ಧಾರವಾಡ –
ಪ್ರಹ್ಲಾದ್ ಜೋಶಿ ನಾಮಪತ್ರ ಸಲ್ಲಿಕೆ ಬನ್ನಿ ಸಾಕ್ಷಿಯಾಗೋಣ ಹೊಸ ಮನ್ವಂತರದ ಮುನ್ನುಡಿ ಬರಿಯೋಣ ಮಾಜಿ ಶಾಸಕ ಅಮೃತ ದೇಸಾಯಿ ಕರೆ – ನಾಳೆ ಧಾರವಾಡದಲ್ಲಿ ಪ್ರಹ್ಲಾದ್ ಜೋಶಿ ನಾಮಪತ್ರ ಸಲ್ಲಿಕೆ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಕರೆ ನೀಡಿದ ಧಣಿ
ಲೋಕಸಭಾ ಚುನಾವಣೆಯ ಕಾವು ರಂಗೇ ರುತ್ತಿದ್ದು ಧಾರವಾಡ ಜಿಲ್ಲೆಯಲ್ಲೂ ಕೂಡಾ ಚುನಾವಣೆಯ ಕಾವು ಜೋರಾಗುತ್ತಿದ್ದು ಈ ನಡುವೆ ಭಾರತೀಯ ಜನತಾ ಪಕ್ಷದ ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ನಾಮಪತ್ರವನ್ನು ಸಲ್ಲಿಸಲಿದ್ದಾರೆ.ಹೌದು ಐದನೇಯ ಬಾರಿಗೆ ಆಯ್ಕೆ ಬಯಸಿ ಪ್ರಹ್ಲಾದ್ ಜೋಶಿಯವರು ಮತ್ತೊಮ್ಮೆ ನಾಮಪತ್ರವನ್ನು ಸಲ್ಲಿಸಲಿದ್ದು
ಈ ಒಂದು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆ ಯಲ್ಲಿ ಪಾಲ್ಗೊಂಡು ದೇಶಕ್ಕೆ ಮೋದಿ ,ಧಾರವಾ ಡಕ್ಕೆ ಜೋಶಿ ಎಂಬ ಸಂದೇಶದೊಂದಿಗೆ ಸರ್ವರಿಗೂ ಮಾಜಿ ಶಾಸಕ ಅಮೃತ ದೇಸಾಯಿ ಕರೆ ನೀಡಿದ್ದಾರೆ.
ಬನ್ನಿ ಸಾಕ್ಷಿಯಾಗೋಣ ಹೊಸ ಮನ್ವಂತರದ ಮುನ್ನುಡಿಗಾಗಿ. ಭಾರತೀಯ ಜನತಾ ಪಕ್ಷದ ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆ ಕಾರ್ಯಕ್ರಮದಲ್ಲಿ ನಾವೇ ಲ್ಲರೂ ಹೊಸದೊಂದು ಐತಿಹಾಸಿಕ ದಾಖಲೆ ಯನ್ನು ಬರಿಯೋಣ ಎನ್ನುತ್ತಾ ಸರ್ವರಿಗೂ ಸ್ವಾಗತವನ್ನು ಕೋರಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ……