ವಿಜಯಪುರ –
ನಾಯಿಯೊಂದನ್ನು ರಕ್ಷಣೆ ಮಾಡಲು ಹೋಗಿ ಶಿಕ್ಷಕ ರೊಬ್ಬರು ರಸ್ತೆ ಅಪಘಾತ ದಲ್ಲಿ ಸಾವಿಗೀಡಾದ ಘಟನೆ ವಿಜಯಪುರ ದಲ್ಲಿ ನಡೆದಿದೆ.ಹೌದು ಶಾಲೆಗೆ ತೆರಳು ತ್ತಿದ್ದ ಶಿಕ್ಷಕ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಅಂಬಳನೂರ ಕ್ರಾಸ್ ಬಳಿ ರಸ್ತೆ ಅಪಘಾತ ವಾಗಿದೆ. ಬೈಕ್ ನಲ್ಲಿ ಶಿಕ್ಷಕ ವಾಸುದೇವ ಹಂಚಾಟೆ ತೆರಳುತ್ತಿದ್ದರು.

ಈ ವೇಳೆ ಸಡನ್ ಆಗಿ ನಾಯಿ ರಕ್ಷಿಸಲು ಹೋಗಿ ವಾಸುದೇವ ಅವರ ಬೈಕ್ ಸ್ಕಿಡ್ ಆಗಿದೆ.ರಸ್ತೆಯ ಮೇಲೆ ಶಿಕ್ಷಕ ವಾಸದೇವ ಕೆಳಗಡೆ ಬಿದ್ದಿದ್ದಾರೆ. ರಸ್ತೆ ಮೇಲೆ ಬಿದ್ದಿದ್ದರಿಂದ ತಲೆಗೆ ಪೆಟ್ಟಾಗಿ ತೀವ್ರ ರಕ್ತ ಸೋರಿಕೆಯಾಗಿ ಶಿಕ್ಷಕ ವಾಸುದೇವ್ ಸಾವನ್ನಪ್ಪಿದ್ದಾರೆ.
ಬಸವನ ಬಾಗೇವಾಡಿ ತಾಲೂಕಿನ ಕನಕಲ ಗ್ರಾಮದ ಶಾಲೆಯಲ್ಲಿ ವಾಸದೇವ್ ವಿಜ್ಞಾನ ಶಿಕ್ಷಕರಾಗಿದ್ದರು. ನೆಚ್ಚಿನ ಶಿಕ್ಷಕರನ್ನು ಕಳೆದುಕೊಂಡು ವಿದ್ಯಾರ್ಥಿಗಳು ಬಿಕ್ಕಿಬಿಕ್ಕಿ ಅತ್ತಿದ್ದಾರೆ.
ಸುದ್ದಿ ಸಂತೆ ನ್ಯೂಸ್ ವಿಜಯಪುರ…..






















