ಹಾವೇರಿ –
SSLC ಪರೀಕ್ಷೆ ಬರೆಯಲು ಬಂದಿದ್ದ ವಿದ್ಯಾರ್ಥಿನಿ ಜೊತೆ ಅಸಭ್ಯವಾಗಿ ವರ್ತಿಸಿ ಕೆನ್ನೆಗೆ ಮುತ್ತು ಕೊಟ್ಟ ಶಿಕ್ಷಕನ ವಿರುದ್ಧ ಪ್ರಕರಣ ದಾಖಲಾಗಿದೆ ಹಾವೇರಿ ಜಿಲ್ಲೆಯ ಹಿರೆಕೇರೂರು ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಅಡಿ ದೈಹಿಕ ಶಿಕ್ಷಣ ಶಿಕ್ಷಕ ಪರಮೇಶ ಎಸ್.ಐರಣಿ ಎಂಬಾತನ ಮೇಲೆ ಕೇಸ್ ದಾಖಲಾಗಿದೆ.
ಪರೀಕ್ಷಾ ಕೊಠಡಿ ಮೇಲ್ವಿಚಾರ ಕನಾಗಿದ್ದ ಪರಮೇಶ, ಏಪ್ರಿಲ್ 8 ರಂದು ಹಿಂದಿ ವಿಷಯದ ಪರೀಕ್ಷೆ ಬರೆಯಲು ಆಗಮಿಸಿದ್ದ ವಿದ್ಯಾರ್ಥಿನಿಯೊಬ್ಬರಿಗೆ ಹೆಚ್ಚಿನ ಅಂಕ ಕೊಡಿಸುವ ಆಮಿಷವೊಡ್ಡಿದ್ದ ಪರೀಕ್ಷಾ ಕೇಂದ್ರದ ಕಟ್ಟಡದ ಮೇಲೆ ಕರೆದೊಯ್ದು ಪ್ರವೇಶ ಪತ್ರದ ಸಂಖ್ಯೆ ಕೇಳುತ್ತಾ ನಿನಗೆ ಹೆಚ್ಚು ಅಂಕ ಕೊಡಿಸುತ್ತೇನೆ ಎಂದು ಮೈ-ಕೈ ಮುಟ್ಟಿ ಲೈಂಗಿಕ ಕಿರುಕುಳ ಕೊಟ್ಟು ಕೆನ್ನೆಗೆ ಮುತ್ತು ಕೊಟ್ಟಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖವನ್ನು ಮಾಡಿ ದಾಖಲು ಮಾಡಲಾಗಿದೆ. ಪರಮೇಶನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಸಂತ್ರಸ್ತೆಯ ಸಹೋದರ ಹಿರೇ ಕೆರೂರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.