ಬೆಂಗಳೂರು –
ಹಳೇ ಪಿಂಚಣಿ ಯೋಜನೆ ಮರು ಜಾರಿ ವಿಳಂಬಕ್ಕೆ ಆಕ್ಷೇಪ ಹೌದು ಹಳೇ ಪಿಂಚಣಿ ಮರು ಜಾರಿಗೆ ವಿಧಾನ ಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಆಶ್ವಾಸನೆ ಯನ್ನು ಕಾಂಗ್ರೆಸ್ ಪಕ್ಷ ನೀಡಿದೆ. ಆದರೆ ಅಧಿಕಾರಕ್ಕೆ ಬಂದು ಎರಡು ವರ್ಷ ಸಮೀಪಿಸುತ್ತಿದ್ದರೂ ಭರವಸೆ ಯಲ್ಲೇ ಕಾಲಹರಣ ಮಾಡುತ್ತಿದೆ ಎಂದು ರಾಜ್ಯ ಎನ್‌ಪಿಎಸ್ ನೌಕರ ವೃಂದ ಆಕ್ಷೇಪಿಸಿದೆ.ಕೇಂದ್ರ ಸರ್ಕಾರ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್)ಯನ್ನು ಏ.1ರಿಂದ ಜಾರಿ ತಂದಿರುವುದನ್ನು ಎನ್‌ಪಿಎಸ್ ನೌಕರರು ವಿರೋಧಿಸಿದ್ದಾರೆ. ಕೈಗೆ ಕಪ್ಪುಪಟ್ಟಿ ಧರಿಸಿ ಕರ್ತವ್ಯಕ್ಕೆ ಹಾಜರಾಗುವ ಮೂಲಕ ಕರಾಳ ದಿನ ಆಚರಿಸಿದರು.
ಹಳೇ ಪಿಂಚಣಿ ಯೋಜನೆ (ಒಪಿಎಸ್)ಯನ್ನು ರದ್ದುಪಡಿಸಿ 2004ರ ಏ.1ರಿಂದ ಹೊಸ ಪಿಂಚಣಿ ಯೋಜನೆ ಜಾರಿಗೊಳಿಸಿತ್ತು. 21 ವರ್ಷಗಳ ಬಳಿಕ ಎನ್‌ಪಿಎಸ್ ಕೈಬಿಟ್ಟು, ಯುಪಿಎಸ್ ಜಾರಿಗೊಳಿಸಿ ಆಯಾ ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟಿದ್ದು, ಜೂನ್‌ವರೆಗೆ ಗಡುವು ವಿಧಿಸಿದೆ.
ನೌಕರರು ಮತ್ತು ಅವಲಂಬಿತ ಕುಟುಂಬ ಸದಸ್ಯರನ್ನು ಅಭದ್ರತೆಗೆ ದೂಡುವ ಎನ್‌ಪಿಎಸ್ ಹಾಗೂ ಯುಪಿಎಸ್ ಎರಡನ್ನೂ ವಿರೋಧಿಸುತ್ತಿದ್ದೇವೆ. ಆದಷ್ಟು ಬೇಗ ಒಪಿಎಸ್ ಜಾರಿಗೊಳಿಸಿ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷ ಕೊಟ್ಟ ಮಾತು ಉಳಿಸಿಕೊಳ್ಳಬೇಕು ಎಂದು 2.45 ಲಕ್ಷ ಎನ್‌ಪಿಎಸ್ ನೌಕರರು ಒತ್ತಾಯಿಸಿದ್ದಾರೆ.
ಹಳೇ ಪಿಂಚಣಿ ಯೋಜನೆ ಮರು ಜಾರಿ ವಿಚಾರದಲ್ಲಿ ಸಕಾರಾತ್ಮಕವಾಗಿದೆ. ವಿಶ್ವಾಸವಿಡಿ ಎಂದು ಸಿಎಂ, ಡಿಸಿಎಂ. ಸಚಿವರು ಪುನರುಚ್ಚರಿಸುತ್ತಲಿದ್ದಾರೆ. ಸಿಎಂ ಸಿದ್ದರಾಮಯ್ಯ 2025-26ನೇ ಸಾಲಿನ ಬಜೆಟ್‌ನಲ್ಲಿ ಪ್ರಸ್ತಾಪಿಸಲಿದ್ದಾರೆ ಎಂಬ ನಿರೀಕ್ಷೆಯೂ ಹುಸಿಯಾಗಿದೆ.
ಎನ್‌ಪಿಎಸ್ ಬೇಡ, ಒಪಿಎಸ್ ಬೇಕು ಎಂಬ ಒಂದಂಶದ ಬೇಡಿಕೆಯಿಟ್ಟುಕೊಂಡು ಧರಣಿ ನಡೆಸಲಾಗಿತ್ತು. ಈ ವೇಳೆ ಬೇಡಿಕೆ ಈಡೇರಿಸುವ ಭರವಸೆಯನ್ನು ಕೂಡಾ ನೀಡಲಾಗಿತ್ತು.ನಂತರವೂ ಅನಾರೋಗ್ಯ ಕಾರಣಕ್ಕೆ ಸಭೆ ಕರೆಯಲು ಸಾಧ್ಯವಾಗಿಲ್ಲ. ಏಪ್ರಿಲ್‌ನಲ್ಲೇ ಸಭೆ ಕರೆದು ಚರ್ಚಿಸುವೆ ಎಂಬ ಸಂದೇಶವನ್ನು ಸಿದ್ದರಾಮಯ್ಯ ಖುದ್ದು ರವಾನಿಸಿದ್ದಾರೆ. ಒಪಿಎಸ್ ಜಾರಿಗೆ ಕಾಲಮಿತಿ ನಿಗದಿಪಡಿಸಿ ಬದ್ಧತೆ ಪ್ರಕಟಿಸಲಿ ಎಂದು ಎನ್‌ಪಿಎಸ್ ನೌಕರ ವರ್ಗ ಆಗ್ರಹಿಸಿದೆ.
ಸಿಎಂ ವಾಗ್ದಾನದ ಮೇಲೆ ನಂಬಿಕೆಯಿಟ್ಟು ಕಾಯು ತ್ತಿದ್ದೇವೆ. ಆದಷ್ಟು ಬೇಗ ಸಭೆ ಕರೆದು ಚರ್ಚಿಸಿ ಸರ್ಕಾರ ತನ್ನ ನಿರ್ಧಾರವನ್ನು ಸ್ಪಷ್ಟಪಡಿಸಬೇಕು ಎಂದು ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ಅಧ್ಯಕ್ಷ ಶಾಂತರಾಮ ತೇಜ ಕೋರಿದ್ದು ಏನಾಗಲಿ ಎಂಬೊಂದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು……