This is the title of the web page
This is the title of the web page

Live Stream

[ytplayer id=’1198′]

March 2024
T F S S M T W
 123456
78910111213
14151617181920
21222324252627
28293031  

| Latest Version 8.0.1 |

State News

ಹಳೆ ಪಿಂಚನಿ ಪಡೆಯಲು ನವೆಂಬರ್ 4 ಕ್ಕೆ ವಿಜಯಪುರದಲ್ಲಿ ಸಂಕಲ್ಪ ಯಾತ್ರೆ ಕರ್ನಾಟಕ ರಾಜ್ಯ ಸರ್ಕಾರಿ NPS ನೌಕರರ ಸಂಘ ಜಿಲ್ಲಾ ಘಟಕದಿಂದ ಕಾರ್ಯಕಾರಿಣಿ ಸಭೆ

WhatsApp Group Join Now
Telegram Group Join Now

ವಿಜಯಪುರ

ಓ ಪಿ ಎಸ್ ಪಡೆಯಲು ನವೆಂಬರ್ 4ರ ಸಂಕಲ್ಪ ಯಾತ್ರೆ ಯಶಸ್ವಿಗೊಳಿಸಲು ಕರೆ.ನಗರದ ಬಾಲಕರ ಪ್ರೌಢಶಾಲೆಯ ಗಾಂಧಿ ಚೌಕ್ ದ ಸಭಾಭವನ ವಿಜಯಪುರದಲ್ಲಿ ರಾಜ್ಯ ಸರ್ಕಾರಿ NPS  ನೌಕರರ ಸಂಘದ ಜಿಲ್ಲಾ ಕಾರ್ಯಕಾರಿಣಿ ಸಭೆ ಜರುಗಿತು.

 

ಎನ್‌ಪಿಎಸ್ ರದ್ದುಪಡಿಸಿ ಓಪಿಸ್ ಜಾರಿ ಗೊಳಿಸಲು ಡಿಸೆಂಬರ್ 19 ರಂದು ರಾಜಧಾನಿ ಬೆಂಗಳೂರು ನಲ್ಲಿ ನಡೆಯುವ ಅನಿರ್ದಿಷ್ಟಾವಧಿ ಹೋರಾಟದ ಪೂರ್ವಭಾವಿಯಾಗಿ ನವಂಬರ್ 4ರಂದು ವಿಜಯಪುರಕ್ಕೆ ಆಗಮಿಸುತ್ತಿರುವ ರಾಜ್ಯಾಧ್ಯಕ್ಷರಾದ ಶಾಂತಾರಾಮ ನೇತೃತ್ವದ ತಂಡ ಜಿಲ್ಲೆಗೆ ಆಗಮಿಸುವ ಹಿನ್ನಲೆ ಸಂಕಲ್ಪ ಯಾತ್ರೆಗೆ ಹೆಚ್ಚಿನ ಎನ್‌ಪಿಎಸ್ ನೌಕರರನ್ನು ಸೇರಿಸಿ ಯಶಸ್ವಿಗೊಳಿಸಲು ಸಭೆ ನಿರ್ಧರಿಸಲಾಯಿತು.

 

ಎನ್‌ಪಿಎಸ್ ಜಿಲ್ಲಾ ಅಧ್ಯಕ್ಷರಾದ ಮಲ್ಲನಗೌಡ ಹಡಲಗೇರಿ ಮಾತನಾಡಿ ಸುದೀರ್ಘವಾದ ಸೇವೆ ಸಲ್ಲಿಸಿದ ನಮಗೆ ಸಂವಿಧಾನದ ಆಶಯದಂತೆ ನೀಡುವಂತಹ ಪಿಂಚಣಿ ಗೌರವದ ಸಂಕೇತವಾ ಗಿತ್ತು ಆದರೆ ಪ್ರಸ್ತುತ ಜಾರಿಗೊಳಿಸಿರುವ ನೂತನ ಪಿಂಚಣಿ ಯೋಜನೆ ಸಂಧ್ಯಾ ಕಾಲದ ಜೀವನ ದುಸ್ತರಗೊಳಿಸಿದೆ ನಮ್ಮ ವೇತನದಲ್ಲಿ ಕಟಾವಣೆ ಆದ ಹಣವನ್ನು ಖಾಸಗಿ ಕಂಪನಿಗಳ ಮೂಲಕ ಷೇರು ಮಾರುಕಟ್ಟೆಯಲ್ಲಿ ತೊಡಗಿಸಿ ನೀಡುತ್ತಿ ರುವ ಪಿಂಚಣಿ ತಿಂಗಳಿಗೆ 1000 ದಿಂದ 1500 ಬರುತ್ತಿದ್ದು ತಿಂಗಳಿಗೆ ಬರುವ ಪಿಂಚಣಿಯು ದಿನ ಬಳಕೆಯ ಮೊಬೈಲ್ ಕರೆನ್ಸಿ ವಾಹನಕ್ಕೆ ಬಳಸುವ ಪೆಟ್ರೋಲ್ ಗೆ ಸಾಕಾಗುವುದಿಲ್ಲ.

 

ರಾಜ್ಯಾಧ್ಯಕ್ಷ ರಾದ ಶಾಂತರಾಮ್ ಅವರು ನವಂಬರ್ 4ರ ಸಂಕಲ್ಪ ಯಾತ್ರೆಯನ್ನು ಹಮ್ಮಿಕೊಂಡಿದ್ದು ಸಮಸ್ತ NPS ನೌಕರರು ಓಪಿಸ್ ನೌಕರರ ಸಹಕಾರದಿಂದ ನಗರದಲ್ಲಿ ಸಂಚರಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ನೌಕರ ರನ್ನು ಜಾಗ್ರತೆಗೊಳಿಸಲು ಕರೆ ನೀಡಿದರು.

 

ಜಿಲ್ಲಾ ಸಂಘದ ಗೌರವ ಸಲಹೆಗಾರರಾದ ಜಗದೀಶ ಬೋಳಸೂರ ಮಾತನಾಡಿ ಇದು ಸಂಧ್ಯಾಕಾಲದ ಸುರಕ್ಷತೆ ಸಲುವಾಗಿ ನಡೆಸುವ ಭವಿಷ್ಯದ ಹೋರಾಟವಾಗಿದ್ದು ಒಪಿಎಸ್ ನೌಕರರು ಕೂಡ ನಮ್ಮ ಹೋರಾಟಕ್ಕೆ ಬೆಂಬಲಿ ಸುವರು ವಿವಿಧ ಸಂಘ ಸಂಸ್ಥೆಗಳಿಗೆ ಭೇಟಿ ನೀಡಿ ಬೆಂಬಲ ಪಡೆದುಕೊಳ್ಳಿ ಎಂದು ತಿಳಿಸಿದರು.

 

ನೂತನ ಪಿಂಚಣಿ ಒಳಪಡುವ ನೌಕರ ಸಂಘದ ಜಿಲ್ಲಾಧ್ಯಕ್ಷರಾದ ಆನಂದ ಪವಾರ ಮಾತನಾಡಿ ಎನ್‌ಪಿಎಸ್ ದಿಂದ ಓ ಪಿ ಎಸ್ ಪಡೆಯಲು ಪ್ರಸ್ತುತ ನಡೆಯುತ್ತಿರುವ ಹೋರಾಟ ಸೂಕ್ತ ಸಮಯದ್ದಾಗಿದ್ದು ಎಲ್ಲರೂ ಒಗ್ಗಟ್ಟಾಗಿ ಹೋರಾಡೋಣ ಎಂದು ತಿಳಿಸಿದರು.

 

ಸಭೆಯಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಶಂಕರ ಕಂಡೆಕರ,ನೌಕರ ಸಂಘದ ನಿರ್ದೇಶಕರಾದ ಎಂ, ಎಸ್,ಟಕ್ಕಳಕಿ,ನಿಜಪ್ಪ ಮೇಲಿನಕೇರಿ, ವಿಜಯ ಕುಮಾರ ಅವತಾಡೆ, ಪ್ರೌಢ ಶಾಲೆ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಶಿವರಾಜ ಬಿರಾದಾರ  ಎಂ,ಡಿ, ಕಂಟಿಕರ, ಶಿಕ್ಷಕ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳಾದ ತಿಪ್ಪಣ್ಣ ಜಂಬಗಿ, ಜಿಪಿಟಿ ಜಿಲ್ಲಾಧ್ಯಕ್ಷ ಚಂದ್ರಶೇಕರ, ಶಿಕ್ಷಕ ಸಂಘದ ಬಬಲೇ ಶ್ವರದ ಅಧ್ಯಕ್ಷರಾದಂತಹ ರವೀಂದ್ರ ಉಗಾರ ತಿಕೋಟ ಶಿಕ್ಷಕ ಸಂಘದ ಪ್ರಧಾನ ಕಾರ್ಯದರ್ಶಿ ಗಳಾದ ಅಶೋಕ ಭಜಂತ್ರಿ, ನಾಗರಾಜ ಬರಗುಡಿ, ಸಾಬು ಗಗನಮಾಲಿ, ಸೊಸೈಟಿ ನಿರ್ದೇಶಕರಾದ ಚೆನ್ನಯ್ಯ ಮಠಪತಿ,

 

ಸಂತೋಷ ಕುಲಕರ್ಣಿ ಆನಂದ ಕೆಂಭಾವಿ, ತಾಳಿಕೋಟಿ ತಾಲೂಕಿನ ನೌಕರ ಸಂಘದ ಖಜಾಂಚಿ ಚೌದರಿ, ಜಿಲ್ಲೆಯ ವಿವಿಧ ತಾಲೂಕಿನ ಎನ್‌ಪಿಎಸ್ ಸಂಘದ ಪದಾಧಿಕಾರಿಗಳಾದ ಶಿವಾನಂದ ಕಲ್ಲೂರ, ಸಂತೋಷ ಬೂದಿಹಾಳ, ಅಶೋಕ ಪತ್ತಾರ, ನಾಗೇಶ ನಾಗೂರ,ಸಂಗಮೇಶ ನವಲಿ,ವಿಶ್ವನಾಥ ಮೇತ್ರಿ,ಶಂಕರ ತಳವಾರ, ವಿನೋದ ರತ್ನಾಕರ, ಆರ್, ಬಿ,ಮೂದನೂರ, ಮಹಾಂತಗೌಡ ಪಾಟೀಲ, ಪ್ರಭು ಬಿರಾದಾರ, ವಾಸೀಮ್ ಚಟ್ಟರಕಿ, ಚಿಕ್ಕಬೇನೂರ ಧನಪಾಲ್, ಪಾರಗೊಂಡ, ಕಮತಗಿ, ಮಲ್ಲು ಮೇತ್ರಿ, ಎನ್‌ಪಿಎಸ್  ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಮತಿ ಸಿಂಧೂರ, ಪ್ರಕಾಶ, ಬಸವರಾಜ ಪಡಾಗಾನೂರ, ಆರ್,ಎಂ,ಪಾಟೀಲ, ಮಂಜುನಾಥ ಅರೇಶಂಕರ, ಅನೀಲ ಗುಡ್ಡಪ್ಪಗೊಳ, ಸಿದ್ರಾಯ ಅಥಣಿ,

 

ಸಭೆಯನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳ ಶಂಕರ ಕಂಡೆಕರ ಸ್ವಾಗತಿಸಿದರು. ಪ್ರಾಸ್ತಾವಿಕ ವಾಗಿ ಎಚ್ ಕೆ ಬೂದಿಹಾಳ ಮಾತನಾಡಿದರು. ಸಾಬು ಗಗನಮಹಲಿ ವಂದಿಸಿದರು.


Google News

 

 

WhatsApp Group Join Now
Telegram Group Join Now
Suddi Sante Desk