ಬೆಂಗಳೂರು –
ಬೂದನೂರು ಮಹೇಶ್ ಮಂಡ್ಯ ಅವರಿಗೆ ಸಂಘಟನೆ ಯಲ್ಲಿ ಮಹತ್ವದ ಜವಾಬ್ದಾರಿಯನ್ನು ನೀಡಿದ ಷಡಾಕ್ಷರಿ ಯವರು – ಸಂಘಟನೆಯಲ್ಲಿ ಪ್ರಚಾರ ಮತ್ತು ಸಂಘಟನಾ ಸಮಿತಿಯ ಸದಸ್ಯರಾಗಿ ಬೂದನೂರು ಮಹೇಶ್ ಮಂಡ್ಯ ನೇಮಕ…..
ವೃತ್ತಿಯಲ್ಲಿ ಶಿಕ್ಷಕರಾಗಿ ರಾಜ್ಯ ಸರ್ಕಾರಿ ನೌಕರರ ಸಂಘಟನೆಯ ರಾಜ್ಯಾಧ್ಯಕ್ಷರಾಗಿರುವ ಸಿಎಸ್ ಷಡಾಕ್ಷರಿಯವರ ಅಭಿಮಾನಿ ಸಂಘದ ರಾಜ್ಯ ಸಂಚಾಲಕರಾಗಿ ಕೆಲಸವನ್ನು ಮಾಡುತ್ತಿದ್ದಾರೆ ಬೂದನೂರು ಮಹೇಶ್ ಮಂಡ್ಯ ಅವರು.ಕಳೆದ ಹಲವಾರು ವರ್ಷಗಳಿಂದ ರಾಜ್ಯಾಧ್ಯಕ್ಷರಾಗಿ ಹಗಲಿರುಳು ಕೆಲಸವನ್ನು ಮಾಡುತ್ತಿರುವ ಬೂದನೂರು ಮಹೇಶ್ ಮಂಡ್ಯ ಅವರಿಗೆ ರಾಜ್ಯ ಸರ್ಕಾರಿ ನೌಕರರ ಸಂಘಟನೆಯಲ್ಲಿ ರಾಜ್ಯಾಧ್ಯಕ್ಷರು ಮಹತ್ವದ ಜವಾಬ್ದಾರಿ ಯನ್ನು ನೀಡಿದ್ದಾರೆ

ಹೌದು ಕರ್ನಾಟಕ ರಾಜ್ಯ ಷಡಾಕ್ಷರಿ ಅಭಿಮಾನಿಗಳ ಬಳಗದ ಪ್ರಧಾನ ರಾಜ್ಯ ಸಂಚಾಲಕರಾಗಿರುವ ಬೂದನೂರು ಮಹೇಶ ಮಂಡ್ಯ ರವರನ್ನು ರಾಜ್ಯ ಸರ್ಕಾರಿ ನೌಕರರ ಸಂಘಟನೆಯಪ್ರಚಾರ ಮತ್ತು ಸಂಘಟನಾ ಸಮಿತಿಗೆ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.ಈ ಒಂದು ಕುರಿತಂತೆ ರಾಜ್ಯಾಧ್ಯಕ್ಷರು ನೇಮಕ ಮಾಡಿ ಆದೇಶವನ್ನು ಹೊರಡಿಸಿದ್ದಾರೆ.
ಇದರೊಂದಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ(ರಿ) ಬೆಂಗಳೂರು ರಾಜ್ಯ ಸಂಘಕ್ಕೆ ನೇಮಕ ಮಾಡಿ ಷಡಾಕ್ಷರಿಯವರ ಆಪ್ತರಾಗಿರುವ ಬೂದನೂರು ಮಹೇಶ್ ಮಂಡ್ಯ ಅವರಿಗೆ ಮತ್ತೊಂದು ಮಹತ್ವದ ಜವಾಬ್ದಾರಿಯನ್ನು ನೀಡಿ ಗುರಿತಿಸಲಾಗಿದ್ದು ಇನ್ನೂ ಸರಳ ಸಜ್ಜನಿಕೆಗೆ ಹೆಸರಾಗಿರುವ ಇವರಿಗೆ ಸಧ್ಯ ಸಂಘಟನೆಯಲ್ಲಿ ಮತ್ತೊಂದು ಪ್ರಮುಖವಾದ ಹುದ್ದೆಯನ್ನು ನೀಡಲಾಗಿದ್ದು ಅಭಿನಂದನೆಗಳನ್ನು ಸಲ್ಲಿಸಲಾಗುತ್ತಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..