ಹುಬ್ಬಳ್ಳಿ –
ಪೌರಕಾರ್ಮಿಕರಿಗಾಗಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ರಕ್ತದಾನ ಮಾಡಿದ ಸುರೇಶ ಗೋಕಾಕ – ಪ್ರತಿನಿತ್ಯ ನಗರವನ್ನು ಸ್ವಚ್ಚಗೊಳಿಸುವ ಕಾರ್ಮಿಕರಿಗಾಗಿ ಸೇವೆ ಮಾಡಿದ ಸುರೇಶ ಗೋಕಾಕ ಟೀಮ್…..
ಸದಾ ಒಂದಿಲ್ಲೊಂದು ವಿಶೇಷ ಕಾರ್ಯಗಳ ಮೂಲಕ ಸಮಾಜ ಸೇವೆಯನ್ನು ಮಾಡುತ್ತಿರುವ ಹುಬ್ಬಳ್ಳಿಯ ಸುರೇಶ ಗೋಕಾಕ ಸಧ್ಯ ಮತ್ತೊಂದು ಮಹಾನ್ ಕಾರ್ಯದ ಮೂಲಕ ಮಾದರಿಯಾಗಿದ್ದಾರೆ.ಹೌದು ರಾಷ್ಟ್ರೋತ್ಥಾನದ ರಕ್ತದಾನ ಕೇಂದ್ರದಲ್ಲಿ ಈ ಒಂದು ರಕ್ತದಾನವನ್ನು ಮಾಡಲಾಯಿತು.ದಿನ ಬೆಳಗಾದರೆ ಸಾಕು ಸಮಾಜದಲ್ಲಿ ಪ್ರತಿನಿತ್ಯ ದುಡಿಯುವಂತ ನಾಡಿನ ಪೌರಕಾರ್ಮಿಕರ ಕುಟುಂಬ ಆರೋಗ್ಯವಾಗಿರಲಿ ಅಂದುಕೊಂಡು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದಿಂದ ಪೌರಕಾರ್ಮಿಕರ ಹೆಸರಿನಲ್ಲಿ ಸಂಘಟನೆಯ ಸಂಸ್ಥಾಪಕರಾಗಿರುವ ಸುರೇಶ ಗೋಕಾಕ ಅವರು ರಕ್ತದಾನವನ್ನು ಮಾಡಿದರು.
ಸುರೇಶ ಗೋಕಾಕ ಅವರೊಂದಿಗೆ ರಾಮಚಂದ್ರ ದಳವಿ ಕೂಡಾ ರಕ್ತದಾನವನ್ನು ಮಾಡಿದರು.ಇನ್ನೂ ಇದರೊಂ ದಿಗೆ ಮತ್ತೊಂದು ವಿಶೇಷವಾದ ಸಾಮಾಜಿಕ ಕಾಳಜಿಯ ಕಾರ್ಯವನ್ನು ಸುರೇಶ ಗೋಕಾಕ ಅವರು ಮಾಡಿದರು. ಈ ಒಂದ ಸಂದರ್ಭದಲ್ಲಿ ಬಸುರಾಜ ರೆಡ್ಡಿ,ಪಕ್ರೇಶ ದೇವನೂರ,ನವೀನ ಚಿಕ್ಕಮಠ,ವಿನೋದ ಹರಿಜನ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……