ಧಾರವಾಡ –
ಸಾರ್ವಜನಿಕರ ಮನವಿಗೆ ಸ್ಪಂದಿಸಿದ ಪಾಲಿಕೆಯ ಸಹಾಯಕ ಆಯುಕ್ತ ಶಂಕರ್ ಪಾಟೀಲ್ – ಸಾರ್ವಜನಿಕರ ಮನವಿ ನೀಡಿದ ಬೆನ್ನಲ್ಲೇ ತುರ್ತಾಗಿ ಸ್ಪಂದಿಸಿ ಸಮಸ್ಯೆ ಪರಿಹಾರಕ್ಕೆ ಸೂಚನೆ…..
ಕಸದ ಸಮಸ್ಯೆ ವಿಚಾರ ಕುರಿತಂತೆ ಸಾರ್ವಜನಿಕರು ನೀಡಿದ ಮನವಿಗೆ ಪಾಲಿಕೆಯ ಅಧಿಕಾರಿಗಳು ಸ್ಪಂದಿಸಿದ್ದಾರೆ.ಹೌದು ಧಾರವಾಡದ ಜನ್ನತ್ ನಗರ ದಲ್ಲಿನ ಚರಂಡಿ ಸಮಸ್ಯೆ ಹಾಗೂ ಕಸ ವಿಲೇವಾರಿ ಸಮಸ್ಯೆಯನ್ನು ಬಗೆಹರಿಸುವಂತೆ ಸೋಷಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ – ಕಮ್ಯುನಿಸ್ಟ್, ಎಸ್.ಯು.ಸಿ.ಐ.(ಸಿ)ಪಕ್ಷದ ಉತ್ತರ ಸ್ಥಳೀಯ ಸಮಿತಿ ವತಿಯಿಂದ ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆಯ 12ನೇ ವಲಯದ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಲಾಗಿತ್ತು.
ಅತ್ತ ಮನವಿಯನ್ನು ಸ್ವೀಕಾರ ಮಾಡುತ್ತಲೇ ಇತ್ತ ಮನವಿಗೆ ಸ್ಪಂದಿಸಿದ ಸಹಾಯಕ ಆಯುಕ್ತ ಶಂಕರ್ ಪಾಟೀಲ್ ರವರು ಸಹಾಯಕ ಅಭಿಯಂತರರು ಹಾಗೂ ಆರೋಗ್ಯ ನಿರೀಕ್ಷಣಾಧಿಕಾರಿಗಳ ಜೊತೆಗೆ ಜನ್ನತ್ ನಗರಕ್ಕೆ ಭೇಟಿ ಮಾಡಿ ಪರಿಶೀಲನೆ ಮಾಡಿದರು.ಇದೇ ವೇಳೆ ಸ್ಥಳ ಪರಿಶೀಲನೆ ಮಾಡಿ ಸಾರ್ವಜನಿಕರ ಸಮಸ್ಯೆ ಗಳನ್ನು ಪರಿಹರಿಸುವ ಭರವಸೆ ನೀಡಿದರು.
ಇದರೊಂದಿಗೆ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ ನೆರವಾಗಿದ್ದು ಕಂಡು ಬಂದಿತು.ಇನ್ನೂ ಪಾಲಿಕೆಯ ಆಯುಕ್ತರು ಕೂಡಾ ಕೆಲಸ ಕಾರ್ಯಗಳಲ್ಲಿ ತುಂಬಾ ವೇಗ ವಾಗಿದ್ದು ಹೀಗಾಗಿ ಕಾರ್ಯಗಳನ್ನು ಕೂಡಾ ಅಧಿಕಾರಿಗಳು ಅಷ್ಟೇ ತೀವ್ರ ಗತಿಯಲ್ಲಿ ಮಾಡ್ತಾ ಇದ್ದಾರೆ ಎಂಬೊದಕ್ಕೆ ಇದೆ ಸಾಕ್ಷಿಯಾಗಿದೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..