ಹುಬ್ಬಳ್ಳಿ –
ಸರ್ಕಾರಿ ಆದೇಶಕ್ಕೂ ಗೌರವ ಕೊಡದ ಪಾಲಿಕೆಯ ಅಧಿಕಾರಿಗಳು – ವರ್ಗಾವಣೆ ಆದೇಶವಾಗಿ ಹತ್ತು ದಿನಗಳಾದ್ರೂ ಇನ್ನೂ ಸಿಗದ ಬಿಡುಗಡೆ ಭಾಗ್ಯ….. ಇದೇನಿದು ಆಯುಕ್ತರೇ ಪಂಡಿತನ ಒತ್ತಡಕ್ಕೆ ನೀವು……
ರಾಜ್ಯದಲ್ಲಿಯೇ ಎರಡನೇಯ ದೊಡ್ಡ ಮಹಾನಗರ ಪಾಲಿಕೆಯಾಗಿರುವ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ವರ್ಗಾವಣೆಯಾದವರಿಗೆ ಬಿಡುಗಡೆ ಭಾಗ್ಯ ಸಿಗುತ್ತಿಲ್ಲ ಎಂಬ ಮಾತು ಮತ್ತೆ ಸಾಬೀತಾಗಿದೆ ಹೌದು ಕಳೆದ ವಾರವಷ್ಟೇ ಪಾಲಿಕೆಯಿಂದ ಹಲವು ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶವನ್ನು ಮಾಡಿದೆ ಆದೇಶವಾಗಿ ಹತ್ತು ದಿನಗಳು ಕಳೆದರು ಕೂಡಾ ಈವರೆಗೆ ಇನ್ನೂ ವರ್ಗಾವಣೆ ಯಾದ ವರಿಗೆ ಬಿಡುಗಡೆ ಭಾಗ್ಯ ಸಿಗುತ್ತಿಲ್ಲ
ಅತ್ತ ವರ್ಗಾವಣೆ ಇತ್ತ ಇನ್ನೂ ಸಿಗದ ಬಿಡುಗಡೆಯ ಭಾಗ್ಯ ವರ್ಗಾವಣೆಯಾದವರು ಅಲ್ಲಿಗೇ ಹೋಗಬೇಕಾ ಇಲ್ಲೇ ಇರಬೇಕು ಎಂಬ ಗೊಂದಲದಲ್ಲಿದ್ದು ಇದಕ್ಕೆ ಪಾಲಿಕೆಯ ಆಯುಕ್ತರು ಅಂತಿಮ ಮುದ್ರೆಯನ್ನು ಒತ್ತುತ್ತಿಲ್ಲ.ಸಾಮಾನ್ಯವಾಗಿ ಯಾರೇ ವರ್ಗಾವಣೆಗೊಂ ಡಿದ್ದರು ಅವರನ್ನು ನಿಮಯಗಳಂತೆ ಕೂಡಲೇ ಬಿಡುಗಡೆ ಮಾಡಬೇಕು
ಆದರೆ ಸರ್ಕಾರಿ ಆದೇಶವಾಗಿ ಹತ್ತು ದಿನಗಳು ಕಳೆಯುತ್ತಾ ಬಂದರು ಕೂಡಾ ಇನ್ನೂ ಈ ಒಂದು ವಿಚಾರ ಗೊತ್ತಿದ್ದರೂ ಕೂಡಾ ಗೊತ್ತಿಲ್ಲದಂತೆ ಪಾಲಿಕೆಯ ಅಧಿಕಾರಿಗಳು ಮೌನವಾಗಿದ್ದಾರೆ.ಇನ್ನೂ ಇತ್ತ ಪಾಲಿಕೆ ಯಲ್ಲಿ ಹಲವಾರು ವರ್ಷಗಳಿಂದ ಅವರು ಇವರು ಠಿಕಾಣೆ ಹೂಡಿದ್ದಾರೆ ಹುದ್ದೆಗಳನ್ನು ಹೊಂದಿದ್ದಾರೆ ಎಂದು ಬೊಬ್ಬೆ ಹೊಡೆಯುವ ಪಂಡಿತನ ಒತ್ತಡಕ್ಕೆ ಪಾಲಿಕೆಯ ಅಧಿಕಾರಿಗಳು ಮಣಿದಿದ್ದಾರೆ ಎಂಬ ಗುಸು ಗುಸು ಪಿಸು ಪಿಸು ಮಾತುಗಳು ಪಾಲಿಕೆಯ ಆವರಣ ದಲ್ಲಿ ಕೇಳಿ ಬರುತ್ತಿದ್ದು
ತಾನೇ ಸಾಕಿದ ಗಿಣಿಗಳು ಪಂಜರದಿಂದ ಹೊರಗೆ ಹೋಗುತ್ತವೆ ಎಂಬ ಆತಂಕದಲ್ಲಿ ಪಂಡಿತನಿದ್ದು ಬಿಡುಗಡೆ ಆಗದಂತೆ ತಂತ್ರಗಾರಿಕೆಯನ್ನು ಕೂಡಾ ಮಾಡಿದ್ದು ಆಯುಕ್ತರೇ ಇನ್ನಾದರೂ ಈ ಒಂದು ವಿಚಾರವನ್ನು ಗಮನಿಸಿ ವರ್ಗಾವಣೆಯಾದರಿಗೆ ಬಿಡುಗಡೆ ಭಾಗ್ಯ ನೀಡುತ್ತಿರಾ ಎಂಬ ನಿರೀಕ್ಷೆಯಲ್ಲಿ ವರ್ಗಾವಣೆಯಾದವರು ಇದ್ದಾರೆ ಇದನ್ನು ಆಯುಕ್ತರು ಮಾಡ್ತಾರಾ ಪಂಡಿತನ ಒತ್ತಡಕ್ಕೆ ಮಣಿಯುತ್ತಾರೆಯಾ ಎಂಬೊದನ್ನು ಕಾದು ನೋಡಬೇಕಿದೆ.
ಅಲಿ ಕುಂದಗೋಳ ಜೊತೆ ಪವನ ಕಪಲಿ
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ.