಬೆಳಗ್ಗೆ 10.30ರಿಂದ ಮಧ್ಯಾಹ್ನ 12.45ರ ವರೆಗೆ ನಡೆಯಲಿದೆ.ಏ.15ಕ್ಕೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಕ್ತಾಯಗೊಳ್ಳಲಿದೆ.ಹೆಚ್ಚಿನ ಮಾಹಿತಿಗೆ https://sslc.karnataka.gov.in/ ವೆಬ್‌ಸೈಟ್ ನೋಡಬಹುದು.
ಪರಿಷ್ಕೃತ ವೇಳಾಪಟ್ಟಿ ಈ ಕೆಳಗಿನಂತೆ ಇದೆ
ಮಾ.31 ಪ್ರಥಮ ಭಾಷೆ: ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್, ಸಂಸ್ಕೃತ
ಏ.3 ಗಣಿತ,ಸಮಾಜ ಶಾಸ್ತ್ರ
ಏ.6 ದ್ವಿತೀಯ ಭಾಷೆ: ಇಂಗ್ಲಿಷ್, ಕನ್ನಡ
ಏ.8 ಕೋರ್ ವಿಷಯ: ಎಲೆಮೆಂಟ್ಸ್ ಆಫ್ ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಮೆಕಾನಿಕಲ್, ಎಲೆಕ್ಟ್ರಿಕಲ್, ಇಂಜಿನಿಯರಿಂಗ್ ಗ್ರಾಫಿಕ್ಸ್, ಪ್ರೋಗ್ರಾಮಿಂಗ್ – ಎಲಿಮೆಂಟ್ಸ್ ಆಫ್ ಕಂಪ್ಯೂಟರ್ ಸೈನ್ಸ್.ಆರ್ಥಶಾಸ್ತ್ರ
ಏ.10 ವಿಜ್ಞಾನ, ರಾಜ್ಯಶಾಸ್ತ್ರ, ಹಿಂದೂಸ್ಥಾನಿ ಸಂಗೀತ, ಕರ್ನಾಟಕ ಸಂಗೀತ.
ಏ.12 ತೃತೀಯ ಭಾಷೆ: ಹಿಂದಿ, ಕನ್ನಡ, ಇಂಗ್ಲೀಷ್, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ, ಕೊಂಕಣಿ, ತುಳು. ಎನ್‌ಎಸ್‌ಕ್ಯೂಎಫ್ ವಿಷಯಗಳು- ಮಾಹಿತಿ ತಂತ್ರಜ್ಞಾನ, ರೀಟೇಲ್, ಆಟೋಮೊಬೈಲ್, ಹೆಲ್ತ್ ಕೇರ್, ಬ್ಯೂಟಿ ಆಯಂಡ್ ವೆಲ್‌ನೆಸ್.
ಏ.15 ಸಮಾಜ ವಿಜ್ಞಾನ
ಹೀಗೆ ಪರೀಕ್ಷಾ ವೇಳಾಪಟ್ಟಿ ಇದ್ದಿದ್ದು ಈಗಾಗಲೇ ಪರೀಕ್ಷೆ ಬರೆಯಲು ಸಿದ್ದವಾಗಿರುವ ವಿದ್ಯಾರ್ಥಿ ಗಳಿಗೆ ಒಳ್ಳೆಯ ದಾಗಲಿ
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..