CM ಬಳಿ ಕಣ್ಣೀರಿಟ್ಟಿದ್ದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಟಾಫರ್ ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ ಬಳಿ ಹೇಳಿ ಕೊಂಡಿದ್ದ ವಾಣಿ…..
ಯಲ್ಲಾಪುರ –
ಹೌದು ಶಿರಸಿ ಯ ಯಲ್ಲಾಪೂರ ತಾಲೂಕಿನ ಕಳಚೆ ಕುಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಓದುತ್ತಿದ್ದ ವಾಣಿ ಗಜಾನನ ಭಟ್ಟ SSLC ಪರೀಕ್ಷೆಯಲ್ಲಿ ಗ್ರಾಮೀಣ ಭಾಗದ ಮಾದರಿ ಫಲಿತಾಂಶಕ್ಕೆ ಸಾಕ್ಷಿಯಾಗಿದ್ದಾಳೆ.ಹಲವು ಸಂಕಷ್ಟ ಗಳ ನಡುವೆಯೂ 625 ರಲ್ಲಿ 620 ಅಂಕ ಪಡೆದಿದ್ದಾಳೆ.

ಕನ್ನಡ ಮಾಧ್ಯಮವನ್ನೇ ಆಯ್ಕೆ ಮಾಡಿಕೊಂಡು ಕನ್ನಡ ಭಾಷೆಗೆ 125,ಇಂಗ್ಲೀಷ್ ಭಾಷೆಗೆ 99,ಹಿಂದಿ ಭಾಷೆಗೆ 100 ಗಣಿತ 96,ವಿಜ್ಞಾನ ವಿಷಯಕ್ಕೆ100,ಸಮಾಜ ವಿಜ್ಞಾನ 100 ಅಂಕ ಗಳಿಸುವ ಮೂಲಕ ಕಳಚೆ ಸರ್ಕಾರಿ ಪ್ರೌಢಶಾಲೆಗೆ ಕೀರ್ತಿ ತಂದಿದ್ದಾಳೆ.ಕಳೆದ ಮಳೆಗಾಲದ ಅತಿವೃಷ್ಠಿಯಿಂದ ಕಳಚೆ ಗ್ರಾಮವು ಗುಡ್ಡ ಕುಸಿತವಾಗಿ ತಿಂಗಳುಗಟ್ಟಲೆ ಪ್ರೌಢಶಾಲೆಯು ಸ್ಥಗಿತವಾದರೂ ಎದೆಗುಂದದೇ ಆನ್ ಲೈನ್ ಕ್ಲಾಸ್ ನಲ್ಲಿ ಪರಿಶ್ರಮ ಪಟ್ಟು ಓದಿದ ಪರಿಣಾಮ ಈ ಫಲಿತಾಂಶ ನನಗೆ ಒಲಿದಿದೆ ಎಂದು ಹೆಮ್ಮೆಯಿಂದ ಹೇಳಿ ಕೊಂಡಿದ್ದಾರೆ.ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಯವರು ಮುಖ್ಯ ಮಂತ್ರಿಯಾಗಿ ಅಧಿಕಾರವಹಿಸಿಕೊಂಡ ತಕ್ಷಣ ಕಳಚೆಗೆ ಬಂದಾಗ ಕಳಚೆಯ ಭೂಕುಸಿತದಿಂದ ತನಗಾದ ಶೈಕ್ಷಣಿಕ ತೊಂದರೆಯನ್ನು ಕಣ್ಣೀರು ಹಾಕಿ ಅವರ ಬಳಿ ವಿವರಿಸಿದಾಗ ಬೆನ್ನುತಟ್ಟಿ ಧೈರ್ಯ ತುಂಬಿದ್ದರು. ಎಂದು ಆಕೆ ಕಳೆದ ಮಳೆಗಾಲದ ಕಳಚೆ ಭೂಕುಸಿತದ ಅವಘಡವನ್ನು ನೆನಪಿಸಿಕೊಂಡಿದ್ದಾಳೆ.