ಹುಬ್ಬಳ್ಳಿ –
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಕ್ರಾಂತಿವೀರ ಸಿಂಧೂರ್ ಲಕ್ಷ್ಮಣ ಹುತಾತ್ಮ ದಿನಾಚರಣೆ ಆಚರಣೆ – ಉಪಮೇಯರ್ ಸಂತೋಷ ಚವ್ಹಾನ್ ಗೆ ಸಾಥ್ ನೀಡಿದ ಪಾಲಿಕೆಯ ಅಧಿಕಾರಿಗಳು ಸಿಬ್ಬಂದಿಗಳು….
ಕ್ರಾಂತಿವೀರ ಸಿಂಧೂರ್ ಲಕ್ಷ್ಮಣ್ ಅವರ ಹುತಾತ್ಮ ದಿನಾಚರಣೆಯನ್ನು ಹುಬ್ಬಳ್ಳಿಯಲ್ಲೂ ಆಚರಣೆ ಮಾಡಲಾಯಿತು.ಹೌದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಈ ಒಂದು ದಿನಾಚರಣೆ ಯನ್ನು ಆಚರಿಸಲಾಯಿತು ನಗರದಲ್ಲಿರ ಸಿಂಧೂರ್ ಲಕ್ಷ್ಮಣ ಅವರ ಪ್ರತಿಮೆಗೆ ಉಪ ಮಹಾಪೌರರಾದ ಸಂತೋಷ್ ಚವ್ಹಾಣ್ ಮಹಾಲಾರ್ಪಣೆ ಮಾಡಿದರು.
ಇದರೊಂದಿಗೆ ಹುತಾತ್ಮ ಸಿಂಧೂರ್ ಲಕ್ಷ್ಮಣ ಅವರನ್ನು ನೆನೆಯಲಾಯಿತು ಈ ಒಂದು ಸಂದರ್ಭದಲ್ಲಿ ಪಾಲಿಕೆ ಹಿರಿಯ ಸದಸ್ಯರಾದ ರಾಮಣ್ಣ ಕೃಷ್ಣಪ್ಪ ಬಡಿಗೇರ್ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ಉಮೇಶ್ ಸವಣೂರು ಸಹಾಯಕ ಆಯುಕ್ತಾರಾದ ಚಂದ್ರಶೇಖರ್ ಗೌಡ ಮಾಲಿ ಪಾಟೀಲ್ ಸೇರಿದಂತೆ ಪಾಲಿಕೆಯ ಅಧಿಕಾರಿಗಳು ಸಿಬ್ಬಂದಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……