ಹುಬ್ಬಳ್ಳಿ –
ಪೌರ ಕಾರ್ಮಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿದ ಪಾಲಿಕೆಯ CAO – ಸಮಸ್ಯೆಗಳಿಗೆ ಸ್ಪಂದಿಸಿದ ಮುಖ್ಯ ಲೆಕ್ಕಾಧಿಕಾರಿ ಶಂಕರಾನಂದ ಬನಶಂಕರಿ ಯವರಿಗೆ ಸನ್ಮಾನಿಸಿ ಗೌರವಿಸಿದ ಪೌರಕಾರ್ಮಿಕರು ನೌಕರರ ಸಂಘ…..
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರ ಕೆಲವೊಂದಿಷ್ಟು ಸಮಸ್ಯೆ ಮತ್ತು ಬೇಡಿಕೆಗಳ ಕುರಿತಂತೆ ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿ ಶಂಕರಾ ನಂದ ಬನಶಂಕರಿಯವರು ಸ್ಪಂದಿಸಿದ್ದಾರೆ ಹೌದು ಪ್ರಮುಖವಾಗಿ ಪೌರ ಕಾರ್ಮಿಕರಿಗೆ ಪ್ರಮುಖ ಬೇಡಿಕೆ ಯಾಗಿದ್ದ ಪ್ರತಿ ತಿಂಗಳು 5ನೇ ದಿನಾಂಕದ ಒಳಗಾಗಿ ವೇತನ ಮಾಡುವ ಕುರಿತಂತೆ ಬೇಡಿಕೆಯನ್ನು ಇಟ್ಟಿದ್ದ ಪೌರ ಕಾರ್ಮಿಕರ ಮನವಿಯಂತೆ ಸಧ್ಯ 5ನೇ ದಿನಾಂಕದ ಒಳಗಾಗಿ ವೇತನವಾಗುತ್ತಿದೆ.
ಇದರೊಂದಿಗೆ.868 ಮಹಿಳಾ ಪೌರ ಕಾರ್ಮಿಕರಿಗೆ ವೈಧ್ಯಕೀಯ ವಿಶೇಷ ಭತ್ಯೆ ಯನ್ನು ನೀಡಲಾಗುತ್ತಿದ್ದು ಇನ್ನೂ ಈ ಹಿಂದೆ ಜುಲೈ ತಿಂಗಳಿನಲ್ಲಿ ನಡೆದ ಪ್ರತಿಭಟ ನೆಯ ಸಮಯದಲ್ಲಿ 10 ದಿನದ ವೇತನವನ್ನು ನೀಡುವ ಬಗ್ಗೆ ಮನವಿ ಮಾಡಲಾಗಿತ್ತು ಇದನ್ನು ಸಧ್ಯ ನೀಡಲಾ ಗುತ್ತಿದ್ದು ಇದರೊಂದಿಗೆ 126 ಖಾಯಂ ಪೌರ ಕಾರ್ಮಿಕರ ವೇತನವನ್ನು ನೀಡಲಾಗುತ್ತಿದ್ದು
ಇದೇಲ್ಲಾ ಬೇಡಿಕೆಗಳ ಕುರಿತಂತೆ ಸಾಮಾನ್ಯ ಸಭೆಯಲ್ಲಿ ಠರಾವು ಮಾಡಲಾಗಿತ್ತು ಈ ಒಂದು ಬೇಡಿಕೆಗಳನ್ನು ತ್ವರಿತವಾಗಿ ಈಡೇರಿಸಿದ ಹಿನ್ನಲೆಯಲ್ಲಿ ಪಾಲಿಕೆಯ ಮುಖ್ಯ ಲೆಕ್ಕಾಧಿಕಾರಿಯವರಿಗೆ ಪೌರ ಕಾರ್ಮಿಕರು ಮತ್ತು ನೌಕರರ ಸಂಘದಿಂದ ಸನ್ಮಾನಿಸಿ ಗೌರವಿಸಲಾ ಯಿತು.ಹುಬ್ಬಳ್ಳಿಯ ಕಚೇರಿಯಲ್ಲಿ ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡಗಳ ಪೌರಕಾರ್ಮಿಕರು ಮತ್ತು ನೌಕರರ ಸಂಘದ ವತಿಯಿಂದ ಈ ಒಂದು ಸನ್ಮಾನವನ್ನು ಮಾಡಿ ಗೌರವಿಸಲಾಯಿತು.
ಶಾಲು ಹೊದಿಸಿ ಮುತ್ತಿನ ಮಾಲಿ ಹಾಕಿ ಸಿಹಿಯನ್ನು ತಿನ್ನಿಸುವ ಮೂಲಕ ಅಭಿನಂದನೆಗಳನ್ನು ಸಲ್ಲಿಸಿದ ಪೌರ ಕಾರ್ಮಿಕರು ಮತ್ತು ಸಂಘದವರು ಆತ್ಮೀಯವಾಗಿ ಸನ್ಮಾನಿಸಿ ಗೌರವವನ್ನು ಸಲ್ಲಿಸಿದರು. ಈ ಒಂದು ಸಂದರ್ಭದಲ್ಲಿ ವಿಜಯ ಗುಂಟ್ರಾಳ ಜೊತೆ ಗಂಗಮ್ಮ ಸಿದ್ರಾಂಪೂರ,ಗಾಳೆಪ್ಪ ಧ್ವಾಸಲಕೇರಿ,ಅನಿತಾ ಇನಗೊಂಡ,ಮರೆಪ್ಪ ಭೂಕನೆಟ್ಟಿ,ಪಾರವ್ವ ಹೊಸಮನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅಲಿ ಕುಂದಗೋಳ ಜೊತೆ ಪ್ರಮೋದ್ ಕಪಲಿ ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ ಧಾರವಾಡ