ಧಾರವಾಡ –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಲ್ಲೂ 79ನೇ ಸ್ವಾತಂತ್ರೋತ್ಸವ ಆಚರಣೆ – ಉಪಮೇಯರ್ ಸಂತೋಷ ಚೌವ್ಹಾನ್ ಗೆ ಸಾಥ್ ನೀಡಿದ ಶಂಕರಾನಂದ ಬನಶಂಕರಿ,ಅರವಿಂದ ಜಮಖಂಡಿ ಪಾಲಿಕೆಯ ಸದಸ್ಯರು ಸಿಬ್ಬಂದಿಗಳು
79ನೇ ಸ್ವಾಂತಂತ್ರೋತ್ಸವದ ಸಡಗರ ಸಂಭ್ರಮ ವಿದ್ಯಾಕಾಶಿ ಧಾರವಾಡದಲ್ಲೂ ಕಳೆಗಟ್ಟಿದ್ದು ಎಲ್ಲೇಡೆ ಸಡಗರ ಸಂಭ್ರಮದಿಂದ ಆಚರಣೆ ಮಾಡಿದ್ದು ಕಂಡು ಬಂದಿತು.ಇನ್ನೂ ಈ ಒಂದು ಆಚರಣೆಯನ್ನು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಕಚೇರಿಯಲ್ಲೂ ಆಚರಣೆ ಮಾಡಲಾಯಿತು.
ಧಾರವಾಡದ ಮಹಾನಗರ ಪಾಲಿಕೆಯ ಕಚೇರಿಯಲ್ಲೂ 79ನೇ ಸ್ವಾತಂತ್ರೋತ್ಸವವನ್ನು ಆಚರಣೆ ಮಾಡಲಾ ಯಿತು ಪಾಲಿಕೆಯ ಮುಖ್ಯ ಕಚೇರಿಯಲ್ಲಿ ಹಮ್ಮಿ ಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲಿಕೆಯ ಉಪ ಮೇಯರ್ ಸಂತೋಷ ಚೌವ್ಹಾನ್ ಧ್ವಜಾರೋಹಣ ಮಾಡಿದರು.ಇದೇ ವೇಳೆ ಮುಖ್ಯ ಲೆಕ್ಕಾಧಿಕಾರಿಗಳಾದ ಶಂಕರಾನಂದ ಬನಶಂಕರಿ,
ಪಾಲಿಕೆಯ ಸಹಾಯಕ ಆಯುಕ್ತರಾದ ಅರವಿಂದ ಜಮಖಂಡಿ ಸೇರಿದಂತೆ ಪಾಲಿಕೆಯ ಸದಸ್ಯರು ಅಧಿಕಾರಿಗಳು ಸಿಬ್ಬಂದಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.ಉಪಮಹಾಪೌರಾದ ಸಂತೋಷ ಚೌವ್ಹಾನ್ ಧ್ವಜಾರೋಹಣ ನೆರವೇರಿಸಿ ಮಕ್ಕಳಿಗೆ ಸಿಹಿ ಹಂಚಿದರು ಇದರೊಂದಿಗೆ ಪಾಲಿಕೆಯ ಕಚೇರಿಯಲ್ಲೂ ಸ್ವಾತಂತ್ರೋತ್ಸವವನ್ನು ಆಚರಣೆ ಮಾಡಿದ್ದು ಕಂಡು ಬಂದಿತು.
ಪ್ರಮೋದ್ ಕಪಲಿ ಸುದ್ದಿ ಸಂತೆ ನ್ಯೂಸ್ ಧಾರವಾಡ…..